ಬೆಂಗಳೂರು: ನಟಿ ಅಥಿಯಾ ಶೆಟ್ಟಿ ಮತ್ತು ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಕೆ.ಎಲ್. ರಾಹುಲ್ ( Athiya Shetty and KL Rahul) ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡು ಸುದ್ದಿಯಲ್ಲಿ ಇರುತ್ತಾರೆ. ಈಗಾಗಲೇ ಈ ಜೋಡಿ ಮದುವೆಯಾಗಿ ಒಂದು ವರ್ಷ ಕಳೆದಿದೆ. ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ (Athiya Shetty and KL Rahul expecting their first child) ಸುನೀಲ್ ಶೆಟ್ಟಿ ಅವರು ತಮ್ಮ ಮಗಳು ಅಥಿಯಾ ಪ್ರೆಗ್ನೆನ್ಸಿ ಬಗ್ಗೆ ಸುಳಿವು ನೀಡಿದ್ದಾರೆ.
ನಟ ಸುನೀಲ್ ಶೆಟ್ಟಿ ಈಗ ಮಾಧುರಿ ದೀಕ್ಷಿತ್ ಜತೆಗೆ ಜನಪ್ರಿಯ ಡ್ಯಾನ್ಸ್ ರಿಯಾಲಿಟಿ ಶೋ ʻಡ್ಯಾನ್ಸ್ ದೀವಾನೆʼಯಲ್ಲಿ ತೀರ್ಪುಗಾರರಲ್ಲಿ ಒಬ್ಬರಾಗಿದ್ದಾರೆ. ವಿಶೇಷ ಸಂಚಿಕೆಯಲ್ಲಿ, ಕಾರ್ಯಕ್ರಮದ ನಿರೂಪಕಿ ಭಾರ್ತಿ ಸಿಂಗ್ ಅವರು ಸುನೀಲ್ ಅವರು ಅಜ್ಜನ ರೀತಿ ಹೇಗೆ ವರ್ತಿಸಬಹುದು ಎಂದು ಹಾಸ್ಯಮಯವಾಗಿ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಸುನೀಲ್ “ಹೌದು ಮುಂದಿನ ಸೀಸನ್‌ಗೆ ಬಂದಾಗ ನಾನು ವೇದಿಕೆಯ ಮೇಲೆ ಅಜ್ಜನಂತೆಯೇ ಓಡಾಡುತ್ತೇನೆʼʼ ಎಂದು ಪ್ರತಿಕ್ರಿಯೆ ನೀಡಿದ್ದಾರೆ.” ನಟನ ಈ ಹೇಳಿಕೆ ಭಾರಿ ಸದ್ದು ಮಾಡುತ್ತಿದೆ.
ಕೆಎಲ್ ರಾಹುಲ್ ಮತ್ತು ಅಥಿಯಾ ಶೆಟ್ಟಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆಯೇ ಎಂದು ಅಭಿಮಾನಿಗಳು ಪ್ರಶ್ನೆ ಇಟ್ಟಿದ್ದಾರೆ. ಅಥಿಯಾ ಶೆಟ್ಟಿ ಮದುವೆ ನಂತರ ಸಿನಿಮಾಗಳಿಂದ ದೂರವಿದ್ದಾರೆ. ಇತ್ತೀಚೆಗೆ ಯಾವುದೇ ಬಾಲಿವುಡ್‌ಗೆ ಸಂಬಂಧಿಸಿದ ಪಾರ್ಟಿಗಳಲ್ಲಿ ಅಥಿಯಾ ಕಾಣಿಸಿಕೊಳ್ಳುತ್ತಿಲ್ಲ. ಹಾಗಾಗಿ ಈ ಸುದ್ದಿ ಸತ್ಯ ಇರಬಹುದು ಎಂದು ಅವರ ಫ್ಯಾನ್ಸ್ ಊಹಿಸುತ್ತಿದ್ದಾರೆ.
ಇದನ್ನೂ ಓದಿ: KL Rahul Athiya Shetty: ರಾಹುಲ್-ಅಥಿಯಾ ಜೋಡಿಗೆ ದುಬಾರಿ ಉಡುಗೊರೆ ದೊರೆತಿಲ್ಲ; ಸುನೀಲ್ ಶೆಟ್ಟಿ
ಕಳೆದ ವರ್ಷ ಇ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ, ಸುನೀಲ್ ಶೆಟ್ಟಿ ತಮ್ಮ ಅಳಿಯ ಕೆಎಲ್ ರಾಹುಲ್ ಬಗ್ಗೆ ಮಾತನಾಡುವಾಗ ಅಪಾರ ಸಂತೋಷ ವ್ಯಕ್ತಪಡಿಸಿದ್ದರು. ಅಥಿಯಾ ಶೆಟ್ಟಿ ಮತ್ತು ಕೆ ಎಲ್ ರಾಹುಲ್ ವರ್ಷಗಳ ಡೇಟಿಂಗ್ ನಂತರ 2023ರ ಜನವರಿ 23ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.
ಖಂಡಾಲದಲ್ಲಿರುವ ಸುನೀಲ್ ಶೆಟ್ಟಿ ಅವರ ತೋಟದ ಮನೆಯಲ್ಲಿ ಈ ಜೋಡಿ ಹಸೆಮಣೆ ಏರಿತ್ತು. ಹಲವಾರು ಬಿ-ಟೌನ್ ಸೆಲೆಬ್ರಿಟಿಗಳು ನವವಿವಾಹಿತ ದಂಪತಿಗೆ ಶುಭ ಹಾರೈಸಿದ್ದರು.