Site icon Vistara News

Ashika Ranganath: ಚುಟು ಚುಟು ಬೆಡಗಿಗೆ ಸಿಕ್ತು ಬಂಪರ್‌ ಆಫರ್‌; ಆಶಿಕಾ ರಂಗನಾಥ್ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌!

Ashika Ranganath

ಬೆಂಗಳೂರು: ಈಗಾಗಲೇ ಕನ್ನಡತಿ ಶ್ರೀಲೀಲಾ ತೆಲುಗು ಚಿತ್ರರಂಗದಲ್ಲಿ ಬಹು ಬೇಡಿಕೆಯ ನಟಿಯಾಗಿ ಹೊರಹೊಮ್ಮಿದ್ದಾರೆ. ಈ ಸಾಲಿಗೆ ಮತ್ತೊಬ್ಬ ನಟಿ ಸೇರಲಿದ್ದಾರೆ. ಮೂಲಗಳ ಪ್ರಕಾರ ಆಶಿಕಾ ರಂಗನಾಥ್ (Ashika Ranganath) ಅವರಿಗೆ ತೆಲುಗು ಚಿತ್ರರಂಗದಿಂದ ಬಂಪರ್‌ ಆಫರ್‌ ಬಂದಿದೆ. ಇನ್ನೂ ವಿಶೇಷ ಅಂದರೆ ಅಕ್ಕಿನೇನಿ ನಾಗಾರ್ಜುನ (Nagarjuna) ಜತೆ ತೆರೆ (Naa Saami Ranga) ಹಂಚಿಕೊಳ್ಳುವ ಅವಕಾಶ ಅವರದ್ದಾಗಿದೆ ಎನ್ನುತ್ತಿವೆ ಮೂಲಗಳು. ಆದರೆ ಈ ಬಗ್ಗೆ ನಟಿ ಅಧಿಕೃತ ಮಾಹಿತಿಯನ್ನು ಹಂಚಿಕೊಂಡಿಲ್ಲ. ಇದೀಗ ಆಶಿಕಾ ಫ್ಯಾನ್ಸ್‌ ಈ ಸುದ್ದಿ ನಿಜವಾಗಲಿ ಎಂದು ಹಾರೈಸುತ್ತಿದ್ದಾರೆ.

ಮೂಲಗಳ ಪ್ರಕಾರ ಈಗಾಗಲೇ ಆಶಿಕಾ ಅವರ ಫೋಟೋಶೂಟ್ ಮಾಡಲಾಗಿದ್ದು, ಆಶಿಕಾ ಬಹುತೇಕ ಫಿಕ್ಸ್‌ ಆಗಿದ್ದಾರೆ ಎಂದು ವರದಿಯಾಗಿದೆ. ಆಶಿಕಾ ಕೊನೆಯದಾಗಿ ಕಲ್ಯಾಣ್ ರಾಮ್ ಮತ್ತು ಮೈತ್ರಿ ಅವರ ʻಅಮಿಗೋಸ್ ʼಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಈಗ ಮತ್ತೊಮ್ಮೆ ತೆಲುಗು ಆಫರ್‌ ಬಂದಿದೆ. ಅಷ್ಟೇ ಅಲ್ಲದೇ ನಟಿ ತೆಲುಗುವಿನಲ್ಲಿಯೂ ಪಳಗಿರುವುದರಿಂದ ಈ ಸಿನಿಮಾ ಆಶಿಕಾ ಬಹುತೇಕ ಖಚಿತ ಎನ್ನುತ್ತವೆ ಮೂಲಗಳು.

ನಾಗಾರ್ಜುನ ಅವರು ಸದ್ಯ ಬಿಗ್ ಬಾಸ್ ತೆಲುಗು ಸೀಸನ್ 7 ಹೋಸ್ಟ್ ಮಾಡುತ್ತಿದ್ದಾರೆ. ʻನಾ ಸಾಮಿ ರಂಗʼ ಸಿನಿಮಾ ಮತ್ತು ಬಿಗ್ ಬಾಸ್ ಚಿತ್ರೀಕರಣವನ್ನು ಏಕಕಾಲದಲ್ಲಿ ನಡೆಸುತ್ತಿದ್ದಾರೆ. ಅಕ್ಕಿನೇನಿ ನಾಗಾರ್ಜುನ ಅವರು ಇತ್ತೀಚೆಗೆ ಹುಟ್ಟುಹಬ್ಬ ಆಚರಿಸಿಕೊಂಡರು. ಈ ವಿಶೇಷ ದಿನದಂದು ‘ನಾ ಸಾಮಿ ರಂಗ’ ಘೋಷಣೆ ಆಯಿತು. ರಗಡ್ ಅವತಾರದಲ್ಲಿ ನಾಗಾರ್ಜುನ ಕಾಣಿಸಿಕೊಂಡಿದ್ದಾರೆ. ಈ ಚಿತ್ರವನ್ನು ವಿಜಯ್ ಬಿನ್ನಿ ಅವರು ನಿರ್ದೇಶನ ಮಾಡುತ್ತಿದ್ದಾರೆ. ಶ್ರೀನಿವಾಸ ಚಿತ್ತುರಿ ಅವರು ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈ ಚಿತ್ರಕ್ಕೆ ಆಶಿಕಾ ರಂಗನಾಥ್ ಅವರನ್ನು ನಾಯಕಿಯನ್ನಾಗಿ ಮಾಡಿಕೊಳ್ಳುವ ನಿರ್ಧಾರವನ್ನು ತಂಡ ತೆಗೆದುಕೊಂಡಿದೆ.

ಇದನ್ನೂ ಓದಿ: Ashika Ranganath: ಹುಟ್ಟುಹಬ್ಬಕ್ಕೆ ಬ್ರೇಕ್ ಹಾಕಿದ `ಚುಟು ಚುಟು’ ಹುಡುಗಿ ಆಶಿಕಾ ರಂಗನಾಥ್!

2016ರಲ್ಲಿ ಕ್ರೇಜಿ ಬಾಯ್‌ ಚಿತ್ರದ ಮೂಲಕ ಸಿನಿ ರಂಗಕ್ಕೆ ಎಂಟ್ರಿ ಕೊಟ್ಟ ಆಶಿಕಾ ರಂಗನಾಥ್‌, ಶಿವರಾಜ್‌ ಕುಮಾರ್‌ ಅಭಿನಯದ ʻಮಾಸ್‌ ಲೀಡರ್‌ʼ ಚಿತ್ರದಲ್ಲೂ ಬಣ್ಣ ಹಚ್ಚಿದ್ದಾರೆ. ಹೆಚ್ಚಾಗಿ ಹೆಸರು ಕೊಟ್ಟಿದ್ದು ಗಣೇಶ್‌ ಅಭಿನಯದ ʻಮುಗುಳುನಗೆʼʼ ಚಿತ್ರ. ಶ್ರೀಮುರುಳಿ, ಶರಣ್‌ ಹಾಗೂ ಅಜಯ್‌ ರಾವ್‌ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಸುದೀಪ್‌ ಅಭಿನಯದ ಕೋಟಿಗೊಬ್ಬ 3 ಚಿತ್ರದ ಐಟಂ ಹಾಡಿಗೆ ಹೆಜ್ಜೆ ಹಾಕಿದ್ದು ಹಾಗೂ ಜೇಮ್ಸ್‌ ಚಿತ್ರದ ಹಾಡೊಂದರಲ್ಲಿ ಹೆಜ್ಜೆ ಹಾಕಿರುವುದು ಬಿಟ್ಟರೆ ಸ್ಯಾಂಡಲ್‌ವುಡ್‌ ಬಿಗ್‌ ಸ್ಟಾರ್‌ ಜತೆ ನಟಿಸಿಲ್ಲ.

ಸಾಕಷ್ಟು ಸಿನಿಮಾಗಳಲ್ಲಿ ನಟಿ ತೊಡಗಿಗೊಂಡಿದ್ದು ಪವನ್‌ ಒಡೆಯರ್‌ ನಿರ್ದೇಶನದ ರೇಮೊ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡರು. ಇದನ್ನು ಹೊರತುಪಡಿಸಿ ತಮಿಳು ನಟ ಅಥರ್ವ ಜತೆಗಿನ ಚಿತ್ರ, ಸಿಂಪಲ್‌ ಸುನಿ ನಿರ್ದೇಶನದ ಗತವೈಭವ ಚಿತ್ರದಲ್ಲಿ ನಟಿಸಿದ್ದಾರೆ. ಶರಣ್​ ಜತೆ ಅವರು ನಟಿಸಿದ ‘ರ‍್ಯಾಂಬೋ 2’ ಚಿತ್ರದ ‘ಚುಟು ಚುಟು ಅಂತೈತಿ..’ ಹಾಡಿಗೆ ಸಾಕಷ್ಯ ಖ್ಯಾತಿ ಗಳಿಸಿದರು.

Exit mobile version