ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ಅವರ ವರ್ಕೌಟ್ ನೋಡಿ ಅವರ ಅಭಿಮಾನಿಗಳು ಸಖತ್ ಖುಷಿ ಪಡುತ್ತಿದ್ದರು. ಇದೀಗ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅದೇ ಹಾದಿಯಲ್ಲಿ ಸಾಗುತ್ತಿದ್ದಾರೆ. ಪವರ್ ಸ್ಟಾರ್ ಹಾಗೆ ಅಶ್ವಿನಿ ಕೂಡ ಜಿಮ್‌ನಲ್ಲಿ ಬೆವರಿಳಿಸುತ್ತಿದ್ದಾರೆ. ಅಶ್ವಿನಿ ವರ್ಕ್‌ಔಟ್ ಮಾಡುತ್ತಿರುವ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಫಿಟ್ ಆಗಲು ವರ್ಕೌಟ್ ಪ್ರಾರಂಭಿಸಿದ್ದಾರೆ. ಪಿಆರ್ ಕೆ ಸಂಸ್ಥೆಯನ್ನು ನಿಭಾಯಿಸುತ್ತಿರುವ ಅಶ್ವಿನಿ ಕೆಲಸದ ಜತೆಗೆ ಜಿಮ್ ಕೂಡ ಮಾಡುತ್ತಿರುವುದು ವಿಶೇಷ . ಅಪ್ಪು ಅಭಿನಯದ ‘ಯುವರತ್ನ’ ಸಿನಿಮಾದ ‘ಫೀಲ್ ದಿ ಪವರ್’ ಸಾಂಗ್ ಬ್ಯಾಕ್‌ಗ್ರೌಂಡ್‌ನಲ್ಲಿ ಪ್ಲೇ ಆಗುತ್ತಿದೆ. ಇನ್ನು ಹಾಡನ್ನು ಕೇಳಿದ ಮೇಲಂತೂ ಪವರ್‌ಸ್ಟಾರ್ ಅಭಿಮಾನಿಗಳು ಮತ್ತಷ್ಟು ಸ್ಟ್ರಾಂಗ್ ಆಗಿದ್ದಾರೆ.
ಇದನ್ನೂ ಓದಿ: Appu Namana | ಮಳೆಹನಿಗಳ ಮಂಗಳವೃಷ್ಟಿಯೊಂದಿಗೆ ಪುನೀತ್ ಮುಡಿಗೇರಿತು ಕರ್ನಾಟಕ ರತ್ನ ಪ್ರಶಸ್ತಿ
ವಿಡಿಯೊ ನೋಡಿ ಅಪ್ಪು ಅಭಿಮಾನಿಗಳು ಕಮೆಂಟ್ ಮೂಲಕ ಅಶ್ವಿನಿ ಅವರಿಗೆ ಧೈರ್ಯ ತುಂಬುತ್ತಿದ್ದಾರೆ. ಮತ್ತೆ ಕೆಲವರು ಒತ್ತಡದಿಂದ ಆಚೆ ಬರಲು ಇದು ಒಳ್ಳೆಯ ಮಾರ್ಗ ಎಂತಲೂ ಸಲಹೆಯನ್ನೂ ನೀಡಿದ್ದಾರೆ.