ಬೆಂಗಳೂರು: ಹಿಂದಿ ಚಿತ್ರರಂಗದಲ್ಲಿ ಖಳನಾಯಕನ ಪಾತ್ರಗಳನ್ನು ನಿರ್ವಹಿಸಿದ ಜನಪ್ರಿಯ ನಟ ಆಶಿಶ್ ವಿದ್ಯಾರ್ಥಿ (Ashish Vidyarthi Marriage) ಅವರು ತಮ್ಮ 60 ನೇ ವಯಸ್ಸಿನಲ್ಲಿ ಅಸ್ಸಾಂನ ರೂಪಾಲಿ ಬರುವಾ ಅವರನ್ನು ಮೇ 25ರಂದು ವಿವಾಹವಾದರು. 1986ರಲ್ಲಿ ಸಿನಿರಂಗಕ್ಕೆ ಪದಾರ್ಪಣೆ ಮಾಡಿದರು. ಆಶಿಶ್ ವಿದ್ಯಾರ್ಥಿ ಹಲವಾರು ಹಿಂದಿ, ತೆಲುಗು, ತಮಿಳು, ಕನ್ನಡ, ಮಲಯಾಳಂ, ಇಂಗ್ಲಿಷ್, ಒಡಿಯಾ, ಮರಾಠಿ ಮತ್ತು ಬಂಗಾಳಿ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು. .
ನಟ ಆಶಿಶ್ ವಿದ್ಯಾರ್ಥಿ ಫ್ಯಾಷನ್ ಉದ್ಯಮಿ ರೂಪಾಲಿ ಬರುವಾ ಅವರನ್ನು ಖಾಸಗಿ ಸಮಾರಂಭದಲ್ಲಿ ವಿವಾಹವಾದರು. ಕೋಲ್ಕೊತಾ ಕ್ಲಬ್ನಲ್ಲಿ ಮದುವೆ ನಡೆದಿದೆ. ಈ ಹಿಂದೆ ಶಕುಂತಲಾ ಬರುವಾ ಅವರ ಮಗಳು ರಾಜೋಶಿ ಬರುವಾ ಅವರನ್ನು ಮದುವೆಯಾಗಿದ್ದರು. ಆಶಿಶ್ ಹಾಗೂ ರೂಪಾಲಿ ಆಪ್ತ ಸ್ನೇಹಿತರು ಹಾಗೂ ಕುಟುಂಬಸ್ಥರ ಸಮ್ಮುಖದಲ್ಲಿ ರಿಜಿಸ್ಟರ್ ಮದುವೆಯಾದರು.
ʻʻನಮಗಿಬ್ಬರಿಗಿಗೂ ನಮ್ಮ ಮದುವೆ ಸರಳವಾಗಿ ನಡೆಯಬೇಕೆನ್ನುವ ಆಸೆ ಇತ್ತುʼʼಎಂದು ನಟ ಹೇಳಿಕೆ ನೀಡಿದ್ದಾರೆ. ವಿದ್ಯಾರ್ಥಿ, ದ್ರೋಹ್ಕಾಲ್ನಲ್ಲಿನ ಅಭಿನಯಕ್ಕಾಗಿ ನ್ಯಾಷನಲ್ ಫಿಲ್ಮ್ ಅವಾರ್ಡ್ ಪಡೆದುಕೊಂಡಿದ್ದರು. 1942: ಎ ಲವ್ ಸ್ಟೋರಿಯಲ್ಲಿ ಅಶುತೋಷ್ ಪಾತ್ರದಿಂದ ಅವರು ಖ್ಯಾತಿ ಪಡೆದರು. ನಟ ಸ್ಟಾರ್ ಸ್ಕ್ರೀನ್ ಅವಾರ್ಡ್ ಕೂಡಾ ಪಡೆದಿದ್ದಾರೆ.
ಆಶಿಶ್ ವಿದ್ಯಾರ್ಥಿ ಅವರ ತಂದೆ ಮಲಯಾಳಿಯಾಗಿದ್ದು ಕೇರಳದ ಕಣ್ಣೂರಿನವರಾಗಿದ್ದರು. ಅವರ ತಾಯಿ ಬೆಂಗಾಲಿಯವರಾಗಿದ್ದು ರಾಜಸ್ಥಾನ ಮೂಲದವರು.
ಇದನ್ನೂ ಓದಿ: Aamir Khan: ಮಗಳ ವಯಸ್ಸಿನ ʻದಂಗಲ್ʼ ಸಿನಿಮಾ ನಟಿ ಜತೆ ಆಮೀರ್ ಖಾನ್ ಮದುವೆ?
ಆಶಿಶ್ ಇದುವರೆಗೆ 11 ವಿವಿಧ ಭಾಷೆಗಳಲ್ಲಿ ಸುಮಾರು 300 ಚಿತ್ರಗಳಲ್ಲಿ ಅಭಿನಯಿಸಿದ್ದರು. ಸರ್ದಾರ್ ವಲ್ಲಭಾಯಿ ಪಟೇಲ್ ಅವರ ಜೀವನವನ್ನು ಆಧರಿಸಿದ ಸರ್ದಾರ್‌ನಲ್ಲಿ ಆಶಿಶ್ ವಿದ್ಯಾರ್ಥಿ ವಿ ಪಿ ಮೆನನ್ ಪಾತ್ರವನ್ನು ನಿರ್ವಹಿಸಿದ್ದಾರೆ.