ಬೆಂಗಳೂರು: ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ (Arjun Sarja) ಪುತ್ರಿ ಐಶ್ವರ್ಯ ಸರ್ಜಾ ಖ್ಯಾತ ಹಾಸ್ಯನಟ ತಂಬಿ ರಾಮಯ್ಯ (Thambi Ramaiah) ಅವರ ಪುತ್ರ ಉಮಾಪತಿ ರಾಮಯ್ಯ (Umapathy Ramaiah) ಜತೆ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನಲಾಗುತ್ತಿದೆ. ಈ ಸುದ್ದಿ ಕಾಲಿವುಡ್‌ನಲ್ಲಿ ಸಂಚಲನ ಮೂಡಿಸಿದೆ. ಈ ಜೋಡಿ ಸಾಕಷ್ಟು ಸಮಯದಿಂದ ಡೇಟಿಂಗ್ ನಡೆಸುತ್ತಿತ್ತು. ಇಬ್ಬರ ಮನೆಯಲ್ಲಿ ಮದುವೆ ಮಾತುಕತೆ ನಡೆದಿದೆ ಎಂದು ಕನಕರಾಜ್ ಟ್ವೀಟ್‌ನಲ್ಲಿ ಹಂಚಿಕೊಂಡಿದ್ದಾರೆ.
80-90ರ ದಶಕದ ಪ್ರಮುಖ ನಾಯಕರಲ್ಲಿ ಒಬ್ಬರಾದ ಅರ್ಜುನ್ ಸರ್ಜಾ ಬಹುಭಾಷಾ ನಟ. 1998ರಲ್ಲಿ ಆಶಾ ರಾಣಿ ಅವರನ್ನು ವಿವಾಹವಾದರು. ಇವರಿಗೆ ಐಶ್ವರ್ಯ ಮತ್ತು ಅಂಜನಾ ಇಬ್ಬರು ಪುತ್ರಿಯರು. ʼಪ್ರೇಮ ಬರಹʼ ಸಿನಿಮಾ ಮೂಲಕ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಐಶ್ವರ್ಯ ಸರ್ಜಾ ಪದಾರ್ಪಣೆ ಮಾಡಿದರು. ರಿಯಲ್ ಸ್ಟಾರ್ ಉಪೇಂದ್ರ ಅವರ ಸಹೋದರನ ಪುತ್ರ ನಿರಂಜನ್ ಸುಧೀಂದ್ರ ಜತೆಗೆ ಐಶ್ವರ್ಯ ತೆರೆ ಹಂಚಿಕೊಳ್ಳಲಿದ್ದಾರೆ. ಇದು ತೆಲುಗು ಸಿನಿಮಾವಾಗಿದೆ. ಅರ್ಜುನ್ ಸರ್ಜಾ ನಿರ್ಮಾಣ ಹಾಗೂ ನಿರ್ದೇಶನವಿದೆ.
ರಾಷ್ಟ್ರಪ್ರಶಸ್ತಿ ವಿಜೇತ ನಟ-ನಿರ್ದೇಶಕ ತಂಬಿ ರಾಮಯ್ಯ ಅವರ ಪುತ್ರ ನಟ ಉಮಾಪತಿ ರಾಮಯ್ಯ ಅವರೊಂದಿಗೆ ಐಶ್ವರ್ಯ ಸರ್ಜಾ ಬಹಳ ಸಮಯದಿಂದ ಡೇಟಿಂಗ್ ನಡೆಸುತ್ತಿದ್ದರು ಎಂದು ವರದಿಯಾಗಿತ್ತು. ಎರಡೂ ಕುಟುಂಬಗಳ ಆಶೀರ್ವಾದದೊಂದಿಗೆ ಅವರು ಶೀಘ್ರದಲ್ಲೇ ಮದುವೆಯಾಗಲು ಯೋಜಿಸುತ್ತಿದ್ದಾರೆ ಎಂದು ವರದಿಯಾಗಿದೆ. ತಂಬಿ ರಾಮಯ್ಯ ಅವರು ಮದುವೆಯ ದಿನಾಂಕವನ್ನು ಶೀಘ್ರದಲ್ಲೇ ಘೋಷಿಸುವ ನಿರೀಕ್ಷೆಯಿದೆ.
ಇದನ್ನೂ ಓದಿ: Aishwarya Arjun | ಐಶ್ವರ್ಯ ಸರ್ಜಾ ಚಿತ್ರಕ್ಕೆ ಆ್ಯಕ್ಷನ್ ಕಿಂಗ್ ಆ್ಯಕ್ಷನ್ ಕಟ್
Umapathy Ramaiah (Thambi Ramaiah Son) & Aishwarya Arjun (Arjun’s Daughter) to tie the knot soon! pic.twitter.com/r0dRY3i6js
— Christopher Kanagaraj (@Chrissuccess) June 25, 2023
ತಂಬಿ ರಾಮಯ್ಯ ಅವರ ಪುತ್ರ ಉಮಾಪತಿ ರಾಮಯ್ಯ ಕೂಡ ನಟನೆಯಲ್ಲಿ ಬ್ಯುಸಿಯಾಗಿದ್ದಾರೆ. ನಟಿ ಯಶಿಕಾ ಆನಂದ್ ಜತೆ ಉಮಾಪತಿ ರಾಮಯ್ಯ ಸಂಬಂಧ ಹೊಂದಿದ್ದರು ಎಂಬ ಊಹಾಪೋಹಗಳು ಇದ್ದವು. ಅರ್ಜುನ್ ಸ್ವತಃ ಹೋಸ್ಟ್ ಮಾಡಿದ ರಿಯಾಲಿಟಿ ಟಿವಿ ಶೋ “ಸರ್ವೈವರ್ ತಮಿಳು” ನಲ್ಲಿ ಉಮಾಪತಿ ಸ್ಪರ್ಧಿಯಾಗಿ ಭಾಗವಹಿಸಿದ್ದರು, ಈ ಮೂಲಕ ಅರ್ಜುನ್ ಫ್ಯಾಮಿಲಿಗೆ ಉಮಾಪತಿ ರಾಮಯ್ಯ ಹತ್ತಿರವಾಗಿದ್ದಾರೆ ಎಂದು ವರದಿಯಾಗಿದೆ. ಈ ಮೂಲಕ ಇವರಿಬ್ಬರ ನಡುವೆ ಸ್ನೇಹವಾಗಿ ಬಳಿಕ ಪ್ರೇಮಕ್ಕೆ ತಿರುಗಿದೆ ಎಂದು ವರದಿಯಾಗಿದೆ. ಇದೀಗ ಈ ಜೋಡಿಯ ಸಂಬಂಧಕ್ಕೆ ಹಿರಿಯರು ಗ್ರೀನ್ ಸಿಗ್ನಲ್ ನೀಡಿದ್ದಾರೆ ಎನ್ನಲಾಗಿದೆ.