ಬೆಂಗಳೂರು: ಪುನೀತ್ ರಾಜಕುಮಾರ್ ಅಭಿನಯದ “ಗಂಧದಗುಡಿ’ ಚಿತ್ರದ ಬಳಿಕ ಪಿಆರ್ಕೆ ಪ್ರೊಡಕ್ಷನ್ಸ್ ಬ್ಯಾನರ್ನಲ್ಲಿ ಮೂಡಿಬಂದಿರುವ ಹೊಸ ಸಿನಿಮಾ “ಆಚಾರ್ ಆ್ಯಂಡ್ ಕೋ’. ಈ ಸಿನಿಮಾವನ್ನು ಸಿಂಧು ಶ್ರೀನಿವಾಸಮೂರ್ತಿ ನಿರ್ದೇಶನ ಮಾಡಿದ್ದಾರೆ. ಕಥೆ ಬರೆದು ನಿರ್ದೇಶಿಸುವುದರ ಜತೆಗೆ ಸಿಂಧು ಅವರೇ ನಾಯಕಿಯಾಗಿಯೂ ನಟಿಸಿದ್ದಾರೆ. ಇದು ಕುಟುಂಬದವರೆಲ್ಲ ಹೋಗಿ ನೋಡುವ ಸಿನಿಮಾ. ಇದರಲ್ಲಿ ಮುಖ್ಯ ಪಾತ್ರದಲ್ಲಿ ಮಹಿಳೆಯರು ಇದ್ದರೂ ಇದು ಮಹಿಳಾ ಪ್ರಧಾನ ಸಿನಿಮಾ ಏನಲ್ಲ ಎಂದು ಅಶ್ವಿನಿ ಪುನೀತ್ ರಾಜ್‌ಕುಮಾರ್ (Ashwini Puneeth Rajkumar) ಮಾಹಿತಿ ಹಂಚಿಕೊಂಡರು.
‘ಪಿಆರ್ಕೆ ಪ್ರೊಡಕ್ಷನ್ಸ್’ ಮೂಲಕ ನಿರ್ಮಾಣ ಆಗಿರುವ ‘ಆಚಾರ್ ಆ್ಯಂಡ್ ಕೋ’ (Achar & Co) ಸಿನಿಮಾ ಜುಲೈ 28ರಂದು ತೆರೆಕಾಣುತ್ತಿದೆ. ಈ ಸಿನಿಮಾದಲ್ಲಿ ರೆಟ್ರೋ ಕಾಲದ ಕಥೆ ಇದೆ. ಹಲವು ಹಿರಿಯ-ಕಿರಿಯ ಕಲಾವಿದರ ಸಂಗಮ ಈ ಸಿನಿಮಾದಲ್ಲಿ ಆಗಿದೆ. 1960ರ ಕಾಲಟ್ಟದಲ್ಲಿ ನಡೆಯುವ ಕಥೆ. ವಸ್ತ್ರವಿನ್ಯಾಸ ಮತ್ತು ಕಲಾನಿರ್ದೇಶನದ ಮೂಲಕ 60 ಹಾಗೂ 70ರ ದಶಕದ ಬೆಂಗಳೂರನ್ನು ತೆರೆಯ ಮೇಲೆ ಮರುಸೃಷ್ಟಿ ಮಾಡಲಾಗಿದ್ದು, ಕಥೆಯನ್ನು ನೋಡುತ್ತಾ ಪ್ರೇಕ್ಷಕರು ತಮಗೇ ಗೊತ್ತಿಲ್ಲದಂತೆ ಅಂದಿನ ಕಾಲಕ್ಕೆ ಹೋಗಿಬಂದ ಅನುಭವ ನೀಡಲಿದೆ ಎಂಬ ಭರವಸೆ ಚಿತ್ರತಂಡದ್ದು.
ಇದನ್ನೂ ಓದಿ: Kannada New Movie: `ಎಲ್ಲೋ ಜೋಗಪ್ಪ ನಿನ್ನರಮನೆ’ ಶೂಟಿಂಗ್ ಕಂಪ್ಲೀಟ್!
ಈ ಚಿತ್ರದ ಬಹುತೇಕ ವಿಭಾಗಗಳಲ್ಲಿ ಮಹಿಳೆಯರೇ ಕೆಲಸ ಮಾಡಿರುವುದು ಮತ್ತೊಂದು ವಿಶೇಷ. ಅಶ್ವಿನಿ ಪುನೀತ್ ನಿರ್ಮಾಣ, ಸಿಂಧು ನಿರ್ದೇಶನ, ಬಿಂದು ಮಾಲಿನಿ ಸಂಗೀತ ನಿರ್ದೇಶನ, ಹೇಮಾ ಸುವರ್ಣ ಸೌಂಡ್ ಇಂಜಿನಿಯರ್, ಇಂಚರಾ ಸುರೇಶ್ ವಸ್ತ್ರ ವಿನ್ಯಾಸ ಸೇರಿ ಇನ್ನೂ ಹಲವು ವಿಭಾಗಗಳನ್ನು ಮಹಿಳೆಯರೇ ನಿಭಾಯಿಸಿದ್ದಾರೆ.
ಜತೆಗೆ ವಿಶ್ವಾಸ್ ಕಶ್ಯಪ್ ಕಲಾನಿರ್ದೇಶನ ಹಾಗೂ ಅಭಿಮನ್ಯು ಸದಾನಂದ್ ಛಾಯಾಗ್ರಹಣ ಚಿತ್ರಕ್ಕಿರಲಿದೆ.‘ಆಚಾರ್ ಆ್ಯಂಡ್ ಕೋ’ ಸಿಂಪಲ್ ಕಥೆ, ಉತ್ತಮ ಕಂಟೆಂಟ್ ಹೊಂದಿದೆ.