Site icon Vistara News

Asha Bhosle: 90ನೇ ವಸಂತಕ್ಕೆ ಕಾಲಿಟ್ಟ ಖ್ಯಾತ ಗಾಯಕಿ ಆಶಾ ಭೋಂಸ್ಲೆ

Asha Bhosle

ಬೆಂಗಳೂರು: ಸೆಪ್ಟೆಂಬರ್ 8ರಂದು 90ನೇ ವಸಂತಕ್ಕೆ ಕಾಲಿಟ್ಟಿದ್ದಾರೆ ಗಾಯಕಿ ಆಶಾ ಭೋಂಸ್ಲೆ (Asha Bhosle). “90 ನೇ ವಯಸ್ಸಿನಲ್ಲಿ, ನಾನು ವೇದಿಕೆಯಲ್ಲಿ ಮೂರು (asha bhosle birthday) ಗಂಟೆಗಳ ಕಾಲ ನಿಂತು ಹಾಡುಗಳನ್ನು ಹಾಡುತ್ತಿದ್ದೇನೆ. ಈ ವಯಸ್ಸಿನಲ್ಲಿ ನಾನು ಇದನ್ನು ಮಾಡಬಲ್ಲೆ ಎಂದು ನನಗೆ ಸಂತೋಷವಾಗಿದೆ” ಎಂದು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಆಶಾ ಭೋಂಸ್ಲೆ ಹೇಳಿದರು. 1943ರಲ್ಲಿ ಮರಾಠಿ ಚಲನಚಿತ್ರ “ಮಜಾ ಬಾಲ್” ಗಾಗಿ ತಮ್ಮ ಮೊದಲ ಚಲನಚಿತ್ರ ಗೀತೆ “ಚಲಾ ಚಲಾ ನವ್ ಬಾಲಾ” (Chala Chala Nav Bala) ಹಾಡಿದರು (asha bhosle songs). 80 ವರ್ಷಗಳಲ್ಲಿ ಸುಮಾರು 12,000 ಹಾಡುಗಳನ್ನು ಹಾಡಿದ್ದಾರೆ.

ಮಾಧ್ಯಮವೊಂದರ ಸಂದರ್ಶನದಲ್ಲಿ ಹಲವಾರು ವಿಚಾರಗಳನ್ನು ಆಶಾ ಭೋಂಸ್ಲೆ ಹಂಚಿಕೊಂಡರು. ʻʻನನಗೆ ಸಂಗೀತವೇ ನನ್ನ ಉಸಿರು. ಈ ಆಲೋಚನೆಯೊಂದಿಗೆ ನಾನು ಬದುಕುತ್ತಿದ್ದೇನೆ. ಸಂಗೀತಕ್ಕೆ ಸಾಕಷ್ಟು ಕೊಟ್ಟಿದ್ದೇನೆ. ಅನೇಕ ಬಾರಿ ನಾನು ಬದುಕಲು ಸಾಧ್ಯವಿಲ್ಲ ಎಂದು ನಾನು ಭಾವಿಸಿದ್ದೆ. ಆದರೆ ಸಂಗೀತ ನನ್ನ ಕೈ ಬಿಡಲಿಲ್ಲ . ಸಂಗೀತವು ಸದಾ ಹರಿಯುವ ನದಿಯಂತೆ ಕೊನೆಗೊಳ್ಳುವುದಿಲ್ಲʼʼ ಎನ್ನುತ್ತಾರೆ ಆಶಾ ಭೋಂಸ್ಲೆ.

“ಪಿಯಾ ತೂ ಅಬ್ ತೊ ಆಜಾ” ಮತ್ತು “ಓ ಹಸೀನಾ ಜುಲ್ಫಾನ್ ವಾಲಿ” ನಂತಹ ಹಾಡುಗಳಿಂದ ಹಿಡಿದು “ದಿಲ್ ಚೀಜ್ ಕ್ಯಾ ಹೈ” ಮತ್ತು ಶಾಸ್ತ್ರೀಯ “ತೋರಾ ಮಾನ್ ದರ್ಪಣ್ ಕೆಹ್ಲಾಯೆ” ನಂತಹ ಭಾವಪೂರ್ಣ ಗಜಲ್‌ಗಳವರೆಗೆ, ಆಶಾ ಭೋಂಸ್ಲೆ ಲಕ್ಷಾಂತರ ಭಾರತೀಯರ ಧ್ವನಿಯಾಗಿದ್ದಾರೆ. ಅವರ ಸಂಗೀತವು ಅಂತಾರಾಷ್ಟ್ರೀಯ ಬ್ಯಾಂಡ್‌ಗಳಲ್ಲಿ ಜನಪ್ರಿಯತೆಯನ್ನು ಗಳಿಸಿದೆ. 2020 ರಲ್ಲಿ, ಅವರು ಆಧ್ಯಾತ್ಮಿಕ ಗುರು ಶ್ರೀ ಶ್ರೀ ರವಿಶಂಕರ್ ಅವರಿಗೆ ಸಮರ್ಪಿತವಾದ “ಮೇನ್ ಹೂನ್” ಎಂಬ ಗೀತೆಯೊಂದಿಗೆ ಯುಟ್ಯೂಬ್‌ಗೆ ಪ್ರವೇಶಿಸಿದರು.

ಇದನ್ನೂ ಓದಿ: ರಾಜ ಮಾರ್ಗ ಅಂಕಣ |ಎಂ = ಮ್ಯೂಸಿಕ್ = ಮಂಗೇಶ್ಕರ್! ಈ ಕುಟುಂಬ ಸಮರ್ಪಿಸಿದ್ದು 1 ಲಕ್ಷಕ್ಕೂ ಅಧಿಕ ಅಮರ ಹಾಡುಗಳನ್ನು!

ಆಶಾ ಭೋಂಸ್ಲೆ ಸಂದರ್ಶನದಲ್ಲಿ ಮಾತನಾಡಿ ʻʻಸಂಗೀತ ನದಿಯಂತೆ. ಸಂಗೀತ ಉದ್ಯಮದಲ್ಲಿ ಏರಿಳಿತಗಳನ್ನು ನ್ಯಾವಿಗೇಟ್ ಮಾಡುವುದು ಸುಲಭವಲ್ಲ. ಪ್ರತಿಯೊಂದು ಕ್ಷೇತ್ರದಲ್ಲೂ ರಾಜಕೀಯವಿದೆ. ಸಿನಿಮಾಗಳಲ್ಲೂ ರಾಜಕೀಯವಿದೆ. ನಾನು ಡೆಸ್ಟಿನಿಯನ್ನು ಬಹಳಷ್ಟು ನಂಬುತ್ತೇನೆʼʼ ಎಂದು ಹೇಳಿದರು.

ಸಂಗೀತದ ಜರ್ನಿಯನ್ನು ಕುರಿತು ಮಾತನಾಡಿ ʻʻವೇದಿಕೆಗೆ ಹೋಗುವ ಮೊದಲು, ನಾನು ತುಂಬಾ ನರ್ವಸ್ ಆಗಿದ್ದೆ, ಎಲ್ಲೋ ಓಡಿ ಹೋಗಬೇಕು ಎಂದು ಎಷ್ಟೋ ಬಾರಿ ಅನ್ನಿಸಿದ್ದೂ ಇದೆ. ಬಳಿಕ ದೇವರು ಮತ್ತು ನನ್ನ ಹೆತ್ತವರನ್ನು ನೆನಪಿಸಿಕೊಂಡು, ವೇದಿಕೆಯ ಮೇಲೆ ಇರುವ ಕ್ಷಣದಲ್ಲಿ ಪ್ರೇಕ್ಷಕರ ಪ್ರೀತಿಯನ್ನು ನೋಡಿ ಎಲ್ಲವನ್ನೂ ಮರೆತುಬಿಡುತ್ತೇನೆ”ಎಂದು ಹೇಳಿದರು.

ಇದನ್ನೂ ಓದಿ: Vani Jayaram Passes Away: ಕನ್ನಡದಲ್ಲಿ 600 ಸೇರಿ 10 ಸಾವಿರಕ್ಕೂ ಅಧಿಕ ಹಾಡು ಹಾಡಿದ್ದ ವಾಣಿ ಜಯರಾಮ್‌

ಗಾಯಕಿ ಮಾತು ಮುಂದುವರಿಸಿ ʻʻಕೆಲವು ಹಳೆಯ ಹಾಡುಗಳು ಇನ್ನೂ ಹಿಟ್ ಆಗಿವೆ. ಉದಾಹರಣೆಗೆ ‘ದಮ್ ಮಾರೋ ದಮ್’ 50 ವರ್ಷಕ್ಕೂ ಹೆಚ್ಚು ಹಳೆಯ ಹಾಡು ಆದರೆ ಇನ್ನೂ ಜನ ಇಷ್ಟ ಪಡುತ್ತಿದ್ದಾರೆ ಕೆಲವು ಹಳೆಯ ಹಾಡುಗಳನ್ನು ಚೆನ್ನಾಗಿ ಬರೆದಿದ್ದಾರೆ, ಚೆನ್ನಾಗಿ ಸಂಯೋಜಿಸಿದ್ದಾರೆ ಮತ್ತು ಚೆನ್ನಾಗಿ ಹಾಡಿದ್ದಾರೆ. ಮೊಹಮ್ಮದ್ ರಫಿ ಸಾಹಬ್, ಕಿಶೋರ್, ಮುಕೇಶ್ ಜಿ ಮತ್ತು ಇತರ ಎಲ್ಲ ಗಾಯಕರು ತುಂಬಾ ಚೆನ್ನಾಗಿ ಆ ಕಾಲದಲ್ಲಿ ಹಾಡುತ್ತಿದ್ದರುʼʼಎಂದರು.

ಕೆಲವು ದಿನಗಳ ಹಿಂದಯೆಷ್ಟೇ ಆಶಾ ಭೋಂಸ್ಲೆಯವರಿಗೆ) ರೈಸಿಂಗ್ ಇಂಡಿಯಾ SHE ಶಕ್ತಿ (Rising India SHE Shakti) ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ನವದೆಹಲಿಯಲ್ಲಿ ‘ರೈಸಿಂಗ್ ಇಂಡಿಯಾ-She ಶಕ್ತಿ’ ಸಮಾವೇಶದಲ್ಲಿ ಆಶಾ ಭೋಂಸ್ಲೆ ಅವರನ್ನು ಭಾರತದ ರಾಷ್ಟ್ರಪತಿ (President of India) ದ್ರೌಪದಿ ಮುರ್ಮು (Draupadi Murmu) ಅವರು ಗೌರವಿಸಿದ್ದರು.

Exit mobile version