Site icon Vistara News

AR Rahman: 29 ಲಕ್ಷ ರೂ. ಪಡೆದು ಮೋಸ? ಮತ್ತೊಂದು ವಿವಾದದ ಸುಳಿಗೆ ಸಿಲುಕಿದ ಎ ಆರ್ ರೆಹಮಾನ್‌!

Rahman

ಬೆಂಗಳೂರು: ಚೆನ್ನೈನಲ್ಲಿ ಸೆಪ್ಟೆಂಬರ್‌ 11ರಂದು ನಡೆದ ಎ ಆರ್ ರೆಹಮಾನ್ (AR Rahman) ಸಂಗೀತ ಕಾರ್ಯಕ್ರಮದಲ್ಲಿ ಕಳಪೆ ನಿರ್ವಹಣೆಯನ್ನು ದೂಷಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ರೆಹಮಾನ್ ಫ್ಯಾನ್ಸ್‌ ಬೇಸರ ಹೊರಹಾಕಿದ್ದರು. ಕೆಲವರು ಲೈಂಗಿಕ ಆರೋಪಗಳನ್ನು ಮಾಡಿದರು. ಅದೆಷ್ಟೋ ಜನ ಟಿಕೆಟ್‌ ಹರಿದು ಆಕ್ರೋಶ ಹೊರ ಹಾಕಿದ್ದರು. ಇದೀಗ ಎ ಆರ್ ರೆಹಮಾನ್  ಮತ್ತೊಂದು ವಿವಾದಕ್ಕೆ ಸಿಲುಕಿದ್ದಾರೆ. ಅಸೋಸಿಯೇಷನ್‌ ಸರ್ಜನ್ಸ್‌ ಆಫ್‌ ಇಂಡಿಯಾ (Association of Surgeons of India) (AR Rahman) ಸಂಗೀತ ಕಾರ್ಯಕ್ರಮಕ್ಕಾಗಿ ರೆಹಮಾನ್ 29 ಲಕ್ಷ ರೂ. ಪಡೆದಿದ್ದಾರೆ ಎನ್ನಲಾಗಿದೆ. ಆದರೆ, ಈವರಗೆ ಕಾರ್ಯಕ್ರಮ ನಡೆಸಿಕೊಟ್ಟಿಲ್ಲವೆಂದು ಆರೋಪಿಸಿದೆ. ಇದಕ್ಕೆ ರೆಹಮಾನ್‌ ಪ್ರತಿದೂರು ದಾಖಲು ಮಾಡಿದ್ದು, 10 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

ಚೆನ್ನೈನಲ್ಲಿ ಸೆಪ್ಟೆಂಬರ್‌ 11ರಂದು ನಡೆದ ಎಆರ್ ರೆಹಮಾನ್ ಸಂಗೀತ ಕಾರ್ಯಕ್ರಮದಲ್ಲಿ ಕಳಪೆ ನಿರ್ವಹಣೆಯನ್ನು ದೂಷಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ರೆಹಮಾನ್ ಫ್ಯಾನ್ಸ್‌ ಬೇಸರ ಹೊರಹಾಕಿದ್ದರು. ವಾಲ್ಯೂಮ್ ತುಂಬಾ ಕಡಿಮೆಯಾಗಿದೆ ಎಂದು ಹಲವರು ಹೇಳಿದರೆ, ಇನ್ನೂ ಕೆಲವರಿಗೆ ಟಿಕೆಟ್‌ ಇದ್ದರೂ ಎಂಟ್ರಿ ಕೊಡಲಿಲ್ಲ. ಹೆಚ್ಚಿನ ಜನರು ಸೇರಿದ್ದರಿಂದ ಅನೇಕರು ತೊಂದರೆಗೆ ಒಳಗಾದರು. ಅಷ್ಟೇ ಅಲ್ಲದೇ ಇನ್ನು ಮುಂದೆ ಎಂದಿಗೂ ಎಆರ್ ರೆಹಮಾನ್ ಅವರ ಸಂಗೀತ ಕಾರ್ಯಕ್ರಮದಲ್ಲಿ ಭಾಗಿಯಾಗುವುದಿಲ್ಲ ಎಂದು ಟ್ವೀಟ್‌ ಮೂಲಕ ಅಭಿಪ್ರಾಯ ಹಂಚಿಕೊಂಡಿದ್ದರು. ಈ ವಿವಾದ ಇನ್ನೂ ಇರುವಾಗಲೇ ಸರ್ಜನ್ ಅಸೋಸಿಯೇಷನ್ (ASICON) ರೆಹಮಾನ್ ವಿರುದ್ಧ ದೂರು ದಾಖಲು ಮಾಡಿದೆ.

ಇದನ್ನೂ ಓದಿ: AR Rahman: ಸಿಟ್ಟಿನಿಂದ ಟಿಕೆಟ್ ಹರಿದು ಹಾಕಿದ ಫ್ಯಾನ್ಸ್‌; ಎ ಆರ್ ರೆಹಮಾನ್ ವಿರುದ್ಧ ಆಕ್ರೋಶ!

ಅಸೋಸಿಯೇಷನ್‌ ಸರ್ಜನ್‌ ಆಫ್‌ ಇಂಡಿಯಾ ಸಂಗೀತ ಸಂಯೋಜಕ ಎ ಆರ್ ರೆಹಮಾನ್ ವಿರುದ್ಧ ಆರೋಪ ಮಾಡಿದ್ದು, ಸಂಗೀತ ಕಾರ್ಯಕ್ರಮ ಒಂದಕ್ಕಾಗಿ ಎ ಆರ್ ರೆಹಮಾನ್ 29 ಲಕ್ಷ ರೂ. ಪಡೆದಿದ್ದಾರೆ. ಆದರೆ, ಈವರಗೆ ಕಾರ್ಯಕ್ರಮ ನಡೆಸಿಕೊಟ್ಟಿಲ್ಲವೆಂದು ಆರೋಪಿಸಿದೆ. ಇದಕ್ಕೆ ರೆಹಮಾನ್‌ ಅವರು ಪ್ರತಿದೂರು ದಾಖಲು ಮಾಡಿದ್ದು, 10 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

ರೆಹಮಾನ್ ತಂಡ ಪ್ರತಿಕ್ರಿಯಿಸಿ ‘ಇದು ಸುಳ್ಳು ಆರೋಪ. ಮೂರು ದಿನಗಳಲ್ಲಿ ಕೇಸ್ ಹಿಂಪಡೆಯುವಂತೆ ಸೂಚಿಸಿದ್ದೇವೆ. ಮಾನನಷ್ಟ ಮಾಡಿದ್ದಕ್ಕಾಗಿ ಅವರು 10 ಕೋಟಿ ರೂಪಾಯಿ ನೀಡಬೇಕು. ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು’ ಎಂದು ರೆಹಮಾನ್ ತಂಡ ನೋಟಿಸ್​ನಲ್ಲಿ ತಿಳಿಸಿದೆ. ಇದು ನಡೆದದ್ದು 2018ರಲ್ಲಿ.

Exit mobile version