Site icon Vistara News

Anushka Shetty: ಅನುಷ್ಕಾ ಶೆಟ್ಟಿ ಅಭಿನಯದ ʻಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿʼ ಪೋಸ್ಟರ್‌ ರಿವೀಲ್‌!

Anushka Shetty Miss Shetty Mr Polishetty Poster Out

ಬೆಂಗಳೂರು: ನಿರ್ದೇಶಕ ಮಹೇಶ್ ಬಾಬು ಪಿ ಅವರ ʻಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿʼ (Miss Shetty Mr Polishetty) ಎಂಬ ಚಿತ್ರದಲ್ಲಿ ಅನುಷ್ಕಾ ಶೆಟ್ಟಿ (Anushka Shetty) ಮತ್ತು ನವೀನ್ ಪೋಲಿಶೆಟ್ಟಿ (Naveen Polishetty) ಒಟ್ಟಿಗೆ ತೆರೆ ಮೇಲೆ ಬರುತ್ತಿದ್ದಾರೆ. ಚಿತ್ರದ ಮೊದಲ ಪೋಸ್ಟರ್ ಅನ್ನು ಚಿತ್ರತಂಡ ಮಾರ್ಚ್‌ 1ರಂದು ಅನಾವರಣಗೊಳಿಸಲಾಗಿದ್ದು, ಸಮಕಾಲೀನ ಪ್ರೇಮಕಥೆಯನ್ನು ಒಳಗೊಂಡಂತೆ ಕಾಣುತ್ತಿದೆ.

ಅನುಷ್ಕಾ ಲಂಡನ್‌ನಲ್ಲಿ ವಾಸಿಸುತ್ತಿದ್ದಾರೆ ಎಂದು ತೋರಿಸಲಾಗಿದೆ. ಪೋಸ್ಟರ್‌ನಲ್ಲಿ ‘ಹ್ಯಾಪಿ ಸಿಂಗಲ್’ ಎಂದು ಬರೆದಿರುವ ಪುಸ್ತಕವಿದೆ, ಆದರೆ ನವೀನ್ ಪಾತ್ರ ಹೈದರಾಬಾದ್‌ನ ತಮಾಷೆಯ ಹುಡುಗನಂತೆ ಕಾಣುತ್ತದೆ. ನವೀನ್ ಸ್ವೆಟ್ ಶರ್ಟ್ ಧರಿಸಿದ್ದು, ಅದರ ಮೇಲೆ ‘ರೆಡಿ ಟು ಮಿಂಗಲ್’ ಎಂದು ಬರೆಯಲಾಗಿದೆ.

ʻಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿʼ ಅಧಿಕೃತ ಪೋಸ್ಟರ್‌ ಅನ್ನು ಪ್ರೊಡಕ್ಷನ್ ಹೌಸ್ ಯುವಿ ಕ್ರಿಯೇಷನ್ಸ್ ಪ್ರಕಟಣೆ ಹೊರಡಿಸಿದೆ. “ನಮ್ಮ ಅತ್ಯಂತ ಮೆಚ್ಚಿನ ಕಾಂಬೊವನ್ನು ಪರಿಚಯಿಸುತ್ತಿದ್ದೇವೆ. ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ ನಿಮಗಾಗಿ. ಈ ಬೇಸಿಗೆಯಲ್ಲಿ ಮನರಂಜನೆಯ ರೋಲರ್‌ಕೋಸ್ಟರ್ ಸವಾರಿಗೆ ಸಿದ್ಧರಾಗಿʼʼಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ; Anushka Shetty: ಬೆಂಗಳೂರಿನಲ್ಲಿ ದೇವಸ್ಥಾನಕ್ಕೆ ಭೇಟಿ ಕೊಟ್ಟ ಅನುಷ್ಕಾ ಶೆಟ್ಟಿ: ತೂಕ ಇಳಿಸಿಕೊಳ್ಳಿ ಎಂದ ನೆಟ್ಟಿಗರು

ಚಿತ್ರದಲ್ಲಿ ಅನುಷ್ಕಾ ಶೆಟ್ಟಿ ಬಾಣಸಿಗ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂದು ಊಹಿಸಲಾಗಿದೆ. ಆದರೆ, ಚಿತ್ರದ ಬಗ್ಗೆ ಹೆಚ್ಚಿನ ವಿವರಗಳು ಇನ್ನಷ್ಟೇ ಬಹಿರಂಗವಾಗಬೇಕಿದೆ. ಈ ವರ್ಷವೇ ಚಿತ್ರ ಬಿಡುಗಡೆಯಾಗಲಿದ್ದು, ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ.

ಇದನ್ನೂ ಓದಿ: Anushka Shetty: ಅನುಷ್ಕಾ ಶೆಟ್ಟಿ ಹೆಸರಿನಲ್ಲಿ ನಿರ್ಮಾಪಕರಿಂದ 51 ಲಕ್ಷ ರೂ. ಪೀಕಿದ ಆಸಾಮಿ!

ಇದೀಗ 3 ವರ್ಷಗಳ ನಂತರ ಮತ್ತೆ ತೆರೆಯ ಮೇಲೆ ಅಬ್ಬರಿಸಲು ಸ್ವೀಟಿ ಅನುಷ್ಕಾ ರೆಡಿಯಾಗಿದ್ದಾರೆ. ಅವರು ಕಡೆಯದಾಗಿ 2020ರಲ್ಲಿ `ನಿಶಬ್ಧಂ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಈಗ ನವೀನ್ ಪೋಲಿಶೆಟ್ಟಿ ಜೊತೆಗಿನ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಅನುಷ್ಕಾ ಶೆಟ್ಟಿ ಪದಾರ್ಪಣೆ ಮಾಡುತ್ತಿದ್ದಾರೆ.

Exit mobile version