Site icon Vistara News

Armaan Malik: ಬಹುಕಾಲದ ಗೆಳತಿ ಆಶ್ನಾ ಜತೆ ಗಾಯಕ ಅರ್ಮಾನ್ ಮಲಿಕ್ ಎಂಗೇಜ್‌!

Armaan Malik Aashna Shroff

ಬೆಂಗಳೂರು: ಬಹುಭಾಷಾ ಗಾಯಕ ಅರ್ಮಾನ್ ಮಲಿಕ್ (Armaan Malik) ಅವರು ಆಗಸ್ಟ್ 28ರಂದು ಬಹುಕಾಲದ ಗೆಳತಿ ಆಶ್ನಾ ಶ್ರಾಫ್ (Aashna Shroff) ಜತೆ ಎಂಗೇಜ್‌ ಆಗಿದ್ದಾರೆ. ಗೆಳತಿ ಆಶ್ನಾ ಶ್ರಾಫ್ ಅವರೊಂದಿಗಿನ ನಿಶ್ಚಿತಾರ್ಥದ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಆಶ್ನಾ ಶ್ರಾಫ್ ಬ್ಲಾಗರ್ ಮತ್ತು ಯೂಟ್ಯೂಬರ್. ಅರ್ಮಾನ್ ಮಲಿಕ್ ಈ ಸಿಹಿ ಸುದ್ದಿ ನೀಡಿದ ಬೆನ್ನಲ್ಲೇ ಅವರ ಅಭಿಮಾನಿಗಳು ಹಾರೈಸುತ್ತಿದ್ದಾರೆ.

ಆಶ್ನಾ- ಅರ್ಮಾನ್ ಬಹು ಕಾಲದಿಂದ ಡೇಟಿಂಗ್ ಮಾಡುತ್ತಿದ್ದರು. ಇದೀಗ ಗುರುಹಿರಿಯರ ಸಮ್ಮತಿಯ ಮೇರೆಗೆ ಈ ಜೋಡಿ ಎಂಗೇಜ್ ಆಗಿದ್ದಾರೆ. ಸೋಷಿಯಲ್‌ ಮೀಡಿಯಾ ಸ್ಟಾರ್‌ ಆಶ್ನಾ ಜತೆಗೆ ಸದ್ಯದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲು ರೆಡಿಯಾಗಿದ್ದಾರೆ. ಅರ್ಮಾನ್ ಮಲಿಕ್, ಒಬ್ಬ ಭಾರತೀಯ ಗಾಯಕ, ಗೀತರಚನೆಕಾರ, ಪ್ರದರ್ಶಕ ಆಗಿ ಗುರುತಿಸಿಕೊಂಡಿದ್ದಾರೆ.

ಹಿಂದಿ, ತೆಲುಗು, ಇಂಗ್ಲಿಷ್, ಬೆಂಗಾಲಿ, ಕನ್ನಡ, ಮರಾಠಿ, ತಮಿಳು, ಗುಜರಾತಿ, ಪಂಜಾಬಿ, ಉರ್ದು ಮತ್ತು ಮಲಯಾಳಂ ಮುಂತಾದ ಭಾಷೆಗಳಲ್ಲಿ ಹಾಡಿದ್ದಾರೆ. ಮುಂಗಾರು ಮಳೆ 2 ಚಿತ್ರದ ಸರಿಯಾಗಿ ನೆನಪಿದೆ ನನಗೆ ಸಾಂಗ್, ಚಕ್ರವರ್ತಿ ಚಿತ್ರದ ಒಂದು ಮಳೆಬಿಲ್ಲು, ಎಕ್ ಲವ್ ಯಾ ಚಿತ್ರದ ಯಾರೇ ಯಾರೇ ಸಾಂಗ್ ಸೇರಿದಂತೆ ಕನ್ನಡದ ಸಾಕಷ್ಟು ಹಾಡುಗಳಿಗೆ ಅರ್ಮಾನ್ ಧ್ವನಿಯಾಗಿದ್ದಾರೆ.

ಇದನ್ನೂ ಓದಿ: Armaan Malik : ಯೂಟ್ಯೂಬರ್‌ ಅರ್ಮಾನ್‌ ಬಗ್ಗೆ ಸಿಟ್ಟಿಗೆದ್ದ ಗಾಯಕ ಅರ್ಮಾನ್‌ ಮಲಿಕ್‌

2006ರಲ್ಲಿ, ಸರಿಗಮಪ ಲಿಟ್ಲಲ್‌ ಚಾಂಪ್ಸ್‌ನಲ್ಲಿ ಭಾಗವಹಿಸಿದರು. ಸಂಗೀತ ಸಂಯೋಜಕ ಅಮಲ್ ಮಲಿಕ್‌ ಅವರ ಸಹೋದರ ಅರ್ಮಾನ್ . ಹಿಂದೆ ಯೂನಿವರ್ಸಲ್ ಮ್ಯೂಸಿಕ್ ಇಂಡಿಯಾ ಮತ್ತು ಟಿ-ಸೀರೀಸ್‌ನಲ್ಲಿ ಪ್ರತಿನಿಧಿಸಿದ್ದರು.

2020ರಲ್ಲಿ, ಮಲಿಕ್ ಟಾಪ್ ಟ್ರಿಲ್ಲರ್ ಗ್ಲೋಬಲ್ ಬಿಲ್‌ಬೋರ್ಡ್ ಚಾರ್ಟ್‌ಗಳಲ್ಲಿ ಎರಡು ಬಾರಿ ನಂ. 1 ಸ್ಥಾನ ಗಳಿಸಿದ ಮೊದಲ ಕಲಾವಿದರಾದರು. ಜೂನ್ 2021ರಲ್ಲಿ ಬಿಡುಗಡೆಯಾದ ಎಆರ್ ರೆಹಮಾನ್ ಸಿಂಗಲ್ “ಮೇರಿ ಪುಕಾರ್ ಸುನೋ” ನಲ್ಲಿ ಕಾಣಿಸಿಕೊಂಡಿದ್ದಾರೆ.

Exit mobile version