ಬೆಂಗಳೂರು: ದಿಲ್ವಾಲೆ ಸಿನಿಮಾದಲ್ಲಿ ಶಾರುಖ್ ಖಾನ್ ರಂಗ್ ದೇ ತು ಮೊಹೆ ಗೆರುವಾ ಅಂದಾಕ್ಷಣ ಹಾಡು ಸಿಕ್ಕಾಪಟ್ಟೆ ಸೌಂಡ್ ಮಾಡಿತ್ತು. ಆದರೆ ಪಠಾಣ್ ಸಿನಿಮಾದ ಬೇಷರ್ ರಂಗ್ ಹಾಡು ಬಿಕಿನಿ ಕೇಸರಿ ವಿವಾದಕ್ಕೆ ಕಾರಣವಾಯಿತು. ಕೋಲ್ಕೊತಾ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ (KIFF) 2022ರಲ್ಲಿ ಡಿ.15, ಅರಿಜಿತ್ ಸಿಂಗ್ (Arijit Singh) ಅವರು ಮಮತಾ ಬ್ಯಾನರ್ಜಿಯವರ ಉಪಸ್ಥಿತಿಯಲ್ಲಿ ಗೆರುವಾ ಹಾಡಿನ ಸಾಲನ್ನು ಹಾಡಿದರು. ಕೆಲವು ದಿನಗಳ ನಂತರ, ಫೆಬ್ರವರಿ 18 ರಂದು ನಡೆಯಬೇಕಿದ್ದ ಅರಿಜಿತ್ ಸಿಂಗ್ ಅವರ ಸಂಗೀತ ಕಾರ್ಯಕ್ರಮವನ್ನು ಪೊಲೀಸರು ಅನುಮತಿ ನಿರಾಕರಿಸಿನಂತರ ರದ್ದುಗೊಳಿಸಲಾಗಿದೆ ಎಂಬ ಸುದ್ದಿ ಹೊರಬಿದ್ದಿದೆ. ಈ ಬಗ್ಗೆ ಅರಿಜಿತ್ ಸಿಂಗ್ ಪ್ರತಿಕ್ರಿಯೆ ನೀಡಿದ್ದಾರೆ.
ಕೋಲ್ಕೊತಾದಲ್ಲಿ ಗಾಯಕ ಅರಿಜಿತ್ ಸಿಂಗ್ ನಾಲ್ಕು ಗಂಟೆಗಳ ಕಾಲ ಪ್ರದರ್ಶನ ನೀಡಿದರು. ಅವರು ರಂಗ್ ದೇ ತು ಮೋಹೆ ಗೆರುವಾ ಹಾಡನ್ನೂ ಹಾಡಿದರು. ಹಾಡಿಗೆ ಸಂಬಂಧಿಸಿದ ವಿವಾದದ ಬಗ್ಗೆ ಮಾತನಾಡಿ, “ಒಂದು ಬಣ್ಣದ ಬಗ್ಗೆ ತುಂಬಾ ವಿವಾದ! ಕೇಸರಿ ಸನ್ಯಾಸಿಗಳ ಬಣ್ಣ, ಸ್ವಾಮಿಜಿ ಅವರು ಬಿಳಿ ಬಟ್ಟೆಯನ್ನು ಧರಿಸಿದ್ದರೆ, ಬಿಳಿ ಬಣ್ಣದ ಬಗ್ಗೆಯೂ ವಿವಾದ ಉಂಟಾಗಬಹುದೇ? ಎಂದು ಹೇಳಿದ್ದಾರೆ.
ಇದನ್ನೂ ಓದಿ: Arijit Singh Concert Cancelled | ಬಂಗಾಳದಲ್ಲಿ ಅರಿಜಿತ್ ಸಿಂಗ್ ಮ್ಯೂಸಿಕ್ ಶೋ ರದ್ದು, ಕೇಸರಿ ಹಾಡು ಹಾಡಿದ್ದೇ ಕಾರಣ?
ಕೋಲ್ಕೊತಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅರಿಜಿತ್ ಸಿಂಗ್ ಕಂಡದ್ದು ಹೀಗೆ
ಕೋಲ್ಕೊತಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ 2022 (KIFF 2022)
ಡಿಸೆಂಬರ್ 15ರಂದು, ಶಾರುಖ್ ಖಾನ್ ಅಮಿತಾಭ್ ಬಚ್ಚನ್, ಜಯಾ ಬಚ್ಚನ್, ಪ್ರೊಸೆಂಜಿತ್, ರಾಣಿ ಮುಖರ್ಜಿ, ಶತಾಬ್ದಿ ರಾಯ್, ಅರ್ಜಿತ್ ಸಿಂಗ್, ಬಾಬುಲ್ ಸುಪ್ರಿಯೋ ಮತ್ತು ಇತರ ಜನಪ್ರಿಯ ತಾರೆಯರೊಂದಿಗೆ ಕೋಲ್ಕತ್ತಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ 2022 ರ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ: Viral Video: ಪಠಾಣ್ ಹಾಡಿಗೆ ಹುಚ್ಚೆದ್ದು ಕುಣಿದ ಜರ್ಮನಿ ಮಹಿಳೆ, ವೈರಲ್ ಆಯ್ತು ವಿಡಿಯೊ
ಏನಿದು ‘ಬೇಷರಮ್ ರಂಗ್’?
‘ಬೇಷರಮ್ ರಂಗ್’ ಅಂದರೆ ಕನ್ನಡದಲ್ಲಿ ನಾಚಿಕೆ ಇಲ್ಲದ ಬಣ್ಣ ಎಂದಾಗುತ್ತದೆ. ಕೇಸರಿ ಬಣ್ಣಕ್ಕೆ ನಾಚಿಕೆ ಇಲ್ಲದ ಬಣ್ಣ ಎಂದು ಜರಿದಿದ್ದಾರೆ ಎಂದು ಹೋಲಿಕೆ ಮಾಡಿಕೊಂಡು ಹಲವರು ಗರಂ ಆಗಿದ್ದಾರೆ. ಜನವರಿ 25, 2023ಕ್ಕೆ ಚಿತ್ರ ಬಿಡುಗಡೆಗೊಂಡಿದೆ.