ಬೆಂಗಳೂರು: ಪಾಕಿಸ್ತಾನಿ ಗಾಯಕ ಆತೀಫ್ ಅಸ್ಲಾಮ್ (Atif Aslam) ಇತ್ತೀಚೆಗೆ ಅಮೆರಿಕದಲ್ಲಿ ಸಂಗೀತ ಕಾರ್ಯಮವೊಂದರಲ್ಲಿ ಹಾಡುತ್ತಿದ್ದಾಗ ಅಭಿಮಾನಿಯೊಬ್ಬರು ಅವರ ಮೇಲೆ ನೋಟುಗಳನ್ನ ಎಸೆದಿದ್ದಾರೆ. ತಕ್ಷಣ ಗಾಯಕ ಹಾಡು ನಿಲ್ಲಿಸಿ ಅಭಿಮಾನಿಯನ್ನು ವೇದಿಕೆಗೆ ಕರೆದು ಈ ʻʻಹಣವನ್ನು ನನ್ನ ಮೇಲೆ ಹಾಕುವ ಬದಲು ಯಾರಿಗಾದರೂ ದಾನ ಮಾಡಿ ಎಂದುʼʼ ಹೇಳಿದ್ದಾರೆ. ಇದೀಗ ಈ ವಿಡಿಯೊ ವೈರಲ್ ಆಗಿದೆ.
ಆನ್ಲೈನ್ನಲ್ಲಿ ಕಾಣಿಸಿಕೊಂಡಿರುವ ವಿಡಿಯೊದಲ್ಲಿ ಅಭಿಮಾನಿಯೊಬ್ಬರು ವೇದಿಕೆಯ ಸಮೀಪಕ್ಕೆ ಬಂದು ಸೋಚ್ತಾ ಹುನ್ ಕೆ ವೋ ಹಾಡನ್ನು ಹಾಡುತ್ತಿರುವಾಗ ಆತೀಫ್ ಅಸ್ಲಾಮ್ ಮೇಲೆ ನೋಟುಗಳನ್ನು ಎಸೆದಿದ್ದಾರೆ. ಗಾಯಕ ತಕ್ಷಣ ಗಾಯಕ ಹಾಡು ನಿಲ್ಲಿಸಿ ಅಭಿಮಾನಿಗೆ, “ನನ್ನ ಸ್ನೇಹಿತ, ಈ ಹಣವನ್ನು ನೀವು ದಾನ ಮಾಡಬಹುದು” ಎಂದು ಹೇಳಿದರು. ಆಗ ಆತಿಫ್ ಅಭಿಮಾನಿಯತ್ತ ಕೈ ಬೀಸಿ ವೇದಿಕೆ ಮೇಲೆ ಬರುವಂತೆ ಕೇಳಿಕೊಂಡರು. “ಬನ್ನಿ, ದಯವಿಟ್ಟು ಬನ್ನಿ, ನೀವು ತುಂಬಾ ಶ್ರೀಮಂತರು ಎಂದು ನನಗೆ ತಿಳಿದಿದೆ. ಮತ್ತು ನಾನು ಅದನ್ನು ಪ್ರಶಂಸಿಸುತ್ತೇನೆ. ದಯವಿಟ್ಟು ಹಣವನ್ನು ಯಾರಿಗಾದರೂ ದಾನ ಮಾಡಿ. ನಾನು ಈ ಐಡಿಯಾವನ್ನು ಇಷ್ಟಪಡುತ್ತೇನೆ, ಆದರೆ ಇದು ಹಣಕ್ಕೆ ತೋರಿಸಿರುವ ಅಗೌರವವಾಗಿದೆ. ಅದನ್ನು ನನ್ನ ಮೇಲೆ ಎಸೆಯಬೇಡಿ.”ಎಂದು ಹೇಳಿದ್ದಾರೆ.
ಅನೇಕ ಅಭಿಮಾನಿಗಳು ಆತೀಫ್ ಅಸ್ಲಾಮ್ ಅವರನ್ನು ಹೊಗಳಿದರು. ಅವರಲ್ಲಿ ಒಬ್ಬರು, “ಅದಕ್ಕಾಗಿಯೇ ನಾವು ಆತೀಫ್ ಅಸ್ಲಾಮ್ ಅವರನ್ನು ಪ್ರೀತಿಸುತ್ತೇವೆ” ಎಂದು ಬರೆದಿದ್ದಾರೆ. ಆತೀಫ್ ಅಸ್ಲಾಮ್ ಮತ್ತು ಅವರ ಪತ್ನಿ ಸಾರಾ ಇತ್ತೀಚೆಗೆ ತಮ್ಮ ಮೂರನೇ ಮಗುವನ್ನು ಸ್ವಾಗತಿಸಿದರು. ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ.
ಇದನ್ನೂ ಓದಿ: ICC World Cup 2023: ಪಾಕ್ ಸೋಲಿನ ಗಾಯಕ್ಕೆ ‘ಟ್ರೋಲ್’ ಬರೆ ಎಳೆದ ಭಾರತೀಯರು; ನೋಡಿ
"My friend, Donate this money, don't throw it at me, this is just disrespect to the money" How calmly he requested and gave a message to the jahil pakistanis who made this thing a culture. What a man he his, one and only undisputed pakistani star whom you should admire @itsaadee pic.twitter.com/KOSvUMvSha
— Faizi (@faizanriaz7_) October 24, 2023
ಪಾಕಿಸ್ತಾನಿ ಗಾಯಕ ಬಾಲಿವುಡ್ ಹಲವು ಚಿತ್ರಗಳಿಗೆ ಹಾಡಿದ್ದಾರೆ. ಅವರ ಕೆಲವು ಹಿಟ್ ಹಿಂದಿ ಹಾಡುಗಳಲ್ಲಿ ತೇರೆ ಸಂಗ್ ಯಾರಾ (ರುಸ್ತಂ); ಅಜಬ್ ಪ್ರೇಮ್ ಕಿ ಗಜಬ್ ಕಹಾನಿ ಹಾಡುಗಳು ತೂ ಜಾನೇ ನಾ, ಮತ್ತು ತೇರಾ ಹೋನೆ ಲಗಾ ಹೂನ್ , ಅವರು ಶಾಹಿದ್ ಕಪೂರ್ ಅವರ ಮೈನ್ ರಂಗ್ ಶರ್ಬತೋನ್ ಕಾ ಹೀಗೆ ಹಿಟ್ ಹಾಡುಗಳು ಸೇರಿವೆ. ಸಲ್ಮಾನ್ ಖಾನ್ ಅವರ ದಿಲ್ ದಿಯಾನ್ ಗಲ್ಲಾ (ಟೈಗರ್ ಜಿಂದಾ ಹೈ) ಮತ್ತು ಮೈನ್ ಅಗರ್ (ಟ್ಯೂಬ್ಲೈಟ್) ಹಾಡುಗಳನ್ನು ಸಹ ಹಾಡಿದ್ದರು.