Site icon Vistara News

Niveditha Gowda | ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರಾ ಚಂದನ್‌-ನಿವೇದಿತಾ ಗೌಡ? ವಿಡಿಯೊದಲ್ಲಿ ಏನಿದೆ?

Niveditha Gowda

ಬೆಂಗಳೂರು : ಕಿರುತೆರೆ ಬಾರ್ಬಿ ಡಾಲ್‌ ಖ್ಯಾತಿಯ ನಿವೇದಿತಾ ಗೌಡ (Niveditha Gowda) ಆಗಾಗ ತಮ್ಮ ವಿಡಿಯೊ ಮೂಲಕ ಸೋಷಿಯಲ್‌ ಮೀಡಿಯಾದಲ್ಲಿ ಸುದ್ದಿಯಲ್ಲಿರುತ್ತಾರೆ. ಇದೀಗ ನಿವೇದಿತಾ-ಚಂದನ್‌ ಶೆಟ್ಟಿ ಮೊದಲ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬ ಸುದ್ದಿ ಇದೀಗ ಹರಿದಾಡುತ್ತಿದೆ. ಮಗುವಿನ ಆಗಮನದ ನಿರೀಕ್ಷೆಯಲ್ಲಿ ಇರುವ ಬಗ್ಗೆ ವಿಶೇಷ ವಿಡಿಯೊ ಮೂಲಕ ಅವರು ಸುಳಿವು ನೀಡಿದ್ದಾರೆ. 

ವಿಡಿಯೊದಲ್ಲಿ Fat+Her ಅಂದರೆ ಏನು ಎಂದು ನಿವೇದಿತಾ ಗೌಡಗೆ ಚಂದನ್ ಕೇಳಿದ್ದಾರೆ. ಅದಕ್ಕೆ ಉತ್ತರ ಫಾದರ್ ಹಾಗಾಗಿ ಚಂದನ್ ಶೆಟ್ಟಿ ತಂದೆ ಆಗುತ್ತಿದ್ದಾರೆ ಎಂದು ಫ್ಯಾನ್ಸ್ ಊಹಿಸಿದ್ದಾರೆ. ಕಮೆಂಟ್​ಗಳ ಮೂಲಕ ಈ ಜೋಡಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಿ​ದ್ದಾರೆ. ಈ ವಿಡಿಯೊ ನಿವೇದಿತಾ ಹಾಗೂ ಚಂದನ್ ಫ್ಯಾನ್ಸ್ ವಲಯದಲ್ಲಿ ವೈರಲ್ ಆಗುತ್ತಿದೆ.

ಇದನ್ನೂ ಓದಿ | Niveditha Gowda | ಮತ್ತೊಬ್ಬರ ಭಾವನೆ ಜತೆ ಆಟ ಆಡಬೇಡಿ ನಿವೇದಿತಾ ಎಂದ ನೆಟ್ಟಿಗರು!

ಬಿಗ್​ ಬಾಸ್​ ಕನ್ನಡ ಸೀಸನ್​ 5’ ರಿಯಾಲಿಟಿ ಶೋನಲ್ಲಿ ನಿವೇದಿತಾ ಗೌಡ ಹಾಗೂ ಚಂದನ್​ ಶೆಟ್ಟಿ ಅವರು ಸ್ಪರ್ಧಿಸಿದ್ದರು. ಅಲ್ಲಿಯೇ ಅವರಿಗೆ ಮೊದಲ ಬಾರಿಗೆ ಪರಿಚಯ ಆಗಿದ್ದು.2020ರ ಫೆಬ್ರವರಿಯಲ್ಲಿ ಹಸೆಮಣೆ ಏರಿದರು. ಮೂರು ವರ್ಷಗಳ ಬಳಿಕ ಈ ಜೋಡಿ ಗುಡ್​ ನ್ಯೂಸ್​ ನೀಡಿದೆ ಎಂದು ಚಂದನ್‌-ನಿವಿ ಅಭಿಮಾನಿಗಳು ಕಮೆಂಟ್‌ ಮೂಲಕ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ | Niveditha Gowda | ʻʻಗಂಡನ ದುಡ್ಡಿನಲ್ಲಿ ಟ್ರಿಪ್‌ ಹೋದರೆ ನಿಮಗೇನು ಸಮಸ್ಯೆ?ʼʼ ನಿವೇದಿತಾ ಗೌಡ ಗರಂ ಆಗಿದ್ಯಾಕೆ?

Exit mobile version