Site icon Vistara News

Ashika Ranganath: ಹುಟ್ಟುಹಬ್ಬಕ್ಕೆ ಬ್ರೇಕ್ ಹಾಕಿದ `ಚುಟು ಚುಟು’ ಹುಡುಗಿ ಆಶಿಕಾ ರಂಗನಾಥ್!

ashika ranganath

ಬೆಂಗಳೂರು: ಇಂದು ಆಗಸ್ಟ್​ 5ರಂದು ಸ್ಯಾಂಡಲ್‌ವುಡ್‌ ನಟಿ ಆಶಿಕಾ ರಂಗನಾಥ್ (Ashika Ranganath) ಅವರಿಗೆ ಜನುಮದಿನದ ಸಂಭ್ರಮ. ಈ ಪ್ರಯುಕ್ತ ನಟಿಯ ಫ್ಯಾನ್ಸ್‌ ಶುಭ ಹಾರೈಸುತ್ತಿದ್ದಾರೆ. ಆದರೆ ಈ ಬಾರಿ ನಟಿ ಅವರ ಫ್ಯಾನ್ಸ್‌ಗೆ ಬೇಸರದ ಸಂಗತಿಯನ್ನು ಹೇಳಿದ್ದಾರೆ. ಈ ವರ್ಷ ತಮ್ಮ ಮನೆ ಬಳಿ ಯಾರೂ ಬರಬೇಡಿ ಎಂದು ಆಶಿಕಾ ರಂಗನಾಥ್​ ಅವರು ಮನವಿ ಮಾಡಿಕೊಂಡಿದ್ದಾರೆ. ಅದಕ್ಕೆ ಕಾರಣವನ್ನೂ ಅವರು ತಿಳಿಸಿದ್ದಾರೆ.

ಎಲ್ಲರಿಗೂ ನಮಸ್ಕಾರ. “ನಾನು ಪ್ರೀತಿಯಿಂದ ಈ ಪೋಸ್ಟ್‌ ನಿಮ್ಮಲ್ಲಿ ಹಂಚಿಕೊಳ್ಳುತ್ತಿದ್ದೇನೆ. ಈ ಬಾರಿ ನಿಮ್ಮ ಜತೆ ಇರಲು ನನಗೆ ಸಾಧ್ಯವಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ಒಳ್ಳೆಯ ಪ್ಲ್ಯಾನ್​ ಮಾಡೋಣ. ಈ ಬಾರಿ ನಮ್ಮ ಮನೆಗೆ ಬಂದು ಸುಮ್ಮನೆ ಕಾಯಬೇಡಿ. ಅಲ್ಲಿ ನಾನು ನಿಮಗೆ ಸಿಗುವುದಿಲ್ಲ. ಅದರ ಬದಲು ವರ್ಚುವಲ್​ ಆಗಿ ಸಂಪರ್ಕದಲ್ಲಿ ಇರೋಣ. ನಿಮ್ಮೆಲ್ಲರ ಪ್ರೀತಿ ಮತ್ತು ಪ್ರೋತ್ಸಾಹವು ನನಗೆ ಖುಷಿ ನೀಡುತ್ತದೆ ಹಾಗೂ ಇನ್ನಷ್ಟು ಕಷ್ಟಪಟ್ಟು ಕೆಲಸ ಮಾಡಲು ಶಕ್ತಿ ನೀಡುತ್ತದೆ. ನಿಮ್ಮೊಂದಿಗೆ ಸೆಲೆಬ್ರೇಟ್​ ಮಾಡಲು ಕಾಯುತ್ತಿದ್ದೇನೆ’ ಎಂದು ಆಶಿಕಾ ರಂಗನಾಥ್​ ಪೋಸ್ಟ್‌ ಹಂಚಿಕೊಂಡಿದ್ದಾರೆ.

2016ರಲ್ಲಿ ಕ್ರೇಜಿ ಬಾಯ್‌ ಚಿತ್ರದ ಮೂಲಕ ಸಿನಿ ರಂಗಕ್ಕೆ ಎಂಟ್ರಿ ಕೊಟ್ಟ ಆಶಿಕಾ ರಂಗನಾಥ್‌, ಶಿವರಾಜ್‌ ಕುಮಾರ್‌ ಅಭಿನಯದ ʻಮಾಸ್‌ ಲೀಡರ್‌ʼ ಚಿತ್ರದಲ್ಲೂ ಬಣ್ಣ ಹಚ್ಚಿದ್ದಾರೆ. ಹೆಚ್ಚಾಗಿ ಹೆಸರು ಕೊಟ್ಟಿದ್ದು ಗಣೇಶ್‌ ಅಭಿನಯದ ʻಮುಗುಳುನಗೆʼʼ ಚಿತ್ರ. ಶ್ರೀಮುರುಳಿ, ಶರಣ್‌ ಹಾಗೂ ಅಜಯ್‌ ರಾವ್‌ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಸುದೀಪ್‌ ಅಭಿನಯದ ಕೋಟಿಗೊಬ್ಬ 3 ಚಿತ್ರದ ಐಟಂ ಹಾಡಿಗೆ ಹೆಜ್ಜೆ ಹಾಕಿದ್ದು ಹಾಗೂ ಜೇಮ್ಸ್‌ ಚಿತ್ರದ ಹಾಡೊಂದರಲ್ಲಿ ಹೆಜ್ಜೆ ಹಾಕಿರುವುದು ಬಿಟ್ಟರೆ ಸ್ಯಾಂಡಲ್‌ವುಡ್‌ ಬಿಗ್‌ ಸ್ಟಾರ್‌ ಜತೆ ನಟಿಸಿಲ್ಲ.

ಇದನ್ನೂ ಓದಿ: Ashika Ranganath: ಇಲ್ಲಿವೆ ಚುಟು ಚುಟು ಬೆಡಗಿ ಆಶಿಕಾ ರಂಗನಾಥ್‌ ಚೆಂದದ ಫೋಟೊಗಳು

ಸಾಕಷ್ಟು ಸಿನಿಮಾಗಳಲ್ಲಿ ನಟಿ ತೊಡಗಿಗೊಂಡಿದ್ದು ಪವನ್‌ ಒಡೆಯರ್‌ ನಿರ್ದೇಶನದ ರೇಮೊ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡರು. ಇದನ್ನು ಹೊರತು ಪಡಿಸಿ ತಮಿಳು ನಟ ಅಥರ್ವ ಜತೆಗಿನ ಚಿತ್ರ, ಸಿಂಪಲ್‌ ಸುನಿ ನಿರ್ದೇಶನದ ಗತವೈಭವ ಚಿತ್ರದಲ್ಲಿ ನಟಿಸಿದ್ದಾರೆ. ಶರಣ್​ ಜತೆ ಅವರು ನಟಿಸಿದ ‘ರ‍್ಯಾಂಬೋ 2’ ಚಿತ್ರದ ‘ಚುಟು ಚುಟು ಅಂತೈತಿ..’ ಹಾಡಿಗೆ ಸಾಕಷ್ಯ ಖ್ಯಾತಿ ಗಳಿಸಿದರು. ‘ಪಿಆರ್​ಕೆ ಪ್ರೊಡಕ್ಷನ್ಸ್​’ ನಿರ್ಮಾಣದ ‘ಒ2’ ಸಿನಿಮಾದಲ್ಲೂ ಆಶಿಕಾ ನಟಿಸಿದ್ದು, ಆ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ.

Exit mobile version