Site icon Vistara News

Arti Singh: ಉದ್ಯಮಿ ಜತೆ ಎಂಗೇಜ್‌ ಆದ ʻಬಿಗ್ ಬಾಸ್ʼ ಸ್ಪರ್ಧಿ!

Arti Singh

ಬೆಂಗಳೂರು: ಜನಪ್ರಿಯ ಕಿರುತೆರೆ ನಟಿ ಮತ್ತು ‘ಬಿಗ್ ಬಾಸ್ 13’ ಖ್ಯಾತಿಯ ಆರತಿ ಸಿಂಗ್ (Arti Singh) ಈಗ ಸುದ್ದಿಯಲ್ಲಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ, ಆರತಿ ಸಿಂಗ್ ಮದುವೆ ಬಗ್ಗೆ ಮಾತನಾಡಿದ್ದಾರೆ. ಯಾವಾಗ ಮದುವೆ ಎಂಬುದುನ್ನೂ ಬಹಿರಂಪಡಿಸಿದ್ದಾರೆ.

ಇತ್ತೀಚಿನ ಸಂದರ್ಶನವೊಂದರಲ್ಲಿ ಆರತಿ ಸಿಂಗ್ ಅವರು ಉದ್ಯಮಿ ದೀಪಕ್ ಚೌಹಾನ್ ಅವರೊಂದಿಗೆ ಮದುವೆಯಾಗುತ್ತಿರುವುದಾಗಿ ಬಹಿರಂಗಪಡಿಸಿದರು. ಇದೊಂದು ಅರೇಂಜ್ಡ್ ಮ್ಯಾರೇಜ್ ಆಗಿದ್ದು, ಕಳೆದ ವರ್ಷ ನವೆಂಬರ್‌ನಲ್ಲಿ ಚೌಹಾಣ್ ಅವರನ್ನು ಮದುವೆಯಾಗಲು ನಿರ್ಧರಿಸಿದ್ದೆ ಎಂದು ಹೇಳಿದರು.

ಆರತಿ ಸಿಂಗ್ ಮಾತನಾಡಿ ʻʻಇದು ಸಂಪೂರ್ಣವಾಗಿ ಅರೇಂಜ್ಡ್ ಮ್ಯಾರೇಜ್. ಕಳೆದ ವರ್ಷ ಜುಲೈ 23ರಂದು ಪರಿಚಯವಾದೆವುʼʼಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Sanjay Leela Bhansali: ಬನ್ಸಾಲಿಯ ‘ಲವ್ ಆ್ಯಂಡ್ ವಾರ್’ಗೆ 1964ರ ಹಿಟ್‌ ಸಿನಿಮಾದಿಂದ ಸ್ಫೂರ್ತಿ!

ಜನವರಿ 1 ರಂದು ದೆಹಲಿಯ ದೇವಸ್ಥಾನದಲ್ಲಿ ಚೌಹಾಣ್ ತನಗೆ ಪ್ರಪೋಸ್ ಮಾಡಿದ್ದನ್ನು ಸಹ ನಟಿ ಬಹಿರಂಗಪಡಿಸಿದರು. “ಜನವರಿ 1 ರಂದು, ದೆಹಲಿಯಲ್ಲಿರುವ ನನ್ನ ಗುರೂಜಿಯ ದೇವಸ್ಥಾನದಲ್ಲಿ ದೀಪಕ್ ನನಗೆ ಉಂಗುರದೊಂದಿಗೆ ಮದುವೆಯ ಪ್ರಸ್ತಾಪವನ್ನು ಮಾಡಿದರು. ನಾನು ಬಳಿಕ ಒಪ್ಪಿದೆʼʼಎಂದು ಹೇಳಿಕೊಂಡಿದ್ದಾರೆ. ಏಪ್ರಿಲ್ 25 ರಂದು ನಮ್ಮಿಬ್ಬರು ಮದುವೆ. ಮದುವೆಯ ನಂತರ ದೇವಸ್ಥಾನಕ್ಕೆ ಭೇಟಿ ನೀಡಬೇಕು ಎಂದಿದ್ದೇವೆʼʼಎಣದರು. ‘ದೇವೋನ್ ಕೆ ದೇವ್…ಮಹಾದೇವ್’ ಚಿತ್ರದಲ್ಲಿ ʻವಾಣಿʼ ಪಾತ್ರದಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ.

Exit mobile version