ಬೆಂಗಳೂರು: ಸ್ವೀಟಿ ಎಂದೇ ಖ್ಯಾತಿ ಪಡೆದಿರುವ ಅನುಷ್ಕಾ ಶೆಟ್ಟಿ (Anushka Shetty) ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಮಹಾಶಿವರಾತ್ರಿಯ ದಿನ ಪೋಷಕರೊಂದಿಗೆ ದೇವಸ್ಥಾನಕ್ಕೆ ತೆರಳಿದ್ದರು. ದೇವಸ್ಥಾನದಲ್ಲಿ ಇರಿವ ಅನುಷ್ಕಾ ಅವರ ವಿಡಿಯೊ ಹೊರಬಿದ್ದ ತಕ್ಷಣ, ಸಾಮಾಜಿಕ ಮಾಧ್ಯಮದಲ್ಲಿ ನೆಟ್ಟಿಗರು ನಟಿಯನ್ನು ಟ್ರೋಲ್ ಮಾಡಲು ಶುರು ಮಾಡಿದ್ದಾರೆ. ನಟಿ ಇತ್ತೀಚಿನ ದಿನಗಳಲ್ಲಿ ತೂಕವನ್ನು ಹೆಚ್ಚಿಸಿಕೊಂಡಿದ್ದಾರೆ ಮತ್ತು ಹೆಚ್ಚಿನ ಚಿತ್ರಗಳಲ್ಲಿ ಕೆಲಸ ಮಾಡಿಲ್ಲ ಎಂದು ಮನಬಂದಂತೆ ಕಮೆಂಟ್ ಮಾಡುತ್ತಿದ್ದಾರೆ.
ʻಸೈಜ್ ಝೀರೋʼ ಚಿತ್ರಕ್ಕಾಗಿ ಅವರು ಮಾಡಿಕೊಂಡಿದ್ದ ಹೆಚ್ಚಿನ ತೂಕವೇ ಸಮಸ್ಯೆಗೆ ಕಾರಣ ಎಂದು ಕೆಲವರು ಹೇಳಿದರೆ, ಇನ್ನು ಕೆಲವರು ನಟಿಗೆ ಆರೋಗ್ಯ ಸಮಸ್ಯೆಗಳಿದ್ದು, ಹೆಚ್ಚಾದ ತೂಕವನ್ನು ಇಳಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳುತ್ತಿದ್ದಾರೆ. ಕಾರಣ ಏನೇ ಇದ್ದರೂ ನೆಟ್ಟಗರ ಟ್ವೀಟ್‌ಗಳು ಹೀಗಿವೆ!
ಅನುಷ್ಕಾ ಫ್ಯಾನ್ ಪೇಜ್‌ವೊಂದು ಟ್ವೀಟ್ ಮಾಡಿ ʻʻನಿಮ್ಮನ್ನು ನೋಡಿ ತುಂಬ ದುಃಖವಾಯ್ತು. ಸ್ವೀಟಿ ದಯವಿಟ್ಟು ಸ್ಲಿಮ್ ಆಗಿ.ನಿಮ್ಮ ಹೆಚ್ಚಿನ ಚಲನಚಿತ್ರಗಳನ್ನು ನೋಡಲು ನಾವು ಬಯಸುತ್ತೇವೆʼʼಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Anushka Shetty: ಅನುಷ್ಕಾ ಶೆಟ್ಟಿ ಹೆಸರಿನಲ್ಲಿ ನಿರ್ಮಾಪಕರಿಂದ 51 ಲಕ್ಷ ರೂ. ಪೀಕಿದ ಆಸಾಮಿ!
ಫ್ಯಾನ್ ಪೇಜ್ ಟ್ವೀಟ್
ʻʻನನಗೆ ನೆನಪಿದೆ ರಾಧೆಶ್ಯಾಮ್ ಪ್ರಚಾರದ ಸಮಯದಲ್ಲಿ ಪ್ರಭಾಸ್ ಅವರ ಚಬ್ಬಿ ಲುಕ್‌ಗಾಗಿ ಟೀಕಿಗೆ ಗುರಿಯಾದರು. ಆದರೆ ನಂತರ ಅವರು ಸ್ವಲ್ಪ ತೂಕವನ್ನು ಕಡಿಮೆ ಮಾಡಿಕೊಂಡರು. ಅನುಷ್ಕಾ ಶೆಟ್ಟಿ ಇದೀಗ ಅವರ ಅದೇ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ನನಗೆ ಅವರ ಆರೋಗ್ಯ ಮತ್ತು ಸಂತೋಷವು ಹೆಚ್ಚು ಮುಖ್ಯವಾಗಿದೆʼʼಎಂದು ಇನ್ನೊಬ್ಬರು ಟ್ವೀಟ್ ಮಾಡಿದ್ದಾರೆ.
ಟ್ವೀಟ್ ಇಲ್ಲಿದೆ
ಇದನ್ನೂ ಓದಿ: Anushka Shetty | ಪುತ್ತೂರಲ್ಲಿ ಭೂತಕೋಲ ವೀಕ್ಷಿಸಿದ ನಟಿ ಅನುಷ್ಕಾ ಶೆಟ್ಟಿ; ವಿಡಿಯೊ ವೈರಲ್
ಅನುಷ್ಕಾ ಸಾರ್ವಜನಿಕವಾಗಿ ಕೆಲವೇ ಕೆಲವು ಬಾರಿ ಕಾಣಿಸಿಕೊಳ್ಳುತ್ತಿದ್ದಾರೆ. ಅನುಷ್ಕಾ ಅವರು ಈ ಹಿಂದೆ ಕೆಲಸ ಮಾಡಿದ ತಮಿಳು ನಿರ್ದೇಶಕ ಎಎಲ್ ವಿಜಯ್ ಅವರೊಂದಿಗೆ ಚಿತ್ರಕ್ಕೆ ಸಹಿ ಹಾಕಿದ್ದಾರೆ ಎಂದು ವರದಿಯಾಗಿದೆ. ಇದು ಅನುಷ್ಕಾ ಶೆಟ್ಟಿಯ 49ನೇ ಚಿತ್ರ. ಅವರು ನವೀನ್ ಪೋಲಿ ಶೆಟ್ಟಿಯವರೊಂದಿಗೆ ತೆಲುಗಿನಲ್ಲಿ ಒಂದು ಚಿತ್ರವನ್ನು ಪೂರ್ಣಗೊಳಿಸಿದ್ದಾರೆ, ಅಲ್ಲಿ ಅವರು ಬಾಣಸಿಗರಾಗಿ ನಟಿಸಿದ್ದಾರೆ.