ಯೋಗಾನಂದ್ ಚಂದ್ರಯ್ಯ ಬೆಂಗಳೂರು
ಅಂದು ಸದಾಶಿವನಗರ ದಲ್ಲಿನ ನಮ್ಮ ಆಫೀಸಿನಲ್ಲಿ ಪವರ್ ಕಟ್ ಸಮಸ್ಯೆ ಇದ್ದ ಕಾರಣ ನಾನು ನನ್ನ ಕೊಲಿಗ್ ವಾಕಿಂಗ್ ಹೋಗಲು ತೀರ್ಮಾನಿಸಿದೆವು. ಈ ಮೊದಲು ನನ್ನ ಕೊಲಿಗ್ ಅಣ್ಣಾವ್ರ ಮನೆ ನೋಡಿಲ್ಲದ ಕಾರಣ, ಮನೆ ತೋರಿಸುವ ನೆಪ ಅಣ್ಣಾವ್ರ ಮನೆ ದಾರಿಯಲ್ಲಿ ತೆರಳಿದೆವು. ಇನ್ನೇನು ಮನೆ ಮುಂದೆ ಬರುತ್ತಿದ್ದ ಹಾಗೆ ಗೇಟಿನ ಬಾಗಿಲು ತೆಗೆದುಕೊಂಡವು. ಅಪ್ಪು ಸರ್ ಅವರ ಬಿಳಿ ಫೋರ್ಡ್ ಕಾರನ್ನು ತಾವೇ ಚಲಾಯಿಸಿಕೊಂಡು ಹೂರ ಬಂದರು. ನಮ್ಮನ್ನು ಗಮನಿಸಿದ ಅವರು ಕಾರು ನಿಲ್ಲಿಸಿದರು. ಅಂದು ನಾನು ಅನಿರೀಕ್ಷಿತವಾಗಿ ಅಣ್ಣಾವ್ರ ಚಿತ್ರವಿರುವ ಟೀ ಶರ್ಟ್ ಧರಿಸಿದ್ದೆ. ಅದನ್ನು ಕಂಡು “ನಿಮ್ಮ ಟೀ ಶರ್ಟ್ ತುಂಬ ಚೆನ್ನಾಗಿದೆ. ಥ್ಯಾಂಕ್ಸ್ ಫಾರ್ ವೇರಿಂಗ್ ಇಟ್ ” ಅಂತ ಹೇಳಿದರು. ನಾವು ಅವರ ಜೊತೆಗೊಂದು ಫೋಟೋ ಕೇಳಿದ್ದಕ್ಕೆ ಕ್ಷಮಿಸಿ ಈಗ ಬ್ಯುಸಿ ಇದ್ದೀನಿ, ಮತ್ತೊಮೆ ಸಿಗೋಣ ಅಂತ ಹೇಳಿ ತೆರಳಿದರು. ಸ್ಟಾರ್ ನಟ ಅಪ್ಪು ಸರ್ ಅವರ ಸರಳತೆ, ಸಹಜ ನಗು ಮತ್ತು ಅವರ ಪಾಸಿಟಿವ್ ನೇಚರ್ ಕಂಡು ಬೆರಗಾಗಿದ್ದೆವು. ಆಕಸ್ಮಿಕವಾಗಿ ಅಂದು ಆದ ಅದ್ಭುತ ಭೇಟಿ ಇಂದಿಗೂ ಅಚ್ಚ ಹಸಿರಾಗಿ ನನ್ನ ಮನಸ್ಸಿನಲ್ಲಿ ಜೀವಂತವಾಗಿ ಉಳಿದಿದೆ.