Site icon Vistara News

Arshad Warsi: ಯೂಟ್ಯೂಬ್ ಮೂಲಕ ತಪ್ಪು ಮಾಹಿತಿ ನೀಡಿ ಷೇರು ಮಾರುಕಟ್ಟೆಯಲ್ಲಿ ವಂಚನೆ; ಅರ್ಷದ್‌ ವಾರ್ಸಿ ದಂಪತಿಗೆ ದಂಡ

Arshad Warsi

ಬೆಂಗಳೂರು: ಬಾಲಿವುಡ್‌ ನಟ ಅರ್ಷದ್‌ ವಾರ್ಸಿ ಮತ್ತು ಪತ್ನಿ ಮಾರಿಯಾ ಗೊರಟ್ಟಿ ವಾರ್ಸಿ ಸೇರಿದಂತೆ ಒಟ್ಟು 45 ವ್ಯಕ್ತಿಗಳು ಮತ್ತು ಕಂಪನಿಗಳನ್ನು ಷೇರು ವ್ಯವಹಾರ ಮಾಡದಂತೆ ಸೆಬಿ ನಿರ್ಬಂಧಿಸಿದೆ.

ಅರ್ಷದ್‌ ವಾರ್ಸಿಗೆ ಸೇರಿದ ಶಾರ್ಪ್‌ಲೈನ್‌ ಬ್ರಾಡ್‌ಕಾಸ್ಟ್‌ ಮತ್ತು ಸಾಧನಾ ಬ್ರಾಡ್‌ಕಾಸ್ಟ್‌ ಲಿಮಿಟೆಡ್‌ ಎಂಬ ಎರಡು ಯೂ ಟ್ಯೂಬ್‌ ಚಾನೆಲ್‌ಗಳು ಸುಳ್ಳು ಮಾಹಿತಿಗಳ ಮೂಲಕ ಷೇರು ಮೌಲ್ಯಗಳನ್ನು ಬುಡಮೇಲು ಮಾಡುತ್ತಿದ್ದವು ಎಂಬುದು ತನಿಖೆಯಿಂದ ಬಯಲಾದ ಬಳಿಕ ಈ ಕ್ರಮವನ್ನು ಕೈಗೊಳ್ಳಲಾಗಿದೆ.

ಈ ರೀತಿ ತಪ್ಪಾದ ಮಾಹಿತಿಗಳನ್ನು ನೀಡುವ ಮೂಲಕ ಷೇರು ಮೌಲ್ಯದ ವ್ಯತ್ಯಯಕ್ಕೆ ಕಾರಣವಾಗಿರುವ ಜತೆಗೆ, ತಪ್ಪು ಮಾಹಿತಿಯುಳ್ಳ ವಿಡಿಯೊಗಳ ಮೂಲಕ 54 ಕೋಟಿ ರೂ. ಅಕ್ರಮವಾಗಿ ಸಂಪಾದನೆ ಮಾಡಿದ್ದಾರೆ ಎಂದು ತನಿಖೆ ವೇಳೆ ತಿಳಿದುಬಂದಿದೆ. ಷೇರು ಮಾರುಕಟ್ಟೆಯಲ್ಲಿ ಕೆಲವು ಷೇರುಗಳನ್ನು ಮೇಲೆತ್ತುವ ಮತ್ತು ಕೆಲವನ್ನು ಪಾತಾಳಕ್ಕೆ ತಳ್ಳುವ ಪಂಪ್‌ ಎಂಡ್‌ ಡಂಪ್‌ ಕಾರ್ಯಾಚರಣೆಯ ಭಾಗವಾಗಿ ಈ ವಿಡಿಯೊಗಳನ್ನು ಮಾಡಲಾಗಿದೆ ಎಂದು ಸೆಬಿ ಅಭಿಪ್ರಾಯಪಟ್ಟಿದೆ.

ಭಾರತೀಯ ಷೇರು ಮಾರುಕಟ್ಟೆ ಮತ್ತು ವಿನಿಮಯ ಮಂಡಳಿ (ಸೆಬಿ) ಲೆಕ್ಕಾಚಾರದ ಪ್ರಕಾರ, ವಾರ್ಸಿ 29.43 ಲಕ್ಷ ರೂ. ಲಾಭ ಗಳಿಸಿದರೆ, ಅವರ ಪತ್ನಿ 37.56 ಲಕ್ಷ ರೂ. ಲಾಭ ಗಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಕಾರಣಕ್ಕಾಗಿ ಅವರಿಗೆ 54 ಲಕ್ಷ ರೂ. ದಂಡ ವಿಧಿಸಲಾಗಿದೆ. ಈ ಮೊತ್ತವನ್ನು 15 ದಿನಗಳಲ್ಲಿ ಶೆಡ್ಯೂಲ್ಡ್ ಬ್ಯಾಂಕ್‌ನಲ್ಲಿ ಠೇವಣಿ ಇಡುವಂತೆ ಸೂಚಿಸಲಾಗಿದೆ. “ಯಾವುದೇ ಸ್ವತ್ತುಗಳನ್ನು ವಿಲೇವಾರಿ ಮಾಡಬಾರದು. ಚರ ಅಥವಾ ಸ್ಥಿರ ಅಥವಾ ಯಾವುದೇ ಬಡ್ಡಿ ಅಥವಾ ಅವರ ಹೆಸರಿನಲ್ಲಿ ಹೊಂದಿರುವ ಯಾವುದೇ ಆಸ್ತಿಯ ಮೇಲೆ ಯಾವುದೇ ಶುಲ್ಕವನ್ನು ರಚಿಸಬಾರದು” ಎಂದು ಅವರಿಗೆ ನಿರ್ದೇಶನ ನೀಡಲಾಗಿದೆ.

ಇದನ್ನೂ ಓದಿ: New JNU Rules: ಜೆಎನ್‌ಯುನಲ್ಲಿ ಪ್ರತಿಭಟನೆ ಮಾಡಿದರೆ 20 ಸಾವಿರ ರೂ., ದುರ್ವರ್ತನೆಗೆ 50 ಸಾವಿರ ರೂ. ದಂಡ

ಅರ್ಷದ್ ವಾರ್ಸಿ ಮತ್ತು ಮಾರಿಯಾ ಅವರ ಲವ್ ಸ್ಟೋರಿ ನಿಧಾನವಾಗಿ ಏರಲು ಪ್ರಾರಂಭವಾಗಿ ಪರಸ್ಪರ ಪ್ರೀತಿಸಿ ಮದುವೆಯಾದರು . 1996ರಲ್ಲಿ ಅರ್ಷದ್ ವಾರ್ಸಿ ಮೊದಲ ‘ಆಯ್ ತೇರೆ ಮೇರೆ ಸಪ್ನೆ’ ಚಿತ್ರ ತೆರೆ ಮೇಲೆ ಬಂದಿತ್ತು ಆದರೆ ಯಾವುದೇ ಯಶಸ್ಸನ್ನು ತಂದು ಕೊಡಲಿಲ್ಲ.

Exit mobile version