ಬೆಂಗಳೂರು : ನಿರ್ಮಾಪಕಿ ಮತ್ತು ನಿರ್ದೇಶಕಿ ಏಕ್ತಾ ಕಪೂರ್ (Ekta Kapoor) ಹಾಗೂ ಅವರ ತಾಯಿ ಶೋಭಾ ಕಪೂರ್ ಮೇಲೆ ತಮ್ಮ ವೆಬ್ ಸರಣಿ (XXX)ಯಲ್ಲಿ (Web Series) ಸೈನಿಕರನ್ನು ಅವಮಾನಿಸಿದ ಮತ್ತು ಅವರ ಕುಟುಂಬ ಸದಸ್ಯರ ಭಾವೆನೆಗಳಿಗೆ ದಕ್ಕೆ ತಂದ ಆರೋಪದ ಮೇಲೆ ಬಿಹಾರದ ಬೆಗುಸರಾಯ್ ನ್ಯಾಯಾಲಯ ಬುಧವಾರ ಬಂಧನ ವಾರೆಂಟ್ ಹೊರಡಿಸಿದೆ.
ಮಾಜಿ ಸೈನಿಕ ಬೆಗುಸರಾಯ್ ನಿವಾಸಿ ಶಂಭು ಕುಮಾರ್ ನೀಡಿದ ದೂರಿನ ಆಧಾರದ ಮೇಲೆ ನ್ಯಾಯಾಧೀಶ ವಿಕಾಸ್ ಕುಮಾರ್ ವಾರೆಂಟ್ ಹೊರಡಿಸಿದೆ. 2022ರಲ್ಲಿ ನೀಡಿದ್ದ ದೂರಿನಲ್ಲಿ ಕುಮಾರ್ (XXX) (ಸೀಸನ್-2) ಸರಣಿಯು ಸೈನಿಕನ ಹೆಂಡತಿಗೆ ಸಂಬಂಧಿಸಿದ ಹಲವಾರು ಆಕ್ಷೇಪಾರ್ಹ ದೃಶ್ಯಗಳನ್ನು ಒಳಗೊಂಡಿದೆ ಎಂದು ಆರೋಪಿಸಿದ್ದರು.
ಇದನ್ನೂ ಓದಿ | ಖಾನ್ಗಳ ಜತೆ ಕೆಲಸ ಮಾಡುವ ಆಸೆ ಎಂದಿಗೂ ಇರಲಿಲ್ಲ ಎಂದ ಬಾಲಿವುಡ್ ನಿರ್ಮಾಪಕಿ ಏಕ್ತಾ ಕಪೂರ್ !
ʻʻಏಕ್ತಾ ಕಪೂರ್ ಒಡೆತನದ OTT ಪ್ಲಾಟ್‌ಫಾರ್ಮ್ ಎಎಲ್‌ಟಿ ಬಾಲಾಜಿಯಲ್ಲಿ ಈ ವೆಬ್ ಸಿರೀಸ್‌ಅನ್ನು ಪ್ರಸಾರ ಮಾಡಲಾಗಿದೆ. ಶೂಭಾ ಕಪೂರ್ ಅವರು ಬಾಲಾಜಿ ಟೆಲಿಫಿಲ್ಮ್ಸ್ ಜತೆ ನಂಟು ಹೊಂದಿದ್ದಾರೆʼʼ ಎಂದು ವಕೀಲ ಹೃಷಿಕೇಶ್ ಪಾಠಕ್ ಹೇಳಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಲಯವು (ಏಕ್ತಾ ಕಪೂರ್ ಮತ್ತು ಅವರ ತಾಯಿಗೆ) ಸಮನ್ಸ್ ಜಾರಿ ಮಾಡಿತ್ತು. ಈ ವಿಷಯಕ್ಕೆ ಸಂಬಂಧಿಸಿದಂತೆ ಅವರು ಮುಂದೆ ಹಾಜರಾಗುವಂತೆ ಹೇಳಿತ್ತು. ಆದರೆ ಆಕ್ಷೇಪಣೆಯ ನಂತರ ಸರಣಿಯಲ್ಲಿನ ಕೆಲವು ದೃಶ್ಯಗಳನ್ನು ತೆಗೆದುಹಾಕಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಆದರೆ ನ್ಯಾಯಾಲಯಕ್ಕೆ ಹಾಜಾರಾಗದ ಹಿನ್ನೆಲೆಯಲ್ಲಿ ಅವರ ವಿರುದ್ಧ ವಾರೆಂಟ್ ಹೊರಡಿಸಲಾಗಿದೆ ಎಂದು ಪಾಠಕ್ ತಿಳಿಸಿದ್ದಾರೆ.
ಇದನ್ನೂ ಓದಿ | Bihar Politics | ಮಹಾ ಘಟ್ ಬಂಧನ್ ಸರ್ಕಾರದ ಮೊದಲ ವಿಕೆಟ್ ಪತನ; ಕಾನೂನು ಸಚಿವ ರಾಜೀನಾಮೆ