ಬೆಂಗಳೂರು: ಸ್ಯಾಂಡಲ್ವುಡ್ ನಟಿ ಆಶಿಕಾ ರಂಗನಾಥ್ (Ashika Ranganath) ಚಿತ್ರೀಕರಣದಲ್ಲಿ ಮದ್ಯದ ಬಾಟಲ್ ಹಿಡಿದು, ತಮ್ಮ ಮಧ್ಯದ ಬೆರಳು ತೋರಿಸುವಂತಹ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿತ್ತು. ಈ ಕುರಿತಾಗಿ ನೆಟ್ಟಿಗರು ತರಾಟೆ ತೆಗೆದುಕೊಂಡಿದ್ದರು. ಇದೀಗ ಈ ವಿಡಿಯೊ ಬಗ್ಗೆ ನಿರ್ದೇಶಕ ಪವನ್ ಒಡೆಯರ್ ಪ್ರತಿಕ್ರಿಯಿಸಿದ್ದಾರೆ.
ಪವನ್ ಒಡೆಯರ್ ನಿರ್ದೇಶನದ ರೇಮೊ ಸಿನಿಮಾದ ದೃಶ್ಯ ಇದಾಗಿದ್ದು ಈ ಬಗ್ಗೆ ನಿರ್ದೇಶಕ ಪವನ್ ಅವರು ಸ್ಪಷ್ಟನೆ ನೀಡಿದ್ದಾರೆ. ʻʻಈ ವಿಡಿಯೊ ಶೂಟಿಂಗ್ ಸೆಟ್ನಲ್ಲಿ ನಡೆದ ದೃಶ್ಯ. ರೇಮೊ ಚಿತ್ರದ ಮುಖ್ಯವಾದ ಸೀನ್ ಇದಾಗಿದೆ. ಆಶಿಕಾ ವೈಯಕ್ತಿಕ ಬದುಕಿಗೆ ಸಂಬಂಧ ಪಟ್ಟ ವಿಡಿಯೊ ಇದು ಅಲ್ಲ. ತಪ್ಪಾಗಿ ಯಾರು ತಿಳಿದುಕೊಳ್ಳಬೇಡಿ. ನಮ್ಮ ಮಾರ್ಕೆಟಿಂಗ್ ತಂಡದಿಂದ ತಪ್ಪಾಗಿದೆ. ಆಶಿಕಾ ಅವರು ನೈಜವಾಗಿ ಅಭಿನಯ ಮಾಡಿದ್ದಾರೆ. ಹಾಗಾಗಿ ಎಲ್ಲರಿಗೂ ಆ ವಿಡಿಯೊದಲ್ಲಿರುವುದು ನಿಜ ಅನ್ನಿಸಿದೆ. ನಮ್ಮಿಂದ ತಪ್ಪಾಗಿದೆ ಕ್ಷಮಿಸಿʼʼ ಎಂದಿದ್ದಾರೆ.
ಇದನ್ನೂ ಓದಿ | Ashika Ranganath | ಮದ್ಯದ ಬಾಟಲ್ನೊಂದಿಗೆ, ಮಧ್ಯದ ಬೆರಳು ತೋರಿಸಿದ ನಟಿ ಆಶಿಕಾ: ವಿಡಿಯೊ ಇಲ್ಲಿದೆ!
ಬೋಲ್ಡ್ ಪಾತ್ರ ನಿರ್ವಹಿಸುತ್ತಿದ್ದಾರಾ ಆಶಿಕಾ?
2016ರಲ್ಲಿ ಕ್ರೇಜಿ ಬಾಯ್ ಚಿತ್ರದ ಮೂಲಕ ಸಿನಿ ರಂಗಕ್ಕೆ ಎಂಟ್ರಿ ಕೊಟ್ಟ ಆಶಿಕಾ ರಂಗನಾಥ್, ಶಿವರಾಜ್ ಕುಮಾರ್ ಅಭಿನಯದ ʻಮಾಸ್ ಲೀಡರ್ʼ ಚಿತ್ರದಲ್ಲೂ ಬಣ್ಣ ಹಚ್ಚಿದ್ದಾರೆ. ಹೆಚ್ಚಾಗಿ ಹೆಸರು ಕೊಟ್ಟಿದ್ದು ಗಣೇಶ್ ಅಭಿನಯದ ʻಮುಗುಳುನಗೆʼ ಚಿತ್ರ. ಇಲ್ಲಿಯವರೆಗೂ ಯಾವುದೇ ವಿವಾದಕ್ಕೆ ಗುರಿಯಾದವರಲ್ಲ ಆಶಿಕಾ. ಇದೀಗ ಆಶಿಕಾ ರೇಮೊ ಸಿನಿಮಾದಲ್ಲಿ ಬೋಲ್ಡ್ ಪಾತ್ರ ನಿರ್ವಹಿಸುತ್ತಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ | Ashika Ranganath | ನೀರು, ಕಡಲ ತೀರ ಅಂದರೆ ಆಶಿಕಾ ರಂಗನಾಥ್ಗೆ ಇಷ್ಟ