ಬೆಂಗಳೂರು: ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ನಟಿ ಆಶಾ ಪರೇಖ್ (Asha Parekh) ಅವರು ಶಾರುಖ್ ಹಾಗೂ ದೀಪಿಕಾ ಪಡುಕೋಣೆ ಅಭಿನಯದ ʻಪಠಾಣ್ʼ ಸಿನಿಮಾದ ಕೇಸರಿ ವಿವಾದದ ಕುರಿತು ಮಾತನಾಡಿದ್ದಾರೆ. ಪಠಾಣ್ ಸಿನಿಮಾದ ʻಬೇಷರಮ್ ರಂಗ್ʼ ಹಾಡಿನ ವಿವಾದ ತಾರರಕ್ಕೇರಿತ್ತು. ಇದೇ ವಿಚಾರವಾಗಿ ಹಿರಿಯ ನಟಿ ಆಶಾ ಪರೇಖ್ ಸಂದರ್ಶನವೊಂದರಲ್ಲಿ ಸಿನಿಮಾಗೆ ಸಾಥ್ ನೀಡಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ನಟಿ ʻʻಸಿನಿಮಾ ಮನರಂಜನೆಗೆ ಸಂಬಂಧಿಸಿದ್ದು. ದೀಪಿಕಾ ಕೇಸರಿ ಬಣ್ಣದ ಬಟ್ಟೆ ಧರಿಸಿರುವುದಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಜನರು ಚಿತ್ರಗಳನ್ನು ಬಹಿಷ್ಕರಿಸುವುದನ್ನು ಮುಂದುವರಿಸಿದರೆ ಚಲನಚಿತ್ರಗಳ ಉದ್ಯಮಕ್ಕೆ ತುಂಬ ನಷ್ಟವಾಗುತ್ತದೆ. ಕೇಸರಿ ಬಣ್ಣ ಇರುವುದು ಹಲವರ ಸಮಸ್ಯೆ. ನಾವು ಯೋಚಿಸುವ ರೀತಿ ಬದಲಾಗಬೇಕಿದೆ. ಈ ಮೂಲಕ ಬಾಲಿವುಡ್ ಟಾರ್ಗೆಟ್ ಆಗುತ್ತಿದೆ. ಕೆಲ ಚಿತ್ರಗಳು ಹೇಳಿಕೊಳ್ಳುವಂತಹ ದಾಖಲೆ ಮಾಡುತ್ತಿಲ್ಲ. ಹಾಗಾಗಿ ಹಿಂದಿ ಚಿತ್ರರಂಗ ಸೋಲುತ್ತಿದೆ. ಮುಂದೆ ಜನರು ಸಿನಿಮಾ ನೋಡಲು ಥಿಯೇಟರ್‌ಗೆ ಹೋಗುವುದಿಲ್ಲ. ಸಿನಿಮಾಗಳು ಸೋಲುತ್ತಲೇ ಇದ್ದರೆ, ಇನ್ನೊಂದು ಚಿತ್ರ ಹೇಗೆ ನಿರ್ಮಾಣವಾಗುತ್ತದೆʼʼ ಎಂದು ಹಿರಿಯ ನಟಿ ಆಶಾ ಮಾತನಾಡಿದ್ದಾರೆ. ನಟಿ ಆಶಾ ಪರೇಖ್ ಈಗಾಗಲೇ ಚಿತ್ರರಂಗದಿಂದ ದೂರ ಸರಿದಿದ್ದಾರೆ. ಕೆಲವು ಟಿವಿ ಸಂದರ್ಶನಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ | Pathan Controversy | ಪುತ್ರಿ ಜತೆ ಶಾರುಖ್ ಪಠಾಣ್ ಸಿನಿಮಾ ವೀಕ್ಷಿಸಲಿ, ನಟನಿಗೆ ಸವಾಲೆಸೆದ ಮಧ್ಯಪ್ರದೇಶ ಸ್ಪೀಕರ್
ಏನಿದು ವಿವಾದ?
ಪಠಾಣ್ ಸಿನಿಮಾದ ʻಬೇಷರಮ್ ರಂಗ್’ ಹಾಡಿನಲ್ಲಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಕೇಸರಿ ಬಿಕಿನಿ ಹಾಕಿದ್ದಾರೆ ಎನ್ನುವ ವಿವಾದ ತಾರಕಕ್ಕೇರಿದೆ. ಇದು ಬೇಕು ಎಂತಲೇ ಮಾಡಿದ ಹುನ್ನಾರ ಎಂದು ಹಿಂದುಪರ ಸಂಘಟನೆಗಳು ಆರೋಪಿಸುತ್ತಿವೆ. ‘ಬೇಷರಮ್ ರಂಗ್’ ಅಂದರೆ ಕನ್ನಡದಲ್ಲಿ ನಾಚಿಕೆ ಇಲ್ಲದ ಬಣ್ಣ ಎಂದಾಗುತ್ತದೆ. ಕೇಸರಿ ಬಣ್ಣಕ್ಕೆ ನಾಚಿಕೆ ಇಲ್ಲದ ಬಣ್ಣ ಎಂದು ಜರಿದಿದ್ದಾರೆ ಎಂದು ಹೋಲಿಕೆ ಮಾಡಿಕೊಂಡು ಹಲವರು ಗರಂ ಆಗಿದ್ದಾರೆ. ಬೇಕು ಎಂತಲೇ ಈ ರೀತಿ ಕೇಸರಿ ಬಣ್ಣಕ್ಕೆ ಅವಮಾನ ಮಾಡಲಾಗಿದೆ ಎಂದು ಕಮೆಂಟ್ ಕೂಡ ಮಾಡುತ್ತಿದ್ದಾರೆ. ಜನವರಿ 25, 2023ಕ್ಕೆ ಚಿತ್ರ ಬಿಡುಗಡೆಗೊಳ್ಳುತ್ತಿದೆ. ಹಿಂದಿ, ತಮಿಳು ಮತ್ತು ತೆಲುಗಿನಲ್ಲಿ ರಿಲೀಸ್ ಆಗುತ್ತಿರುವುದಾಗಿ ಚಿತ್ರ ತಂಡ ಹಂಚಿಕೊಂಡಿದೆ.
ಇದನ್ನೂ ಓದಿ | Shahrukh Khan | ʻಪಠಾಣ್ʼ ಎರಡನೇ ಹಾಡಿಗೆ ವ್ಯಾಪಕ ಮೆಚ್ಚುಗೆ: ದೀಪಿಕಾ-ಶಾರುಖ್ ಸ್ಟೆಪ್ಸ್‌ಗೆ ಫ್ಯಾನ್ಸ್ ಫಿದಾ!