Site icon Vistara News

Puneeth Parva | ʻಪುನೀತ ಪರ್ವʼದ ವಿವರ ಹಂಚಿಕೊಂಡ ಅಶ್ವಿನಿ ಪುನೀತ್ ರಾಜಕುಮಾರ್‌

Puneeth Parva

ಬೆಂಗಳೂರು: ಅಕ್ಟೋಬರ್‌ 28ರಂದು ಬಿಡುಗಡೆಯಾಗಲಿರುವ ನಟ ಪುನೀತ್‌ ರಾಜಕುಮಾರ್‌ (Puneeth Parva) ನಟನೆಯ ʻʻಗಂಧದ ಗುಡಿʼʼ ಚಿತ್ರಕ್ಕೆ ದಿನಗಣನೆ ಆರಂಭವಾಗಿದೆ. ಪುನೀತ್ ಅವರ ಮೊದಲ ಪುಣ್ಯತಿಥಿ ಒಂದು ದಿನ ಮುಂಚಿತವಾಗಿ ಅಂದರೆ ಅಕ್ಟೋಬರ್ 28 ರಂದು ಚಿತ್ರ ಬಿಡುಗಡೆಯಾಗುತ್ತಿದೆ. ಅಕ್ಟೋಬರ್ 21 ರಂದು ಸಂಜೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ‘ಪುನೀತ ಪರ್ವ’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಈ ಕಾರ್ಯಕ್ರಮಕ್ಕೆ ಪುನೀತ್‌ ಅವರ ಕುಟುಂವ ಸದಸ್ಯರು, ರಾಜಕೀಯ ಗಣ್ಯರು, ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಚಿತ್ರರಂಗದ ನಟರು ಸಹ ಭಾಗಿಯಾಗಲಿದ್ದಾರೆ. ಪುನೀತ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಮತ್ತು ಅವರ ಕುಟುಂಬ ಸದಸ್ಯರು ‘ಪುನೀತ ಪರ್ವ’ ಆಯೋಜನೆಯ ಜವಾಬ್ದಾರಿ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ | ಇಂದು ಪುನೀತ ಪರ್ವ ಕಾರ್ಯಕ್ರಮ, ಸ್ಟಾರ್‌ ನಟ ನಟಿಯರಿಂದ ಮೆಗಾ ಶೋ

ಟ್ವಿಟರ್‌ನಲ್ಲಿ, ಅಶ್ವಿನಿ ಪುನೀತ್ ರಾಜಕುಮಾರ್ ಅವರು ‘ಪುನೀತ ಪರ್ವ’ ಕಾರ್ಯಕ್ರಮದ ವಿವರ ಹಂಚಿಕೊಂಡಿದ್ದಾರೆ ಮತ್ತು ಭಾಗವಹಿಸುವವರಿಗೆ ಬಿಳಿ ಬಟ್ಟೆಗಳನ್ನು ಧರಿಸುವಂತೆ ಕೋರಿದ್ದಾರೆ. 

ಅಕ್ಟೋಬರ್‌ 26ರಂದು ಕಂಠೀರವ ಸ್ಟುಡಿಯೊದಲ್ಲಿ ಪುನೀತ್‌ ರಾಜಕುಮಾರ್‌ ಅವರ ಸ್ಮಾರಕದ ಬಳಿ ನಟನ 75 ಕಟೌಟ್‌ಗಳನ್ನು ನಿರ್ಮಿಸಲಾಗುವುದು. ಮರುದಿನ ಅಭಿಮಾನಿಗಳು ಈ ಕಟೌಟ್‌ಗಳಿಗೆ ಪುಷ್ಪ ನಮನ ಸಲ್ಲಿಸಬಹುದು ಮತ್ತು 1 ಕಿ.ಮೀ. ಪ್ರದೇಶದಲ್ಲಿ ಸ್ಮಾರಕವನ್ನು ನಿರ್ಮಾಣಕ್ಕೆ ಯೋಜಿಸಲಾಗಿದೆ. ಅಕ್ಟೋಬರ್ 29 ರಂದು ಪುನೀತ್ ಅವರ ಸ್ಮಾರಕದ ಬಳಿ ಬೆಳಿಗ್ಗೆ 8 ರಿಂದ ಸಂಜೆ 6 ರವರೆಗೆ ಅವರ ಅಭಿಮಾನಿಗಳಿಗಾಗಿ ʻಅನ್ನ ದಾಸೋಹ’ ಆಯೋಜಿಸಲಾಗಿದೆ ಎಂದು ಹೇಳಿಕೊಂಡಿದ್ದಾರೆ..

ಇದನ್ನೂ ಓದಿ | Puneeth Parva | ಪುನೀತ ಪರ್ವ ಕಾರ್ಯಕ್ರಮಕ್ಕಾಗಿ ಬೆಳಗಾವಿಯಿಂದ ಬೆಂಗಳೂರಿಗೆ ಸೈಕಲ್‌ ಏರಿದ ಅಭಿಮಾನಿ

Exit mobile version