Site icon Vistara News

Shahrukh Khan: ಶಾರುಖ್‌ ಸ್ಟೆಪ್ಸ್‌ ಕಂಡು ಖುಷಿ ಪಟ್ಟ ಮಗ ಆರ್ಯನ್‌: ಕೊನೆಗೂ ನಗು ಕಂಡೆವು ಎಂದ ನೆಟ್ಟಿಗರು!

Aryan Khan reaction for Shah Rukh Khan’s performance

ಮುಂಬೈ: ಮುಂಬೈನಲ್ಲಿ ನೀತಾ ಮುಖೇಶ್ ಅಂಬಾನಿ ಕಲ್ಚರಲ್ ಸೆಂಟರ್ (ಎನ್‌ಎಂಎಸಿಸಿ) ಉದ್ಘಾಟನೆಯ ಸಮಾರಂಭದಲ್ಲಿ ಬಾಲಿವುಡ್‌ ಸೆಲೆಬ್ರಿಟಿಗಳು ರಂಜಿಸಿದ್ದಾರೆ. ಟಾಮ್ ಹಾಲೆಂಡ್, ಪೆನೆಲೋಪ್ ಕ್ರೂಜ್, ಗಿಗಿ ಹಡಿದ್ ಮತ್ತು ಝೆಂಡಯಾ ಅವರಂತಹ ಅಂತಾರಾಷ್ಟ್ರೀಯ ಸೆಲೆಬ್ರಿಟಿಗಳಿಂದ ಹಿಡಿದು ಭಾರತೀಯ ತಾರೆಗಳಾದ ರಜನಿಕಾಂತ್, ಶಾರುಖ್ ಖಾನ್, ದೀಪಿಕಾ ಪಡುಕೋಣೆ, ಐಶ್ವರ್ಯಾ ರೈ, ಪ್ರಿಯಾಂಕಾ ಚೋಪ್ರಾ ಮತ್ತು ಸಲ್ಮಾನ್ ಖಾನ್ ಸೇರಿದ್ದರು. ಎರಡನೇ ದಿನ, ಶಾರುಖ್‌ ಖಾನ್‌ ರಣವೀರ್‌ ಸಿಂಗ್ ಮತ್ತು ವರುಣ್ ಧವನ್ ವೇದಿಕೆ ಮೇಲೆ ಪಠಾಣ್‌ ಸಿನಿಮಾ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ವೇಳೆ ಶಾರುಖ್‌ (Shahrukh Khan) ಪುತ್ರ ಆರ್ಯನ್ ಖಾನ್ ಸಂತಸ ವ್ಯಕ್ತಪಡಿಸಿರುವ ವಿಡಿಯೊ ವೈರಲ್‌ ಆಗಿದೆ.

ತಮ್ಮ ನೃತ್ಯದ ಮೂಲಕ ಪ್ರೇಕ್ಷಕರನ್ನು ಬೆರಗುಗೊಳಿಸಿದ ಶಾರುಖ್, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪುತ್ರ ಆರ್ಯನ್ ಖಾನ್ ಅವರಿಂದ ವಿಶೇಷ ಪ್ರತಿಕ್ರಿಯೆ ಪಡೆದರು. ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿರುವ ವಿಡಿಯೊದಲ್ಲಿ, ಆರ್ಯನ್ ನಗುತ್ತಿರುವ ದೃಶ್ಯ ಸೆರೆಯಾಗಿದೆ. ಅಷ್ಟೇ ಅಲ್ಲದೇ ಶಾರುಖ್‌ ಅವರು ಡ್ಯಾನ್ಸ್‌ ಮಾಡುತ್ತಿರುವುದನ್ನು ಆರ್ಯನ್‌ ನೋಡಿ ಖುಷಿ ಪಟ್ಟಿದ್ದಾರೆ.

ವಿಡಿಯೊ ವೈರಲ್‌ ಆಗುತ್ತಿದ್ದಂತೆ ಶಾರುಖ್‌ ಅಭಿಮಾನಿಗಳು ಆರ್ಯನ್ ಅವರನ್ನು ʻಹೆಮ್ಮೆಯ ಮಗʼ ಎಂದು ಕರೆದಿದ್ದಾರೆ. ಅಭಿಮಾನಿಗಳಲ್ಲಿ ಒಬ್ಬರು ಹೀಗೆ ಬರೆದಿದ್ದಾರೆ, “ಅವರು ತಮ್ಮ ತಂದೆಯ ಅಭಿನಯವನ್ನು ನೋಡಿ ನಗುತ್ತಿದ್ದಾರೆʼʼಎಂದು ಕಾಮೆಂಟ್‌ ಮಾಡಿದ್ದಾರೆ. ಮತ್ತೊಬ್ಬ ಅಭಿಮಾನಿ, ʻʻಕೊನೆಗೂ ನಗುತ್ತಿದ್ದಾರೆ. ಮುಖದಲ್ಲಿ ನಗು ನೋಡಿದೆ” ಎಂದು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: Nora Fatehi | 30ರ ನಟಿ ನೋರಾ ಫತೇಹಿ ಜತೆ 25ರ ಆರ್ಯನ್ ಖಾನ್ ಡೇಟಿಂಗ್? ಫೋಟೊ ವೈರಲ್‌!

ಶಾರುಖ್‌ ಡ್ಯಾನ್ಸ್‌

ಖುಷಿ ಪಟ್ಟ ಆರ್ಯನ್‌

ರೆಡ್ ಕಾರ್ಪೆಟ್ ಮೇಲೆ ಸಲ್ಮಾನ್ ಖಾನ್ ಜತೆ ಆರ್ಯನ್ ಖಾನ್ ಪೋಸ್ ನೀಡಿದ್ದಾರೆ. ಮೊದಲು ಗೌರಿ ಖಾನ್, ಸುಹಾನಾ ಖಾನ್ ಮತ್ತು ಆರ್ಯನ್ ಅವರೊಂದಿಗೆ ಪೋಸ್ ನೀಡಿದ ಸಲ್ಮಾನ್, ಆರ್ಯನ್ ಅವರೊಂದಿಗೆ ಪ್ರತ್ಯೇಕವಾಗಿ ಪೋಸ್ ನೀಡಿದರು.

ಮತ್ತೊಂದು ವಿಡಿಯೊದಲ್ಲಿ, ನೀತಾ ಅಂಬಾನಿ ಮಾಧ್ಯಮಗಳೊಂದಿಗೆ ಸಂವಹನ ನಡೆಸುತ್ತಿರುವುದನ್ನು ಕಾಣಬಹುದು ಮತ್ತು “ನಾವೆಲ್ಲರೂ ಹೆಮ್ಮೆಪಡುವ ಭಾರತೀಯರು” ಎಂದು ಹೇಳಿದರು. ಎನ್‌ಎಂಎಸಿಸಿ ಕುರಿತು ಮಾತನಾಡಿದ ನೀತಾ, “ನಮ್ಮ ರಾಷ್ಟ್ರದ ಗೌರವ, ಸಾಂಸ್ಕೃತಿಕ ಕೇಂದ್ರವು ಭಾರತೀಯ ಕಲೆಗಳನ್ನು ಸಂರಕ್ಷಿಸುವ ಮತ್ತು ಉತ್ತೇಜಿಸುವ ಗುರಿಯನ್ನು ಹೊಂದಿದೆ. ನಮ್ಮ ಸ್ಥಳಗಳು ಪ್ರತಿಭೆಯನ್ನು ಪೋಷಿಸುತ್ತವೆ ಮತ್ತು ಪ್ರೇರೇಪಿಸುತ್ತವೆ, ಭಾರತ ಮತ್ತು ಪ್ರಪಂಚದಾದ್ಯಂತದ ಸಮುದಾಯಗಳನ್ನು ಒಟ್ಟುಗೂಡಿಸುತ್ತವೆ ಎಂದು ನಾನು ಭಾವಿಸುತ್ತೇನೆʼʼಎಂಂದರು.

Exit mobile version