Site icon Vistara News

Ashish Vidyarthi: ಇದೇ ಮೊದಲ ಬಾರಿಗೆ ಎರಡನೇ ಪತ್ನಿ ಜತೆ ಇರುವ ಫೋಟೊ ಹಂಚಿಕೊಂಡ ನಟ ಆಶಿಶ್ ವಿದ್ಯಾರ್ಥಿ

Ashish Vidyarthi cwith wife Rupali Barua

ಬೆಂಗಳೂರು: ಮೇ 25ರಂದು 57 ವರ್ಷದ ಆಶಿಶ್ ವಿದ್ಯಾರ್ಥಿ (Ashish Vidyarthi) ಅಸ್ಸಾಂನ ರೂಪಾಲಿ ಬರುವಾ ಅವರನ್ನು ಎರಡನೇ ಮದುವೆ ಆದರು. ಜೋಡಿಯ ವಿವಾಹದ ಫೋಟೊಗಳು ವೈರಲ್ ಆಗಿದ್ದವು. ನೆಟ್ಟಿಗರು ಈ ಬಗ್ಗೆ ಸಂತಸ ವ್ಯಕಪಡಿಸಿದರೆ ಇನ್ನು ಕೆಲವರು ಟ್ರೋಲ್‌ ಮಾಡಿದ್ದರು. ಇದೀಗ ನಟ ಆಶಿಶ್‌ ವಿದ್ಯಾರ್ಥಿ ಮೊದಲ ಬಾರಿಗೆ ಪತ್ನಿಯೊಂದಿಗಿನ ಫೋಟೊವನ್ನು ಹಂಚಿಕೊಂಡಿದ್ದಾರೆ.

ಹಿಂದಿ ಚಿತ್ರರಂಗದಲ್ಲಿ ಖಳನಾಯಕನ ಪಾತ್ರಗಳನ್ನು ನಿರ್ವಹಿಸಿದ ಜನಪ್ರಿಯ ನಟ ಆಶಿಶ್ ವಿದ್ಯಾರ್ಥಿ (Ashish Vidyarthi) ಅವರು ತಮ್ಮ 57ನೇ ವಯಸ್ಸಿನಲ್ಲಿ ಅಸ್ಸಾಂನ ರೂಪಾಲಿ ಬರುವಾ (Rupali Barua) ಅವರನ್ನು ಮೇ 25ರಂದು ವಿವಾಹವಾದರು. ಮದುವೆಯ ಬಗ್ಗೆ ನಟ ವಿಡಿಯೊ ಮೂಲಕ ಮನಬಿಚ್ಚಿ ಮಾತನಾಡಿದ್ದರು. ʻʻಪ್ರತಿಯೊಬ್ಬರು ಯಾವುದೇ ವಯಸ್ಸಿನಲ್ಲಾದರೂ ಸಂತೋಷವಾಗಿರಬಹುದು. ವಯಸ್ಸು ಮುಖ್ಯವಲ್ಲ. ಪ್ರತಿಯೊಬ್ಬರ ಜೀವನ ಆಯ್ಕೆಗಳನ್ನು ನಾವು ಗೌರವಿಸಬೇಕುʼʼ ಎಂದಿದ್ದರು.

22 ವರ್ಷಗಳ ತಮ್ಮ ಹಾಗೂ ಮೊದಲ ಪತ್ನಿಯ (ರಾಜೋಶಿ ಬರುವಾ ) ದಾಂಪತ್ಯ ಜೀವನ ಕಳೆದ ಎರಡು ವರ್ಷಗಳಿಂದ ಸರಿ ಇರಲಿಲ್ಲ ಎಂದು ಹೇಳಿಕೊಂಡರು. “22 ವರ್ಷಗಳ ಹಿಂದೆ ಪಿಲೂ (ರಾಜೋಶಿ ಬರುವಾ) ಮತ್ತು ನಾನು ಭೇಟಿಯಾದೆವು. ಬಳಿಕ ಮದುವೆಯಾದೆವು. ಅಲ್ಲದೆ, ಜೀವನ ಚೆನ್ನಾಗಿಯೇ ಇತ್ತು. ಎರಡು ವರ್ಷಗಳಿಂದ ಸರಿ ಇರಲಿಲ್ಲʼʼಎಂದಿದ್ದರು.

ʻʻಪಿಲೂ ಮತ್ತು ನಾನು ಸೌಹಾರ್ದಯುತವಾಗಿ ಒಟ್ಟಿಗೆ ನಡೆಯಲು ಸಾಧ್ಯವಾಗದಿದ್ದರೆ, ಪ್ರತ್ಯೇಕವಾಗಿ ನಡೆಯೋಣ ಎಂದು ನಿರ್ಧರಿಸಿದೆವುʼʼ ಎಂದು ಆಶಿಶ್ ಹೇಳಿದ್ದರು. “ನಾನು ಯಾರೊಂದಿಗಾದರೂ ಇರಲು ಬಯಸುತ್ತೇನೆಯೋ ಅವರೊಂದಿಗೆ ಮದುವೆಯಾಗಲು ಬಯಸುತ್ತೇನೆ ಎಂದು ನನಗೆ ದೃಢವಾದ ನಂಬಿಕೆ ಇತ್ತು. ನಾನು ರೂಪಾಲಿ ಬರುವಾ ಅವರನ್ನು ಭೇಟಿಯಾದೆ. ನಾವು ಒಂದು ವರ್ಷದ ಹಿಂದೆ ಭೇಟಿಯಾದೆವು. ಪರಸ್ಪರ ಮಾತನಾಡಿದೆವು. ಗಂಡ ಮತ್ತು ಹೆಂಡತಿಯಾಗಿ ಒಟ್ಟಿಗೆ ಬದುಕಬೇಕೆಂದು ನಿರ್ಧರಿಸಿ ರೂಪಾಲಿ ಮತ್ತು ನಾನು ಮದುವೆಯಾದೆವು. ಅವಳ ವಯಸ್ಸು 50 ಮತ್ತು ನನಗೆ 57 ವರ್ಷ, 60 ಅಲ್ಲ, ಆದರೆ ವಯಸ್ಸು ಮುಖ್ಯವಲ್ಲ. ನಮ್ಮಲ್ಲಿ ಪ್ರತಿಯೊಬ್ಬರೂ ಯಾವುದೇ ವಯಸ್ಸಿನಲ್ಲಾದರೂ ಸಂತೋಷವಾಗಿರಬಹುದು ”ಎಂದು ನಟ ಹೇಳಿಕೊಂಡಿದ್ದರು.

ಇದನ್ನೂ ಓದಿ: Ashish Vidyarthi: ನಾವು ಸಂಸಾರ ಮಾಡುವುದು ಜನರಿಗಾಗಿ ಅಲ್ಲ; 2ನೇ ಮದುವೆ ಗುಟ್ಟು ರಟ್ಟು ಮಾಡಿದ ಆಶಿಶ್ ವಿದ್ಯಾರ್ಥಿ

ರಾಜೋಶಿ ಬರುವಾ ವೃತ್ತಿಯಲ್ಲಿ ನಟಿ. ಶಕುಂತಲಾ ಬರುವಾ ಅವರ ಮಗಳು. ಆಶಿಶ್ ಮತ್ತು ರಾಜೋಶಿ ಮದುವೆಯಾಗಿ 23 ವರ್ಷಗಳಾಗಿದ್ದು, ಅವರಿಗೆ ಅರ್ಥ ವಿದ್ಯಾರ್ಥಿ ಎಂಬ ಮಗನಿದ್ದಾನೆ. ಆಶಿಶ್ ವಿದ್ಯಾರ್ಥಿ ಅವರ ತಂದೆ ಮಲಯಾಳಿಯಾಗಿದ್ದು ಕೇರಳದ ಕಣ್ಣೂರಿನವರಾಗಿದ್ದರು. ಅವರ ತಾಯಿ ಬೆಂಗಾಲಿಯವರಾಗಿದ್ದು ರಾಜಸ್ಥಾನ ಮೂಲದವರು.

ಆಶಿಶ್‌ ಇದುವರೆಗೆ 11 ವಿವಿಧ ಭಾಷೆಗಳಲ್ಲಿ ಸುಮಾರು 300 ಚಿತ್ರಗಳಲ್ಲಿ ಅಭಿನಯಿಸಿದ್ದರು. ಸರ್ದಾರ್ ವಲ್ಲಭಭಭಾಯಿ ಪಟೇಲ್ ಅವರ ಜೀವನವನ್ನು ಆಧರಿಸಿದ ಸರ್ದಾರ್‌ನಲ್ಲಿ ಆಶಿಶ್ ವಿದ್ಯಾರ್ಥಿ ವಿ ಪಿ ಮೆನನ್ ಪಾತ್ರವನ್ನು ನಿರ್ವಹಿಸಿದ್ದಾರೆ.

Exit mobile version