Site icon Vistara News

Adhvithi Shetty: ಮಿಸ್ಟರ್‌ & ಮಿಸೆಸ್‌ ರಾಮಾಚಾರಿ ಖ್ಯಾತಿಯ ಅವಳಿ ನಟಿಯರಾದ ಅದ್ವಿತಿ-ಅಶ್ವಿತಿ ತಂದೆ ನಿಧನ!

Adhvithi Shetty with Family

ಬೆಂಗಳೂರು: ಸ್ಯಾಂಡಲ್​ವುಡ್ ಹಿಟ್ ಸಿನಿಮಾ ಮಿಸ್ಟರ್ & ಮಿಸೆಸ್ ರಾಮಾಚಾರಿಯಲ್ಲಿ ನಟಿಸಿದ್ದ ಅವಳಿ ನಟಿಯರು ಅದ್ವಿತಿ ಮತ್ತು ಅಶ್ವಿತಿಯ (ashvithi shetty) ತಂದೆ ನಿಧನರಾಗಿದ್ದಾರೆ. ಯಶ್- ರಾಧಿಕಾ ಪಂಡಿತ್ (Radhika Pandit) ನಟನೆಯ ‘ಮಿಸ್ಟರ್ & ಮಿಸೆಸ್ ರಾಮಾಚಾರಿ’ (Mr & Mrs Ramachari) ಸಿನಿಮಾದಲ್ಲಿ ಅದ್ವಿತಿ ಶೆಟ್ಟಿ ರಾಧಿಕಾ ಸ್ನೇಹಿತೆಯರಾಗಿ ಪಾತ್ರದಲ್ಲಿ ಮಿಂಚಿದ್ದರು. ಅದ್ವಿತಿ ಐರಾವನ್ ಚಿತ್ರದಲ್ಲಿ ಕೂಡ ನಟಿಸಿದ್ದರು. ಇದೀಗ ನಟಿ ಪಿತೃ ವಿಯೋಗದ ನೋವಿನಲ್ಲಿದ್ದು ಸೋಷಿಯಲ್ ಮೀಡಿಯಾದಲ್ಲಿ ಈ ಸುದ್ದಿಯನ್ನು (Adhvithi Shetty father) ಶೇರ್ ಮಾಡಿದ್ದಾರೆ.

ನಟಿ ಫೇಸ್​ಬುಕ್​ನಲ್ಲಿಯೂ ಪೋಸ್ಟ್ ಹಾಕಿದ್ದು ʻʻನಾನು ಇದನ್ನು ಟೈಪ್ ಮಾಡುತ್ತಿದ್ದೇನೆಂದು ನಂಬಲಾಗುತ್ತಿಲ್ಲ. ಓಂ ಶಾಂತಿ ಪಪ್ಪʼʼ ಎಂದು ನಟಿ ಪೋಸ್ಟ್ ಹಾಕಿದ್ದಾರೆ. ನಟಿ 27ರಂದು ತಡರಾತ್ರಿಯೇ ಪೋಸ್ಟ್ ಹಾಕಿದ್ದಾರೆ. ಫೇಸ್​ಬುಕ್​ನಲ್ಲಿ ಪೋಸ್ಟ್ ಶೇರ್ ಮಾಡಿದ ನಟಿ ಹೃದಯ ಒಡೆದಿರುವ ಹಾರ್ಟ್ ಸಿಂಬಲ್ ಗಾಕಿ ಅಳುವ ಇಮೋಜಿಯನ್ನು ಪೋಸ್ಟ್ ಮಾಡಿದ್ದಾರೆ.

ಅದ್ವಿತಿ ಶೆಟ್ಟಿ (Adhvithi Shetty) ಅವರ ತಂದೆ ಕೆಲ ದಿನಗಳಿಂದ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅದ್ವಿತಿ ತಂದೆಗೆ ಚಿಕಿತ್ಸೆ ನೀಡಲಾಗಿತ್ತು. ಆದರೆ ಇದೀಗ ಅದ್ವಿತಿ ಶೆಟ್ಟಿ ತಂದೆಗೆ ವಿಧಿವಶರಾಗಿದ್ದಾರೆ.

ಯಾರು ಈ ಅವಳಿ ಸಹೋದರಿಯರು?

ಮಿಸ್ಟರ್ & ಮಿಸೆಸ್ ರಾಮಾಚಾರಿ ಚಿತ್ರವನ್ನು ನೋಡಿದ ಯಾರೇ ಆದರೂ ಅದ್ವಿತಿ ಮತ್ತು ಅಶ್ವಿತಿಯನ್ನು ಮರೆಯಲು ಸಾಧ್ಯವೇ ಇಲ್ಲ. ಅದರಲ್ಲಿ ರಾಧಿಕಾ ಪಂಡಿತ್ ಸ್ನೇಹಿತೆಯರಾಗಿ ನಟಿಸಿದ್ದ ಇವರದ್ದು ಡಬಲ್ ರೋಲ್ ಎಂದು ಬಹುತೇಕರು ಅಂದುಕೊಂಡಿದ್ದರೆ ಅದರಲ್ಲಿ ಅಚ್ಚರಿಯಾಗುವಂಥಾದ್ದೇನೂ ಇಲ್ಲ. ಹೀಗೆ ಸಿನಿಮಾ, ಸಾಮಾಜಿಕ ಕಾರ್ಯಗಳ ಮೂಲಕ ಹೆಸರಾಗಿರುವ ಈ ಅವಳಿ ಸೋದರಿಯರು ಸಾಗಿ ಬಂದ ಹಾದಿಯೇ ಭಿನ್ನವಾಗಿದೆ.

ಪಿ.ಎಚ್ ವಿಶ್ವನಾಥ್ ನಿರ್ದೇಶನದ ಸುಳಿ ಎಂಬ ಕಲಾತ್ಮಕ ಚಿತ್ರದಲ್ಲಿ ಅದ್ವಿತಿ ಮತ್ತು ಅಶ್ವಿತಿ ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದರು. ಅದು ಅವರ ಪಾಲಿಗೆ ಎರಡನೇ ಚಿತ್ರ. ಅದಾದ ನಂತರ ಅದ್ವಿತಿ ದೊಡ್ಮನೆ ಹುಡುಗ ಸೇರಿದಂತೆ ಕೆಲ ಚಿತ್ರಗಳಲ್ಲಿ ಪಾತ್ರ ನಿರ್ವಹಿಸಿದ್ದರು. ಸೀರಿಯಲ್‍ನಲ್ಲಿಯೂ ಕಾಣಿಸಿಕೊಂಡಿದ್ದರು. ಮಹಾನ್ ಹುತಾತ್ಮ ಎಂಬ ಶಾರ್ಟ್ ಮೂವಿ ಅದ್ವಿತಿ ಪಾಲಿಗೆ ರಾಷ್ಟ್ರಪ್ರಶಸ್ತಿಯೂ ಬಂತು.

ಇದನ್ನೂ ಓದಿ: Death News: ರಾಜವಂಶಸ್ಥ,ಮಾಜಿ ಸಚಿವ ಶ್ರೀರಂಗದೇವರಾಯಲು ನಿಧನ: ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ

ನಟಿ ಅದ್ವಿತಿ ಶೆಟ್ಟಿ ನಟನೆಯ ‘ಬ್ರಹ್ಮ ಕಮಲ’ ಸಿನಿಮಾ ದಾದಾ ಸಾಹೇಬ್ ಫಾಲ್ಕೆ ಚಿತ್ರೋತ್ಸವಕ್ಕೆ ಆಯ್ಕೆ ಆಗಿತ್ತು. ಈ ಮೂಲಕ ನಟಿ ಸಾಕಷ್ಟು ಸುದ್ದಿಯಲ್ಲಿದ್ದರು.

‘ಬ್ರಹ್ಮ ಕಮಲ’ ಸಿನಿಮಾ ಮಹಿಳಾ ಪ್ರಧಾನ ಸಿನಿಮಾ. ಅದ್ವಿತಿ ಪಾತ್ರಕ್ಕೆ ಹೆಚ್ಚು ಪ್ರಾಧಾನ್ಯತೆ ಇದೆ. ಮಾರ್ಚ್​ನಲ್ಲಿ ನಡೆದ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಈ ಚಿತ್ರ ಪ್ರದರ್ಶನ ಕಂಡಿತ್ತು. ಅದ್ವಿತಿ ಶೆಟ್ಟಿ ಜತೆಗೆ ಋತುಚೈತ್ರ, ಲೋಕೇಂದ್ರ ಸೂರ್ಯ, ಬಲ ರಾಜವಾಡಿ, ಗಂಡಸಿ ಸದಾನಂದಸ್ವಾಮಿ, ಕವಿತ ಕಂಬಾರ್, ರಾಧಾ ರಾಮಚಂದ್ರ ಮೊದಲಾದವರು ಆಭಿನಯಿಸಿದ್ದಾರೆ.

ಅಶ್ವಿತಿ ಶೆಟ್ಟಿಯೂ ತಮ್ಮದೇ ರೀತಿಯಲ್ಲಿ ಸಕ್ರಿಯರಾಗಿದ್ದಾರೆ. ಸುಳಿಯ ನಂತರದಲ್ಲಿ ಏನ್ ಬರ್ತೀಯಾ ಎಂಬ ಶಾರ್ಟ್ ಮೂವಿಯಲ್ಲಿಯೂ ನಟಿಸಿ ಸೈ ಅನ್ನಿಸಿಕೊಂಡಿದ್ದಾರೆ. ಇದಕ್ಕಾಗಿ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದಾರೆ. ಚಂದನ್ ಶೆಟ್ಟಿಯ ಶೋಕಿಲಾಲ ಎಂಬ ಆಲ್ಬಂ ಸಾಂಗ್ ಕೂಡಾ ಅವರಿಗೆ ಮೈಲೇಜು ತಂದುಕೊಟ್ಟಿದೆ.

Exit mobile version