ಬೆಂಗಳೂರು: ಹಿಂದಿ ಚಿತ್ರರಂಗದಲ್ಲಿ ಖಳನಾಯಕನ ಪಾತ್ರಗಳನ್ನು ನಿರ್ವಹಿಸಿದ ಜನಪ್ರಿಯ ನಟ ಆಶಿಶ್ ವಿದ್ಯಾರ್ಥಿ (Ashish Vidyarthi Marriage) ಅವರು ತಮ್ಮ 60 ನೇ ವಯಸ್ಸಿನಲ್ಲಿ ಅಸ್ಸಾಂನ ರೂಪಾಲಿ ಬರುವಾ (Rupali Barua) ಅವರನ್ನು ಮೇ 25ರಂದು ವಿವಾಹವಾದರು. ಇದೀಗ ನಟನ ಮೊದಲ ಪತ್ನಿ ರಾಜೋಶಿ ಬರುವಾ(ಪಿಲೂ ವಿದ್ಯಾರ್ಥಿ) ( Rajoshi (Piloo Vidyarthi)) ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಈ ಬಗ್ಗೆ ಪರೋಕ್ಷವಾಗಿ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಾರೆ. ಇದು ಸಾಕಷ್ಟು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.
ಆಶಿಶ್ ವಿದ್ಯಾರ್ಥಿ ಕುಟುಂಬ ಸದಸ್ಯರು ಮತ್ತು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಸರಳವಾಗಿ ಕೋರ್ಟ್ ಮ್ಯಾರೇಜ್ ಆಗಿದ್ದಾರೆ. ಮದುವೆಯಲ್ಲಿ ಕೇರಳ ಮತ್ತು ಅಸ್ಸಾಂ ಸಂಪ್ರದಾಯಗಳನ್ನು ಅನುಸರಿಸಿದ್ದಾರೆ. ʻನಮಗಿಬ್ಬರಿಗಿಗೂ ನಮ್ಮ ಮದುವೆ ಸರಳವಾಗಿ ನಡೆಯಬೇಕೆನ್ನುವ ಆಸೆ ಇತ್ತುʼʼಎಂದು ನಟ ಹೇಳಿಕೆ ನೀಡಿದ್ದರು. ಇದೀಗ ನಟ ಆಶಿಶ್ ವಿದ್ಯಾರ್ಥಿ ಮೊದಲ ಪತ್ನಿ ನಟಿ ರಾಜೋಶಿ (ಪಿಲೂ ವಿದ್ಯಾರ್ಥಿ) ( Rajoshi (Piloo Vidyarthi)) ತಮ್ಮ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ಈ ಬಗ್ಗೆ ಪರೋಕ್ಷವಾಗಿ ಪೋಸ್ಟ್ ಹಂಚಿಕೊಂಡಿದ್ದಾರೆ.
‘ನಿಮಗೆ ನೋವುಂಟಾಗುತ್ತದೆ ಎಂಬ ವಿಚಾರ ಗೊತ್ತಿದ್ದರೆ ಸರಿಯಾದ ವ್ಯಕ್ತಿ ಅದನ್ನು ಮಾಡುವುದಿಲ್ಲ. ನೆನಪಿನಲ್ಲಿಡಿ’ ಎಂದು ಮೊದಲ ಪೋಸ್ಟ್‌ನಲ್ಲಿ ರಾಜೋಶಿ ಬರೆದುಕೊಂಡಿದ್ದಾರೆ. ಮತ್ತೊಂದು ಪೋಸ್ಟ್ ಮಾಡಿರುವ ಅವರು, ‘ಅತಿಯಾದ ಆಲೋಚನೆ ಮತ್ತು ಅನುಮಾನವು ಇದೀಗ ನಿಮ್ಮ ಮನಸ್ಸಿನಿಂದ ಹೊರಬರಲಿ. ಸ್ಪಷ್ಟತೆ ಗೊಂದಲವನ್ನು ಬದಲಾಯಿಸಬಹುದು. ನಿಮ್ಮ ಜೀವನದಲ್ಲಿ ಶಾಂತಿ ತುಂಬಲಿ. ನಾನು ಸಾಕಷ್ಟು ಬಲಶಾಲಿ’ ಎಂದು ಅವರು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Ashish Vidyarthi Marriage: 60ನೇ ವಯಸ್ಸಿನಲ್ಲಿ ಅಸ್ಸಾಂನ ಫ್ಯಾಷನ್ ಉದ್ಯಮಿಯನ್ನು ಮದುವೆಯಾದ ನಟ ಆಶಿಶ್ ವಿದ್ಯಾರ್ಥಿ
ರಾಜೋಶಿ ಬರುವಾ ವೃತ್ತಿಯಲ್ಲಿ ನಟಿ. ಶಕುಂತಲಾ ಬರುವಾ ಅವರ ಮಗಳು. ಆಶಿಶ್ ಮತ್ತು ರಾಜೋಶಿ ಮದುವೆಯಾಗಿ 23 ವರ್ಷಗಳಾಗಿದ್ದು, ಅವರಿಗೆ ಅರ್ಥ ವಿದ್ಯಾರ್ಥಿ ಎಂಬ ಮಗನಿದ್ದಾನೆ. ಆಶಿಶ್ ವಿದ್ಯಾರ್ಥಿ ಅವರ ತಂದೆ ಮಲಯಾಳಿಯಾಗಿದ್ದು ಕೇರಳದ ಕಣ್ಣೂರಿನವರಾಗಿದ್ದರು. ಅವರ ತಾಯಿ ಬೆಂಗಾಲಿಯವರಾಗಿದ್ದು ರಾಜಸ್ಥಾನ ಮೂಲದವರು. ಆಶಿಶ್ ಇದುವರೆಗೆ 11 ವಿವಿಧ ಭಾಷೆಗಳಲ್ಲಿ ಸುಮಾರು 300 ಚಿತ್ರಗಳಲ್ಲಿ ಅಭಿನಯಿಸಿದ್ದರು. ಸರ್ದಾರ್ ವಲ್ಲಭಾಯಿ ಪಟೇಲ್ ಅವರ ಜೀವನವನ್ನು ಆಧರಿಸಿದ ಸರ್ದಾರ್‌ನಲ್ಲಿ ಆಶಿಶ್ ವಿದ್ಯಾರ್ಥಿ ವಿ ಪಿ ಮೆನನ್ ಪಾತ್ರವನ್ನು ನಿರ್ವಹಿಸಿದ್ದಾರೆ.