Site icon Vistara News

Athiya Shetty | ಶೂಟಿಂಗ್‌ ವೇಳೆ ಒಟ್ಟಿಗೆ ಕಾಣಿಸಿಕೊಂಡ ನಟಿ ಅಥಿಯಾ ಶೆಟ್ಟಿ- ಕ್ರಿಕೆಟಿಗ ಕೆ ಎಲ್‌ ರಾಹುಲ್‌

Athiya Shetty

ಬೆಂಗಳೂರು: ಕ್ರಿಕೆಟಿಗ ಕೆ. ಎಲ್. ರಾಹುಲ್ ಮತ್ತು ನಟ ಸುನೀಲ್ ಶೆಟ್ಟಿ ಅವರ ಪುತ್ರಿ ಅಥಿಯಾ ಶೆಟ್ಟಿ (Athiya Shetty) ಕೆಲ ದಿನಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ. ಆಗಾಗ ಇಬ್ಬರು ಜತೆಗಿರುವ ಫೋಟೊ ಹಾಗೂ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿರುತ್ತದೆ . ಇದೀಗ ಈ ಜೋಡಿ ಡಿಸೆಂಬರ್ 28ರಂದು ಚಿತ್ರೀಕರಣ ಒಂದರಲ್ಲಿ ಒಟ್ಟಿಗೆ ಕಾಣಿಸಿಕೊಂಡಿದೆ.

ಬಾಲಿವುಡ್ ನಟ ಸುನೀಲ್ ಶೆಟ್ಟಿ ಅವರ ಪುತ್ರಿ ಅಥಿಯಾ ಅವರು ರಾಹುಲ್ ಅವರ ಬಹುಕಾಲದ ಗೆಳತಿಯಾಗಿದ್ದಾರೆ. ಕಳೆದ ಕೆಲವು ತಿಂಗಳಿಂದ ಇವರಿಬ್ಬರ ವಿವಾಹ ಕುರಿತಾದ ಸುದ್ದಿಗಳು ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದ್ದವು. ಈಗ ಅಥಿಯಾ ತಮ್ಮ ತಂಡದವರೊಂದಿಗೆ ಶೂಟಿಂಗ್ ನಡೆದ ಕೋಣೆಯಿಂದ ಹೊರಕ್ಕೆ ಹೋಗಿರುವ ದೃಶ್ಯ ಸೆರೆಯಾಗಿದೆ. ನಟಿ ಹೊರಗೆ ಹೋಗುತ್ತಿದ್ದಂತೆ ರಾಹುಲ್ ಕೂಡ ಅವರನ್ನು ಹಿಂಬಾಲಿಸಿರುವ ದೃಶ್ಯ ವಿಡಿಯೊದಲ್ಲಿದೆ.

ಇದನ್ನೂ ಓದಿ | Sunil Shetty | ಮಗಳು ಅಥಿಯಾ ಶೆಟ್ಟಿ ಮದುವೆಯ ಬಗ್ಗೆ ಸ್ಪಷ್ಟನೆ ನೀಡಿದ ನಟ ಸುನೀಲ್‌ ಶೆಟ್ಟಿ

ಸುನಿಲ್ ಶೆಟ್ಟಿ ಅವರ ಪುತ್ರ ಅಹಾನ್ ಶೆಟ್ಟಿ ಅವರ ಚೊಚ್ಚಲ ಚಿತ್ರ ‘ತಡಪ್’ನ ಪ್ರಥಮ ಪ್ರದರ್ಶನದ ವೇಳೆ, ರಾಹುಲ್-ಅಥಿಯಾ ಮೊದಲ ಬಾರಿಗೆ ಸಾರ್ವಜನಿಕವಾಗಿ ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ತಮ್ಮ ಗೆಳೆತನವನ್ನು ಅಧಿಕೃತಗೊಳಿಸಿದ್ದರು. ಈ ಮೊದಲು ಡಿಸೆಂಬರ್ ಅಂತ್ಯಕ್ಕೆ ಮದುವೆ ನಡೆಯಲಿದೆ ಎಂಬ ಸುದ್ದಿ ಇತ್ತು. ಮದುವೆ ದಿನಾಂಕದ ಬಗ್ಗೆ ಜೋಡಿ ಇನ್ನೂ ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿಲ್ಲ.

ಇದನ್ನೂ ಓದಿ | Athiya Shetty | ನಟಿ ಅಥಿಯಾ ಶೆಟ್ಟಿ- ಕ್ರಿಕೆಟಿಗ ಕೆ ಎಲ್‌ ರಾಹುಲ್‌ ಮದುವೆ ಡೇಟ್ ಫಿಕ್ಸ್‌!

Exit mobile version