Site icon Vistara News

Ashika Ranganath | ಮದ್ಯದ ಬಾಟಲ್‌ನೊಂದಿಗೆ, ಮಧ್ಯದ ಬೆರಳು ತೋರಿಸಿದ ನಟಿ ಆಶಿಕಾ: ವಿಡಿಯೊ ಇಲ್ಲಿದೆ!

Ashika Ranganath

ಬೆಂಗಳೂರು: ಸ್ಯಾಂಡಲ್‌ವುಡ್‌ ನಟಿ ಆಶಿಕಾ ರಂಗನಾಥ್‌ (Ashika Ranganath) ಅವರ ವಿಡಿಯೊ ಒಂದು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಸದ್ದು ಮಾಡುತ್ತಿದೆ. ಚಿತ್ರೀಕರಣದಲ್ಲಿ ಮದ್ಯದ ಬಾಟಲ್‌ ಹಿಡಿದು, ತಮ್ಮ ಮಧ್ಯದ ಬೆರಳು ತೋರಿಸುವಂತಹ ದೃಶ್ಯ ವಿಡಿಯೊದಲ್ಲಿ ಇದೆ. ಇದೀಗ ನೆಟ್ಟಿಗರು ವಿಡಿಯೊ ಸತ್ಯವಾ ಅಥವಾ ಸುಳ್ಳಾ? ಎಂದು ಕಮೆಂಟ್‌ ಮಾಡುತ್ತಿದ್ದಾರೆ. ಇನ್ನೂ ಕೆಲವರು ಇದು ಸಿನಿಮಾವೊಂದರ ದೃಶ್ಯ ಎಂದು ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.

ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಆಶಿಕಾ ರಂಗನಾಥ್‌, ಈ ವಿಡಿಯೊ ಮೇಲ್ನೋಟಕ್ಕೆ ಪವನ್‌ ಒಡೆಯರ್‌ ನಿರ್ದೇಶನದ ರೇಮೊ ಸಿನಿಮಾದ್ದು ಎಂದು ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಗಳು ಆಗುತ್ತಿವೆ. ತಮಾಷೆಯಲ್ಲಿ ನಟಿ ಈ ರೀತಿ ನಡೆದುಕೊಂಡಿದ್ದಾರೆ ಎಂತಲೂ ಹಲವರು ಹೇಳುತ್ತಿದ್ದಾರೆ. ಶೂಟಿಂಗ್‌ ಸ್ಪಾಟ್‌ನಲ್ಲಿ ಗಲಾಟೆ ಮಾಡಿಕೊಂಡು ಈ ರೀತಿ ಅಸಭ್ಯವಾಗಿ ನಡೆದುಕೊಳ್ಳುವಂತಹ ಪ್ಲ್ಯಾನ್ ಸಿನಿಮಾ ಪ್ರಮೋಷನ್‌ಗಾಗಿ ಮಾಡಿದ್ದು ಎಂದೂ ಹೇಳಲಾಗುತ್ತಿದೆ. ಈ ವಿಡಿಯೋ ಕುರಿತು ಆಶಿಕಾ ರಂಗನಾಥ್ ಅವರೇ ಸ್ಪಷ್ಟನೆ ನೀಡಬೇಕಿದೆ.

ಇದನ್ನೂ ಓದಿ | Ashika Ranganath | ನೀರು, ಕಡಲ ತೀರ ಅಂದರೆ ಆಶಿಕಾ ರಂಗನಾಥ್‌ಗೆ ಇಷ್ಟ

ಬೋಲ್ಡ್‌ ಪಾತ್ರ ನಿರ್ವಹಿಸುತ್ತಿದ್ದಾರಾ ಆಶಿಕಾ?
2016ರಲ್ಲಿ ಕ್ರೇಜಿ ಬಾಯ್‌ ಚಿತ್ರದ ಮೂಲಕ ಸಿನಿ ರಂಗಕ್ಕೆ ಎಂಟ್ರಿ ಕೊಟ್ಟ ಆಶಿಕಾ ರಂಗನಾಥ್‌, ಶಿವರಾಜ್‌ ಕುಮಾರ್‌ ಅಭಿನಯದ ʻಮಾಸ್‌ ಲೀಡರ್‌ʼ ಚಿತ್ರದಲ್ಲೂ ಬಣ್ಣ ಹಚ್ಚಿದ್ದಾರೆ. ಹೆಚ್ಚಾಗಿ ಹೆಸರು ಕೊಟ್ಟಿದ್ದು ಗಣೇಶ್‌ ಅಭಿನಯದ ʻಮುಗುಳುನಗೆʼʼ ಚಿತ್ರ. ಇಲ್ಲಿಯವರೆಗೂ ಯಾವುದೇ ವಿವಾದಕ್ಕೆ ಗುರಿಯಾದವರಲ್ಲ ಆಶಿಕಾ. ಈ ವಿಡಿಯೊ ಸಿನಿಮಾದ ಒಂದು ದೃಶ್ಯವಿರಬೇಕು ಎಂದು ಹೇಳಲಾಗುತ್ತಿದೆ. ಒಂದು ವೇಳೆ ಸಿನಿಮಾದ ದೃಶ್ಯವೇ ಆಗಿದ್ದರೆ ಆಶಿಕಾ ರೇಮೊ ಸಿನಿಮಾದಲ್ಲಿ ಬೋಲ್ಡ್‌ ಪಾತ್ರ ನಿರ್ವಹಿಸುತ್ತಿದ್ದಾರೆ ಎನ್ನಲಾಗುತ್ತಿದೆ.

ಟಾಲಿವುಡ್‌ನಲ್ಲಿ ಮಿಂಚಲಿದ್ದಾರೆ ಆಶಿಕಾ!
ಈಗಾಗಲೇ ನಟಿ ಟಾಲಿವುಡ್‌ ನಟ ನಂದಮೂರಿ ಕಲ್ಯಾಣ್‌ರಾಮ್‌ ಅಭಿನಯದ ಮುಂದಿನ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಗೊಂಡಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ತಮಿಳಿನ ನಟ ಸಿದ್ಧಾರ್ಥ್‌ ಅಭಿನಯದ ಮುಂದಿನ ಚಿತ್ರಕ್ಕಾಗಿ ನಾಯಕಿಯಾಗಿ ಆಶಿಕಾ ರಂಗನಾಥ್‌ ಆಯ್ಕೆಯಾಗಿದ್ದರು. ಈ ಸುದ್ದಿಯನ್ನು ಸ್ವತಃ ನಟಿ ಹೇಳಿಕೊಂಡಿದ್ದರು. ಈ ಚಿತ್ರದ ಚಿತ್ರೀಕರಣ ಮುಗಿಯುವ ಮುನ್ನವೇ ತೆಲುಗು ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಇದನ್ನು ಹೊರತುಪಡಿಸಿ ತಮಿಳು ನಟ ಅಥರ್ವ ಜತೆಗಿನ ಚಿತ್ರ, ಸಿಂಪಲ್‌ ಸುನಿ ನಿರ್ದೇಶನದ ಗತವೈಭವ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಇದನ್ನೂ ಓದಿ | Ashika Ranganath | ತೆಲುಗು ನಟ ನಂದಮೂರಿ ಕಲ್ಯಾಣ್‌ರಾಮ್‌ ಚಿತ್ರಕ್ಕೆ ಆಶಿಕಾ ರಂಗನಾಥ್‌ ನಾಯಕಿ?

Exit mobile version