Site icon Vistara News

Shah Rukh Khan: ಶಾರುಖ್‌ ಜತೆಗಿನ ಕೆಲಸದ ಅನುಭವ ಹಂಚಿಕೊಂಡ ಮಗ ಆರ್ಯನ್

Aryan Khan reveals working with Shah Rukh Khan

ಬೆಂಗಳೂರು: ಆರ್ಯನ್ ಖಾನ್ ಇತ್ತೀಚೆಗಷ್ಟೇ ತಮ್ಮ D’YAVOL X ಉಡುಪಿನ ಬ್ರ್ಯಾಂಡ್‌ನ ಮೊದಲ ಜಾಹೀರಾತಿನೊಂದಿಗೆ ನಿರ್ದೇಶಕರಾಗಿ ಪದಾರ್ಪಣೆ ಮಾಡಿದರು. ಜಾಹೀರಾತಿನಲ್ಲಿ ಆರ್ಯನ್ ಖಾನ್ ತಂದೆ ಶಾರುಖ್ ಖಾನ್ ( Shah Rukh Khan) ಹೊರತುಪಡಿಸಿ ಬೇರೆ ಯಾರೂ ಇರಲಿಲ್ಲ. ಸಂದರ್ಶನದಲ್ಲಿ, ಆರ್ಯನ್ ಖಾನ್ ಬ್ರ್ಯಾಂಡ್ ಬಗ್ಗೆ ಮಾತನಾಡಿದ್ದಾರೆ. ಸೆಟ್‌ಗಳಲ್ಲಿ ತಂದೆಯೊಂದಿಗೆ ಕೆಲಸ ಮಾಡಿರುವ ಅನುಭವ ಹೇಗಿತ್ತು ಎಂಬದನ್ನು ಹಂಚಿಕೊಂಡಿದ್ದಾರೆ.

ಆರ್ಯನ್ ಖಾನ್ ಮಾತನಾಡಿ “ನನ್ನ ತಂದೆಯೊಂದಿಗೆ ಕೆಲಸ ಮಾಡುವುದು ಎಂದಿಗೂ ನನಗೆ ಚಾಲೆಂಜಿಂಗ್‌ ಎನಿಸಲಿಲ್ಲ. ಏಕೆಂದರೆ, ಅವರ ಅನುಭವ ಹಾಗಿದೆ. ಅವರು ಸೆಟ್‌ನಲ್ಲಿ ಪ್ರತಿಯೊಬ್ಬರ ಕೆಲಸವನ್ನು ಸುಲಭಗೊಳಿಸುತ್ತಿದ್ದರು. ಎಲ್ಲ ಸಿಬ್ಬಂದಿಗೆ ಕೆಲಸ ಆರಾಮದಾಯಕವಾಗಿತ್ತು. ಸೆಟ್‌ನಲ್ಲಿ ಅವರ ಬಗ್ಗೆ ಅಪಾರವಾದ ಗೌರವವನ್ನು ಹೊಂದಿದ್ದಾರೆ. ಅವರು ಸೆಟ್‌ನಲ್ಲಿದ್ದರೆ ನಾನು ಇನ್ನೂ ಹೆಚ್ಚಿಗೆ ಗಮನ ನೀಡುತ್ತಿದ್ದೆ. ನಾನು ಕಲಿಯಬಹುದಾದ ಸಂಗತಿಗಳನ್ನು ಮಿಸ್‌ ಮಾಡಿಕೊಳ್ಳುವುದಿಲ್ಲʼʼ ಎಂದು ಹೇಳಿದ್ದಾರೆ.

ಶಾರುಖ್ ಎಂದಾದರೂ ಈ ಜಾಹಿರಾತಿಗೆ ಇನ್‌ಪುಟ್ ನೀಡಿದ್ದಾರೆಯೇ ಎಂಬ ಪ್ರಶ್ನೆಗೆ ʻʻ“ಖಂಡಿತವಾಗಿಯೂ ಅವರು ತಮ್ಮ ಐಡಿಯಾ ನೀಡಿದ್ದಾರೆ. ಈ ಪ್ರಾಜೆಕ್ಟ್‌ನಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರಿಗೂ ತಮ್ಮ ಇನ್‌ಪುಟ್ ನೀಡಿದ್ದಾರೆ. ಶಾರುಖ್‌ ಮಾತನ್ನು ಕೇಳಲು ಎಲ್ಲರೂ ಬಯಸುತ್ತಿದ್ದರು ʼʼ ಎಂದು ಆರ್ಯನ್‌ ಹೇಳಿದ್ದಾರೆ.

ಇದನ್ನೂ ಓದಿ: Nora Fatehi | 30ರ ನಟಿ ನೋರಾ ಫತೇಹಿ ಜತೆ 25ರ ಆರ್ಯನ್ ಖಾನ್ ಡೇಟಿಂಗ್? ಫೋಟೊ ವೈರಲ್‌!

ಆರ್ಯನ್ ಖಾನ್ ಪೋಸ್ಟ್‌

ಆರ್ಯನ್ ಖಾನ್ ಕೂಡ ಚಿತ್ರರಂಗ ಪ್ರವೇಶಿಸಲು ಸಜ್ಜಾಗಿದ್ದಾರೆ. ಇತ್ತೀಚಿಗೆ ಪ್ರಿ-ಪ್ರೊಡಕ್ಷನ್ ಕೆಲಸದ ಬಗ್ಗೆ ಅವರು ಮಾಹಿತಿ ಹಂಚಿಕೊಂಡಿದ್ದರು. ಹೀರೊ ಆಗಿ ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಿಲ್ಲ. ಬದಲಿಗೆ, ನಿರ್ದೇಶಕನಾಗಿ ಬಾಲಿವುಡ್​ಗೆ ಅವರು ಕಾಲಿಡುತ್ತಿದ್ದಾರೆ. ಈಗಾಗಲೇ ತಮ್ಮ ವೆಬ್ ಸೀರೀಸ್‌ ಬರವಣಿಗೆಯನ್ನು ಪೂರ್ಣಗೊಳಿಸಿದ್ದಾರೆ. ಇಸ್ರೇಲಿ ನಟ ಮತ್ತು ಚಿತ್ರಕಥೆ ಬರಹಗಾರರಾದ ಲಿಯರ್ ರೋಜ್ ಈ ಯೋಜನೆಗೆ ಬೆಂಬಲವಾಗಿದ್ದಾರೆ ಎಂದು ವರದಿಯಾಗಿದೆ.

Exit mobile version