Site icon Vistara News

Athiya Shetty KL Rahul: ಮ್ಯಾಗಜೀನ್ ಕವರ್ ಫೋಟೊಶೂಟ್‌ ಹಂಚಿಕೊಂಡ ಅಥಿಯಾ ಶೆಟ್ಟಿ!

Athiya Shetty KL Rahul

ಬೆಂಗಳೂರು: ಜನವರಿ 23ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟ ಅಥಿಯಾ ಶೆಟ್ಟಿ ಮತ್ತು ಕೆ ಎಲ್ ರಾಹುಲ್ ಮ್ಯಾಗಜೀನ್ (Athiya Shetty KL Rahul) ಕವರ್ ಫೋಟೊಶೂಟ್‌ಗಾಗಿ ಒಟ್ಟಿಗೆ ಪೋಸ್ ನೀಡಿದ್ದಾರೆ. ಇದೀಗ ನಟಿ ಅಥಿಯಾ ಶೆಟ್ಟಿ ಇನ್‌ಸ್ಟಾದಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ. ಅಥಿಯಾ ಮತ್ತು ಕೆ ಎಲ್ ರಾಹುಲ್ ಅವರು ಮದುವೆಯಾಗುವ ಒಂದು ತಿಂಗಳ ಮೊದಲು ಮ್ಯಾಗಜೀನ್ ಕವರ್ ಶೂಟ್‌ಗಾಗಿ ಚಿತ್ರೀಕರಣ ಮಾಡಿದ್ದಾರೆ ಎಂದು ವರದಿಯಾಗಿದೆ.

ಅವರ ಮೊದಲ ಮ್ಯಾಗಜೀನ್ ಕವರ್‌ಗಾಗಿ, ದಂಪತಿ ಪೈಜಾಮಾ ಮತ್ತು ಬಾತ್‌ರೋಬ್‌ಗಳನ್ನು ಧರಿಸಿದ್ದರು. ಅಲ್ಲಿ ಅವರು ಕನಿಷ್ಠ ಮೇಕ್ಅಪ್ ಧರಿಸಿದ್ದರು. ಇತ್ತೀಚಿನ ಫೋಟೊಶೂಟ್‌ಗಳಿಗಿಂತ ಇದು ತುಂಬ ಭಿನ್ನವಾಗಿ ಕಂಡಿದೆ. ವೋಗ್ ಇಂಡಿಯಾದ ಫೆಬ್ರವರಿ ತಿಂಗಳ ಡಿಜಿಟಲ್ ಕವರ್ ಶೂಟ್‌ಗಾಗಿ, ತೆಗೆಸಿದ ಫೋಟೊಶೂಟ್‌ ಇದಾಗಿದೆ.

ಇದನ್ನೂ ಓದಿ: Athiya Shetty Rahul Wedding : ಮದುವೆ ವೇಳೆ ಕರ್ನಾಟಕದ ಕರಾವಳಿಯ ಸಂಪ್ರದಾಯ ಪಾಲಿಸಿದ್ದ ಅಥಿಯಾ ಶೆಟ್ಟಿ, ರಾಹುಲ್​

ಇದನ್ನೂ ಓದಿ: Athiya Shetty KL Rahul wedding: ಹಸೆಮಣೆ ಏರಿದ ಕೆ.ಎಲ್​. ರಾಹುಲ್​-ಅಥಿಯಾ ಶೆಟ್ಟಿ

ನಟಿ ಅಥಿಯಾ ಶೆಟ್ಟಿ ಹಾಗೂ ಕ್ರಿಕೆಟಿಗ ಕೆ.ಎಲ್‌ ರಾಹುಲ್‌ (Athiya Shetty KL Rahul Wedding) ಜನವರಿ 23 ಸೋಮವಾರದಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಖಂಡಾಲದಲ್ಲಿರುವ ಸುನೀಲ್ ಶೆಟ್ಟಿ ಅವರ ತೋಟದ ಮನೆಯಲ್ಲಿ ಜೋಡಿ ಹಸೆಮಣೆ ಏರಿದೆ. ಹಲವಾರು ಬಿ-ಟೌನ್ ಸೆಲೆಬ್ರಿಟಿಗಳು ನವವಿವಾಹಿತ ದಂಪತಿಗೆ ಶುಭ ಹಾರೈಸಿದ್ದಾರೆ.

Exit mobile version