ಬೆಂಗಳೂರು: ಎ ಆರ್ ರೆಹಮಾನ್ (AR Rahman) ಅವರ ಪುತ್ರ ಎ ಆರ್ ಅಮೀನ್ (AR Ameen ) ಶೂಟಿಂಗ್ ಸೆಟ್‌ನಲ್ಲಿ ಗಾಯನ ಪ್ರದರ್ಶನ ನೀಡುತ್ತಿದ್ದ ವೇದಿಕೆಯ ಮೇಲೆ ಶ್ಯಾಂಡಲಿಯರ್ (chandeliers) ಕುಸಿದು ಬಿದ್ದು ಅಪಘಾತದಿಂದ ಪಾರಾಗಿದ್ದಾರೆ. ಅಮೀನ್ ಈ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಫೋಟೊವನ್ನು ಹಂಚಿಕೊಂಡು ನಡೆದ ಘಟನೆ ಬಗ್ಗೆ ಹೇಳಿಕೊಂಡಿದ್ದಾರೆ. ತನ್ನ ಜೀವವನ್ನು ಉಳಿಸಿದ್ದಕ್ಕಾಗಿ ದೇವರಿಗೆ ಧನ್ಯವಾದ ಸೂಚಿಸಿದ್ದಾರೆ.
ʻಓಕೆ ಕಣ್ಮಣಿʼ ಚಿತ್ರದ ಮೂಲಕ ಹಿನ್ನೆಲೆ ಗಾಯಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಎಆರ್ ಅಮೀನ್ ಅವರು ಸಚಿನ್: ಎ ಬಿಲಿಯನ್ ಡ್ರೀಮ್ಸ್, 2.0 ಮತ್ತು ಹೆಚ್ಚಿನ ಚಿತ್ರಗಳಲ್ಲಿ ಹಾಡಿದ್ದಾರೆ. ಇವುಗಳೆಲ್ಲವೂ ಎಆರ್ ರೆಹಮಾನ್ ಅವರ ಸಂಗೀತ ಸಂಯೋಜನೆಯಾಗಿದೆ. ಇತ್ತೀಚೆಗೆ, ಹಾಡಿನ ಚಿತ್ರೀಕರಣದ ಸಮಯದಲ್ಲಿ, ಕ್ರೇನ್ ಆಯತಪ್ಪಿ ಬಿದ್ದಿದ್ದು, ಶ್ಯಾಂಡಲಿಯರ್ ವೇದಿಕೆ ಮಧ್ಯ ಭಾಗದಲ್ಲಿ ಬಿದ್ದಿದೆ. ಹಾಡಿನ ಚಿತ್ರೀಕರಣದ ಸಂದರ್ಭದಲ್ಲಿ ಕೂದುಲೆಳೆ ಅಂತರದಲ್ಲಿ ಪಾರಾಗಿರುವುದಾಗಿ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Grammy awards 2023: ಯಾರು ಈ ರಿಕ್ಕಿ ಕೇಜ್? ಕನ್ನಡಿಗನ ವಿವರ ಇಲ್ಲಿದೆ ನೋಡಿ, ಅವರ ಮ್ಯೂಸಿಕ್ ಇಲ್ಲಿ ಕೇಳಿ
ಎಆರ್ ಅಮೀನ್ ಪೋಸ್ಟ್
ಇನ್‌ಸ್ಟಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದು ʻʻನಾನು ಇಂದು ಸುರಕ್ಷಿತವಾಗಿ ಮತ್ತು ಜೀವಂತವಾಗಿರುವುದಕ್ಕೆ ದೇವರು, ನನ್ನ ಪೋಷಕರು, ಕುಟುಂಬ, ಹಿತೈಷಿಗಳು ಮತ್ತು ನನ್ನ ಆಧ್ಯಾತ್ಮಿಕ ಶಿಕ್ಷಕರ ಆಶೀರ್ವಾದ. ಕೇವಲ ಮೂರು ರಾತ್ರಿಗಳ ಹಿಂದೆ, ನಾನು ಒಂದು ಹಾಡಿನ ಚಿತ್ರೀಕರಣದಲ್ಲಿದ್ದೆ ಮತ್ತು ನಾನು ಕ್ಯಾಮೆರಾ ಮುಂದೆ ಪ್ರದರ್ಶನ ನೀಡುತ್ತಿರುವಾಗ, ಸುರಕ್ಷತೆಯ ಬಗ್ಗೆ ತಂಡವು ಕಾಳಜಿ ವಹಿಸಿದೆ ಎಂದು ನಾನು ನಂಬಿದ್ದೆ. ನಾನು ವೇದಿಕೆ ಮಧ್ಯದಲ್ಲಿದ್ದಾಗ ಕ್ರೇನ್‌ನಿಂದ ಶ್ಯಾಂಡಲಿಯರ್ ವೇದಿಕೆ ಮಧ್ಯ ಭಾಗದಲ್ಲಿ ಬಿದ್ದಿದೆ. ಅಲ್ಲೊಂದು ಇಲ್ಲೊಂದು ಇಂಚು ಇದ್ದಿದ್ದರೆ, ಕೆಲವು ಸೆಕೆಂಡ್‌ಗಳ ಮುಂಚೆಯೋ ಅಥವಾ ತಡವಾಗಿಯೋ ಆಗಿದ್ದರೆ ಇಡೀ ರಿಗ್ ನಮ್ಮ ತಲೆಯ ಮೇಲೆ ಬೀಳುತ್ತಿತ್ತು. ನನ್ನ ತಂಡ ಮತ್ತು ನಾನು ಆಘಾತಕ್ಕೊಳಗಾಗಿದ್ದೇವೆ ಮತ್ತು ಆಘಾತದಿಂದ ಚೇತರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ”ಎಂದು ಬರೆದುಕೊಂಡಿದ್ದಾರೆ.