Site icon Vistara News

Art Director Nitin Desai: ʻಲಗಾನ್‌ʼ ಸಿನಿಮಾ ಖ್ಯಾತಿಯ ಕಲಾ ನಿರ್ದೇಶಕ ನಿತಿನ್ ದೇಸಾಯಿ ಆತ್ಮಹತ್ಯೆ!

Art Director Nitin Desai

ಭಾರತೀಯ ಚಿತ್ರರಂಗದ ಖ್ಯಾತ ಕಲಾ ನಿರ್ದೇಶಕ, ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳಿಗೆ ಪಾತ್ರರಾಗಿದ್ದ ನಿತಿನ್ ದೇಸಾಯಿ (Art Director Nitin Desai) ಅವರು ಆಗಸ್ಟ್‌ 2ರಂದು ತಮ್ಮದೇ ಎನ್‌ಡಿ ಸ್ಟುಡಿಯೊದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಲವು ಸೂಪರ್ ಹಿಟ್ ಸಿನಿಮಾಗಳಿಗೆ ಸೆಟ್‌ಗಳನ್ನು ನಿರ್ಮಿಸಿದ್ದ ನಿತಿನ್ ದೇಸಾಯಿ ಪ್ರೊಡಕ್ಷನ್ ಡಿಸೈನರ್ ಆಗಿಯೂ ಗುರುತಿಸಿಕೊಂಡಿದ್ದರು. ಹಿಂದಿ, ಮರಾಠಿ ಕಿರುತೆರೆಯಲ್ಲೂ ಕೆಲಸ ಮಾಡಿದ್ದರು. ಕಲಾ ನಿರ್ದೇಶನಕ್ಕಾಗಿ 4 ಬಾರಿ ರಾಷ್ಟ್ರ‌ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು. ಆಗಸ್ಟ್ 9ಕ್ಕೆ 58ನೇ ಹುಟ್ಟುಹಬ್ಬ ಆಚರಿಸಿಕೊಳ್ಳಬೇಕಿದ್ದ ನಿತಿನ್, ಕರ್ಜತ್‌ನ ಎನ್‌ಡಿ ಸ್ಟುಡಿಯೊದಲ್ಲಿ (nd film studio karjat) ನೇಣಿಗೆ ಶರಣಾಗಿದ್ದಾರೆ.

‘ಹಮ್ ದಿಲ್ ದೇ ಚುಕೇ ಸನಮ್’, ‘ದೇವದಾಸ್’, ‘ಜೋಧಾ ಅಕ್ಬರ್’, ‘ಲಗಾನ್’, ಮತ್ತು ‘ಬಾಜಿರಾವ್ ಮಸ್ತಾನಿ’ ಸೇರಿದಂತೆ ಕೆಲವು ಬ್ಲಾಕ್‌ಬಸ್ಟರ್ ಚಿತ್ರಗಳಿಗೆ ಅದ್ಧೂರಿ ಸೆಟ್‌ಗಳನ್ನು ವಿನ್ಯಾಸಗೊಳಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.

ಎರಡು ದಶಕಗಳ ಕಾಲದ ಅವರ ವೃತ್ತಿಜೀವನದಲ್ಲಿ, ದೇಸಾಯಿ ಅವರು ಸಂಜಯ್ ಲೀಲಾ ಬನ್ಸಾಲಿ, ಅಶುತೋಷ್ ಗೋವಾರಿಕರ್, ವಿಧು ವಿನೋದ್ ಚೋಪ್ರಾ, ರಾಜ್‌ಕುಮಾರ್ ಹಿರಾನಿ ಮತ್ತು ಇತರರು ಸೇರಿದಂತೆ ಹಲವಾರು ಧೀಮಂತ ಚಲನಚಿತ್ರ ನಿರ್ಮಾಪಕರೊಂದಿಗೆ ಕೆಲಸ ಮಾಡಿದ್ದಾರೆ. 52 ಎಕರೆಯಲ್ಲಿ ಇರುವ ಇವರದ್ದೇ ಎನ್‌ಡಿ ಸ್ಟುಡಿಯೊ ಹಲವಾರು ಫಿಲ್ಮ್ ಸೆಟ್‌ಗಳಿಗೆ ನೆಲೆಯಾಗಿದೆ. ಅದರಲ್ಲಿ ಪ್ರಮುಖವಾದದ್ದು ‘ಜೋಧಾ ಅಕ್ಬರ್’.

ಇದನ್ನೂ ಓದಿ: Anant Vaidya : ಹಿರಿಯ ಪತ್ರಕರ್ತ ಅನಂತ್ ವೈದ್ಯ ನಿಧನ; ಶಿವರಾಮ್ ಹೆಬ್ಬಾರ್ ಸಂತಾಪ

ಚಲನಚಿತ್ರಗಳು ಮಾತ್ರವಲ್ಲದೆ, ರಿಯಾಲಿಟಿ ಶೋ ‘ಬಿಗ್ ಬಾಸ್’ ನ ಹಲವಾರು ಸೀಸನ್‌ಗಳನ್ನು ಎನ್‌ಡಿ ಸ್ಟುಡಿಯೋಸ್‌ನಲ್ಲಿ ಆಯೋಜಿಸಲಾಗಿದೆ. ನಿತಿನ್‌ ಒಂದೆರಡು ಚಿತ್ರಗಳನ್ನು ನಿರ್ದೇಶಿಸಿದ್ದರು. ‘ಹಲೋ ಜೈ ಹಿಂದ್!’ (2011) ಮತ್ತು ‘ಅಜಿಂತಾ’ (2012) ಪ್ರಮುಖ ಸಿನಿಮಾಗಳು. ಇವರು ಏಕೆ ಆತ್ಮಹತ್ಯೆ ಮಾಡಿಕೊಂಡರು ಎಂಬ ಬಗ್ಗೆ ಇನ್ನಷ್ಟೆ ಗೊತ್ತಾಗಬೇಕಿದೆ.

Exit mobile version