Site icon Vistara News

Arijit Singh: ಅರಿಜಿತ್​ ಸಿಂಗ್​​ ಕೈ ಎಳೆದ ಮಹಿಳಾ ಅಭಿಮಾನಿ; ವಿಡಿಯೊ ವೈರಲ್‌!

Arijit Singh says 'my hands are shaking' after fan pulls

ಬೆಂಗಳೂರು: ಮಹಾರಾಷ್ಟ್ರದ ಛತ್ರಪತಿ ಸಂಭಾಜಿ ನಗರದಲ್ಲಿ ಸಂಗೀತ ಕಾರ್ಯಕ್ರಮ ನಡೆಸುತ್ತಿದ್ದಾಗ ಗಾಯಕ ಅರಿಜಿತ್ ಸಿಂಗ್ (Arijit Singh) ಅವರ ಕೈ ಎಳೆದಿರುವ ಪರಿಣಾಮ ಗಾಯಗೊಂಡಿದ್ದಾರೆ. ಇದೀಗ ಅರಿಜಿತ್‌ ಅವರ ಫ್ಯಾನ್‌ ಪೇಜ್‌ ವಿಡಿಯೊ ಶೇರ್‌ ಮಾಡಿಕೊಂಡಿದೆ. ಒಂದು ಹಾಡು ಹೇಳಿ ಮುಗಿಸಿದ ಬಳಿಕ ಅವರು ವೇದಿಕೆಯ ಅಕ್ಕ-ಪಕ್ಕ ನಿಂತಿದ್ದ ಅಭಿಮಾನಿಗಳನ್ನು ಮಾತನಾಡಿಸಲು ತೆರಳಿದರು. ಆದರೆ ಅಲ್ಲಿದ್ದ ಮಹಿಳಾ ಅಭಿಮಾನಿಯೊಬ್ಬರು ಜೋರಾಗಿ ಅವರ ಕೈ ಹಿಡಿದು ಎಳೆದರು.

ಅತ್ಯಂತ ಸೌಮ್ಯವಾಗಿಯೇ ಇದ್ದ ಅರಿಜಿತ್‌ ಏಕಾಏಕಿ ಮಹಿಳಾ ಅಭಿಮಾನಿಯೊಬ್ಬರು ಅವರನ್ನು ಎಳೆದ ಕೂಡಲೆ ಗಾಯಕ ಅಭಿಮಾನಿಗೆ ಬುದ್ದಿ ಹೇಳಿದ್ದಾರೆ. ಪ್ರತಿ ಬಾರಿ ಸಂಗೀತ ಕಾರ್ಯಕ್ರಮ ನೀಡಿದಾಗಲೂ ಅವರು ಅಭಿಮಾನಿಗಳ ಬಳಿಗೆ ತೆರಳಿ ಮಾತುಕತೆ ನಡೆಸುತ್ತಾರೆ. ಔರಂಗಬಾದ್​ನಲ್ಲೂ ಹಾಗೆಯೇ ಆಗಿದೆ. ಒಂದು ಹಾಡು ಹೇಳಿ ಮುಗಿಸಿದ ಬಳಿಕ ಅವರು ವೇದಿಕೆಯ ಅಕ್ಕ-ಪಕ್ಕ ನಿಂತಿದ್ದ ಅಭಿಮಾನಿಗಳನ್ನು ಮಾತನಾಡಿಸಲು ತೆರಳಿದರು. ಆಗ ಈ ಘಟನೆ ಸಂಭವಿಸಿದೆ.

ವಿಡಿಯೊದಲ್ಲಿ ಅರಿಜಿತ್‌ ಸಿಂಗ್‌ ಮಹಿಳೆಗೆ ʻʻದಯವಿಟ್ಟು ಈಗಲೇ ವೇದಿಕೆಗೆ ಬನ್ನಿ. ನೀವು ನನ್ನನ್ನು ಎಳೆಯುತ್ತಿದ್ದೀರಿ. ನನ್ನ ಮಾತು ಕೇಳಿ. ನಾನು ನಿನ್ನನ್ನು ಹೀಗೆ ದೂಷಿಸುವವನಲ್ಲ, ನಾನು ಇಲ್ಲಿ ಕಷ್ಟಪಡುತ್ತಿದ್ದೇನೆ. ನೀವು ಎಂಜಾಯ್​ ಮಾಡುತ್ತಿದ್ದೀರಿ. ನಾನು ಹಾಡು ಹೇಳಲು ಸಾಧ್ಯವಾಗದೇ ಇದ್ದರೆ ನೀವು ಹೇಗೆ ಎಂಜಾಯ್​ ಮಾಡುತ್ತೀರಿ? ನೀವು ನನ್ನನ್ನು ಅಷ್ಟು ಬಲವಾಗಿ ಎಳೆಯುತ್ತಿದ್ದೀರಿ. ನನ್ನ ಕೈಗಳು ನಡುಗುತ್ತಿವೆ. ನಾನು ಹೊರಡಬೇಕೇ?”ಎಂದು ಹೇಳಿದ್ದಾರೆ.

ಇದನ್ನೂ ಓದಿ: Arijit Singh Concert Cancelled | ಬಂಗಾಳದಲ್ಲಿ ಅರಿಜಿತ್ ಸಿಂಗ್‌ ಮ್ಯೂಸಿಕ್‌ ಶೋ ರದ್ದು, ಕೇಸರಿ ಹಾಡು ಹಾಡಿದ್ದೇ ಕಾರಣ?

ವೈರಲ್‌ ವಿಡಿಯೊ

ಪ್ರೇಕ್ಷಕರು ತಾಳ್ಮೆಯಿಂದ ಇರಬೇಕೆಂದು ವಿನಂತಿಸಿದ್ದಾರೆ. ಅಷ್ಟೇ ಅಲ್ಲದೇ ಪ್ರತಿಯೊಬ್ಬರಲ್ಲಿಯೂ ನಾನು ಮಾತನಾಡಿಸುತ್ತೇನೆ ಎಂದು ಭರವಸೆ ನೀಡಿದರು. ವಿಡಿಯೊ ವೈರಲ್‌ ಆಗುತ್ತಿದ್ದಂತೆ ಅಭಿಮಾನಿಗಳು ಕಾಮೆಂಟ್‌ನಲ್ಲಿ ಅಭಿಮಾನಿಗಳನ್ನು ನಿಭಾಯಿಸಿದ್ದಕ್ಕಾಗಿ ಗಾಯಕನನ್ನು ಶ್ಲಾಘಿಸಿದರು. ಒಬ್ಬ ಅಭಿಮಾನಿ ʻʻಇಷ್ಟಾದರೂ ಅರಿಜಿತ್‌ ತಾಳ್ಮೆ ಕಳೆದುಕೊಂಡಿಲ್ಲ. ಅತ್ಯಂತ ಆತ್ಮೀಯವಾಗಿ ವಿವರಿಸಿದ್ದಾರೆʼ ಎಂದು ಕಾಮೆಂಟ್‌ ಮಾಡಿದ್ದಾರೆ.

.

Exit mobile version