Site icon Vistara News

Art Director Nitin Desai: ಕಲಾ ನಿರ್ದೇಶಕ ನಿತಿನ್ ದೇಸಾಯಿ ಆತ್ಮಹತ್ಯೆ ಮಾಡಿಕೊಂಡಿದ್ಯಾಕೆ?

Art Director Nitin Desai

ಬೆಂಗಳೂರು: ಕಲಾ ನಿರ್ದೇಶಕ ನಿತಿನ್ ದೇಸಾಯಿ (Art Director Nitin Desai) ಅವರು ಕರ್ಜಾತ್ ಬಳಿಯ ಖಲಾಪುರ್ ರಾಯಗಢ್‌ನಲ್ಲಿರುವ ಅವರ ಎನ್‌ಡಿ ಸ್ಟುಡಿಯೊದಲ್ಲಿ ಶವವಾಗಿ ಆಗಸ್ಟ್‌ 2ರಂದು ಪತ್ತೆಯಾದರು. ನಿತಿನ್ ದೇಸಾಯಿ ಆರ್ಥಿಕ ಮುಗ್ಗಟ್ಟಿನಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕರ್ಜಾತ್‌ನ ಸ್ಥಳೀಯ ಬಿಜೆಪಿ ಶಾಸಕ ಮಹೇಶ್ ಬಾಲ್ಡಿ ಖಚಿತಪಡಿಸಿದ್ದಾರೆ. ಹಲವು ಚಿತ್ರಗಳಿಗೆ ಕಲಾ ನಿರ್ದೇಶನ ಮಾಡಿದ್ದ ನಿತಿನ್ 252 ಕೋಟಿ ರೂ. ಸಾಲ ಹೊತ್ತಿದ್ದರು ಎಂತಲೂ ವರದಿಯಾಗಿದೆ.

ಬಿಜೆಪಿ ಶಾಸಕ ಮಹೇಶ್ ಬಾಲ್ಡಿ ಈ ಬಗ್ಗೆ , ‘ಆರ್ಥಿಕವಾಗಿ ತೀರಾ ಸಂಕಷ್ಟದಲ್ಲಿದ್ದ ನಿತಿನ್, ಎರಡು ತಿಂಗಳ ಹಿಂದೆ ನನ್ನ ಬಳಿ ಈ ವಿಷಯವನ್ನು ಹಂಚಿಕೊಂಡಿದ್ದರು. ತಮ್ಮ ಎನ್‌ಡಿ ಸ್ಟುಡಿಯೊ ಪರಿಸ್ಥಿತಿ ಉತ್ತಮವಾಗಿಲ್ಲ. ಚಿತ್ರೀಕರಣಗಳು ನಡೆಯುತ್ತಿಲ್ಲ. ಮಳೆಗಾಲದ ನಂತರ ಚಿತ್ರಗಳು ಬರಬಹುದು ಎಂಬ ಭರವಸೆ ವ್ಯಕ್ತಪಡಿಸಿದ್ದರು. ಆರ್ಥಿಕ ಸಂಕಷ್ಟವೇ ಅವರು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವಿರಬಹುದು’ ಎಂದಿದ್ದಾರೆ. ದೇಸಾಯಿಯವರ ಕಂಪನಿ, 2016 ಮತ್ತು 2018 ರಲ್ಲಿ ECL ಫೈನಾನ್ಸ್‌ನಿಂದ 185 ಕೋಟಿ ರೂ. ಲೋನ್‌ ಕೂಡ ಪಡೆದುಕೊಂಡಿತ್ತು ಎಂತಲೂ ವರದಿಗಾಗಿದೆ.

ʻʻಸೈಬರ್ ವಿಧಿವಿಜ್ಞಾನ ತಂಡ, ಶ್ವಾನ ದಳ ಹಾಗೂ ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಸಾಕ್ಷ ಸಂಗ್ರಹಿಸಿದ್ದಾರೆ. ಎಲ್ಲಾ ಆಯಾಮಗಳಿಂದಲೂ ಪ್ರಕರಣದ ತನಿಖೆ ನಡೆಸಲಾಗುತ್ತಿದೆ’ ಎಂದು ಪೊಲೀಸ್ ವರಿಷ್ಠಾಧಿಕಾರಿ ಸೋಮನಾಥ ಘಾರ್ಗೆ ತಿಳಿಸಿದ್ದಾರೆ.

ಇದನ್ನೂ ಓದಿ: Art Director Nitin Desai: ಕಲಾ ನಿರ್ದೇಶಕ ನಿತಿನ್ ದೇಸಾಯಿ ಆತ್ಮಹತ್ಯೆ; ಚಿತ್ರರಂಗದ ಗಣ್ಯರು ಹೇಳಿದ್ದೇನು?

ಹಿಂದಿ, ಮರಾಠಿ ಕಿರುತೆರೆಯಲ್ಲೂ ಕೆಲಸ ಮಾಡಿದ್ದರು. ಕಲಾ ನಿರ್ದೇಶನಕ್ಕಾಗಿ 4 ಬಾರಿ ರಾಷ್ಟ್ರ‌ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು. ಆಗಸ್ಟ್ 9ಕ್ಕೆ 58ನೇ ಹುಟ್ಟುಹಬ್ಬ ಆಚರಿಸಿಕೊಳ್ಳಬೇಕಿದ್ದ ನಿತಿನ್, ಕರ್ಜತ್‌ನ ಎನ್‌ಡಿ ಸ್ಟುಡಿಯೊದಲ್ಲಿ (nd film studio karjat) ನೇಣಿಗೆ ಶರಣಾಗಿದ್ದಾರೆ.

‘ಹಮ್ ದಿಲ್ ದೇ ಚುಕೇ ಸನಮ್’, ‘ದೇವದಾಸ್’, ‘ಜೋಧಾ ಅಕ್ಬರ್’, ‘ಲಗಾನ್’, ಮತ್ತು ‘ಬಾಜಿರಾವ್ ಮಸ್ತಾನಿ’ ಸೇರಿದಂತೆ ಕೆಲವು ಬ್ಲಾಕ್‌ಬಸ್ಟರ್ ಚಿತ್ರಗಳಿಗೆ ಅದ್ಧೂರಿ ಸೆಟ್‌ಗಳನ್ನು ವಿನ್ಯಾಸಗೊಳಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.

ಎರಡು ದಶಕಗಳ ಕಾಲದ ಅವರ ವೃತ್ತಿಜೀವನದಲ್ಲಿ, ದೇಸಾಯಿ ಅವರು ಸಂಜಯ್ ಲೀಲಾ ಬನ್ಸಾಲಿ, ಅಶುತೋಷ್ ಗೋವಾರಿಕರ್, ವಿಧು ವಿನೋದ್ ಚೋಪ್ರಾ, ರಾಜ್‌ಕುಮಾರ್ ಹಿರಾನಿ ಮತ್ತು ಇತರರು ಸೇರಿದಂತೆ ಹಲವಾರು ಧೀಮಂತ ಚಲನಚಿತ್ರ ನಿರ್ಮಾಪಕರೊಂದಿಗೆ ಕೆಲಸ ಮಾಡಿದ್ದಾರೆ. 52 ಎಕರೆಯಲ್ಲಿ ಇರುವ ಇವರದ್ದೇ ಎನ್‌ಡಿ ಸ್ಟುಡಿಯೊ ಹಲವಾರು ಫಿಲ್ಮ್ ಸೆಟ್‌ಗಳಿಗೆ ನೆಲೆಯಾಗಿದೆ. ಅದರಲ್ಲಿ ಪ್ರಮುಖವಾದದ್ದು ‘ಜೋಧಾ ಅಕ್ಬರ್’.

ಇದನ್ನೂ ಓದಿ: Art Director Nitin Desai: ʻಲಗಾನ್‌ʼ ಸಿನಿಮಾ ಖ್ಯಾತಿಯ ಕಲಾ ನಿರ್ದೇಶಕ ನಿತಿನ್ ದೇಸಾಯಿ ಆತ್ಮಹತ್ಯೆ!

ಚಲನಚಿತ್ರಗಳು ಮಾತ್ರವಲ್ಲದೆ, ರಿಯಾಲಿಟಿ ಶೋ ‘ಬಿಗ್ ಬಾಸ್’ ನ ಹಲವಾರು ಸೀಸನ್‌ಗಳನ್ನು ಎನ್‌ಡಿ ಸ್ಟುಡಿಯೋಸ್‌ನಲ್ಲಿ ಆಯೋಜಿಸಲಾಗಿದೆ. ನಿತಿನ್‌ ಒಂದೆರಡು ಚಿತ್ರಗಳನ್ನು ನಿರ್ದೇಶಿಸಿದ್ದರು. ‘ಹಲೋ ಜೈ ಹಿಂದ್!’ (2011) ಮತ್ತು ‘ಅಜಿಂತಾ’ (2012) ಪ್ರಮುಖ ಸಿನಿಮಾಗಳು.

Exit mobile version