Site icon Vistara News

Arbaaz Khan: ಮೇಕಪ್ ಆರ್ಟಿಸ್ಟ್‌ ಜತೆ ಮಲೈಕಾ ಮಾಜಿ ಪತಿಯ ಅದ್ಧೂರಿ ಮದುವೆ!

Arbaaz Khan with Shura Khan

ಬೆಂಗಳೂರು: ಸಲ್ಮಾನ್‌ ಖಾನ್‌ ಸಹೋದರ, ಮಲೈಕಾ ಅರೋರಾ ಮಾಜಿ ಪತಿ ಬಾಲಿವುಡ್ ನಟ ಅರ್ಬಾಜ್ ಖಾನ್ (Arbaaz Khan) ಅವರು ಮೇಕಪ್ ಆರ್ಟಿಸ್ಟ್‌ ಶುರಾ ಖಾನ್ ಜತೆ ಡಿಸೆಂಬರ್ 24ರಂದು ವಿವಾಹವಾಗಲಿದ್ದಾರೆ. ಮುಂಬೈನಲ್ಲಿ ವಿವಾಹ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಲಿದೆ ಎನ್ನಲಾಗಿದೆ. ಕುಟುಂಬದವರು ಹಾಗೂ ಸ್ನೇಹಿತರು ಮಾತ್ರ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ.

ಅರ್ಬಾಜ್ ಖಾನ್ ತಮ್ಮ ಸ್ವಂತ ನಿರ್ಮಾಣ ಸಂಸ್ಥೆಯ ಅಡಿಯಲ್ಲಿ ʻಪಟನಾ ಶುಕ್ಲಾʼ ಸಿನಿಮಾ ನಿರ್ಮಿಸಿದ್ದರು. ಈ ವೇಳೆ ವೇಳೆ ಶುರಾ ಖಾನ್ ಅವರ ಪರಿಚಯ ನಟನಿಗೆ ಆಗಿತ್ತು. ಸ್ನೇಹ ಪ್ರೀತಿಗೆ ತಿರುಗಿ, ಇದೀಗ ಜೋಡಿ ಸಪ್ತಪದಿ ತುಳಿಯಲು ಸಜ್ಜಾಗಿದೆ. ಮಲೈಕಾ ಅರೋರಾ ಮತ್ತು ನಟ ಅರ್ಬಾಜ್ 1998ರಲ್ಲಿ ಮದುವೆ ಆಗಿದ್ದರು. 2017ರಲ್ಲಿ ನಟಿ ವಿಚ್ಛೇದನ ಪಡೆದರು. ಮಲೈಕಾ ಅರೋರಾ ಮತ್ತು ಅರ್ಬಾಜ್ ಖಾನ್ ವಿಚ್ಛೇದನ ಪಡೆದಿದ್ದರೂ ಕೂಡ ಮಗ ಅರ್ಹಾನ್‌ನೊಂದಿಗೆ ಸಮಯ ಕಳೆಯುತ್ತಿದ್ದಾರೆ. ಮಗನಿಗೋಸ್ಕರವಾಗಿ ಆಗಾಗ ಇಬ್ಬರೂ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುತ್ತಾರೆ.

ಈ ಮುಂಚೆ ತಮ್ಮ ಸ್ವಂತ ನಿರ್ಮಾಣ ಸಂಸ್ಥೆಯ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ʻಪಟನಾ ಶುಕ್ಲಾʼ ಚಿತ್ರದ ಚಿತ್ರೀಕರಣವನ್ನು ಅರ್ಬಾಜ್ ಪ್ರಾರಂಭಿಸಿದ್ದಾಗ ಮಾಜಿ ಪತ್ನಿ ಮಲೈಕಾ ಅರೋರಾ ಮತ್ತು ಗರ್ಲ್‌ ಫ್ರೆಂಡ್‌ ಜಾರ್ಜಿಯಾ ಆಂಡ್ರಿಯಾನಿ ಈ ಬಗ್ಗೆ ಶುಭ ಹಾರೈಸಿದ್ದರು. ʻಪಟನಾ ಶುಕ್ಲಾʼ ಚಿತ್ರದಲ್ಲಿ ರವೀನಾ ಟಂಡನ್, ಸತೀಶ್ ಕೌಶಿಕ್, ಮಾನವ್ ವಿಜ್, ಚಂದನ್ ರಾಯ್ ಸನ್ಯಾಲ್ ಮತ್ತು ಅನುಷ್ಕಾ ಕೌಶಿಕ್ ನಟಿಸಲಿದ್ದಾರೆ ಎಂದು ಚಿತ್ರತಂಡ ಹೇಳಿಕೊಂಡಿತ್ತು.

ಇದನ್ನೂ ಓದಿ: Malaika Arora | ಮಾಜಿ ಪತಿ ಅರ್ಬಾಜ್ ಖಾನ್‌ಗೆ ನಟಿ ಮಲೈಕಾ ಅರೋರಾ ವಿಶ್‌ ಮಾಡಿದ್ದೇನು?

ಶುರಾ ಖಾನ್ ಯಾರು?

ಶುರಾ ಬಾಲಿವುಡ್ ಮೇಕಪ್ ಆರ್ಟಿಸ್ಟ್‌. ರವೀನಾ ಟಂಡನ್ ಮತ್ತು ಅವರ ಮಗಳು ರಾಶಾ ಥಡಾನಿ ಜತೆ ಹೆಚ್ಚಾಗಿ ಕೆಲಸ ಮಾಡಿದ್ದಾರೆ.

ಸದ್ಯದಲ್ಲೇ ಮಲೈಕಾ ಮದುವೆ!
ಈಗಾಗಲೇ ಅರ್ಜುನ್‌ ಮತ್ತು ಮಲೈಕಾ ಜತೆಗೆ ವಾಸವಿದ್ದು, ಮದುವೆಯಷ್ಟೇ ಆಗಬೇಕಿದೆ. ಅರ್ಜುನ್‌ ಕಪೂರ್‌ಗೆ ವಯಸ್ಸು 38. ಮಲೈಕಾಗೆ 49. ಅರ್ಜುನ್ ಮತ್ತು ಮಲೈಕಾ ಸುಮಾರು 5 ವರ್ಷಗಳಿಂದ ಸಂಬಂಧದಲ್ಲಿದ್ದಾರೆ. ಇಬ್ಬರೂ ಪರಸ್ಪರ ಚೆನ್ನಾಗಿದ್ದಾರೆ.ಮಲೈಕಾ ಮತ್ತು ಅರ್ಜುನ್ ಹಲವು ವರ್ಷಗಳಿಂದ ಪ್ರೀತಿಯಲ್ಲಿದ್ದು, 2019ರಲ್ಲಿ ಅದನ್ನು ಸಾರ್ವಜನಿಕವಾಗಿ ಹೇಳಿಕೊಂಡಿದ್ದಾರೆ. ಇವರಿಬ್ಬರ ಮದುವೆ ವದಂತಿ ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುತ್ತದೆ.

Exit mobile version