ಬೆಂಗಳೂರು: ಜವಾನ್ ನಿರ್ದೇಶಕ ಅಟ್ಲೀ (Atlee Kumar) ಅವರು ತಂದೆಯಾಗಿದ್ದಾರೆ. ಅಟ್ಲೀ ಕುಮಾರ್ ಪತ್ನಿ ಪ್ರಿಯಾ ಗಂಡು ಮಗುವಿಗೆ ತಾಯಿಯಾಗಿದ್ದಾರೆ. ಈ ವಿಷಯವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ತಮಿಳು ಚಿತ್ರರಂಗದಲ್ಲಿ ಖ್ಯಾತ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಅಟ್ಲೀ ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಸೂಪರ್ ಹಿಟ್ ಸಿನಿಮಾಗಳ ನಿರ್ದೇಶಕ ಅಟ್ಲೀ ಕುಮಾರ್ ಇದೀಗ ‘ಜವಾನ್’ ಸಿನಿಮಾ ಮೂಲಕ ಬಾಲಿವುಡ್ಗೆ ಎಂಟ್ರಿ ಕೊಟ್ಟಿದ್ದಾರೆ.
ಇನ್‌ಸ್ಟಾದಲ್ಲಿ ಅಟ್ಲೀ ಮಗುವಿನ ಬೂಟುಗಳನ್ನು ಹಿಡಿದಿರುವ ಚಿತ್ರವನ್ನು ಹಂಚಿಕೊಂಡು ‘ಇಟ್ಸ್ ಎ ಬಾಯ್’ ಎಂದು ಸಂತಸ ಹಂಚಿಕೊಂಡಿದ್ದಾರೆ. ಜೋಡಿ 2014ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತ್ತು. ಪ್ರಿಯಾ ಆಗಾಗ ತಮ್ಮ ವೈಯಕ್ತಿಕ ಫೋಟೊಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.
ಇದನ್ನೂ ಓದಿ: Atlee Kumar | 8 ವರ್ಷಗಳ ನಂತರ ಮಗುವಿನ ನಿರೀಕ್ಷೆಯಲ್ಲಿ ನಿರ್ದೇಶಕ ಅಟ್ಲೀ ದಂಪತಿ
ಇದನ್ನೂ ಓದಿ: Atlee Kumar | 8 ವರ್ಷಗಳ ನಂತರ ಮಗುವಿನ ನಿರೀಕ್ಷೆಯಲ್ಲಿ ನಿರ್ದೇಶಕ ಅಟ್ಲೀ ದಂಪತಿ
ವೃತ್ತಿಪರವಾಗಿ, ತಮಿಳಿನಲ್ಲಿ ಖ್ಯಾತ ನಟ ದಳಪತಿ ವಿಜಯ್ ಅಭಿನಯದಲ್ಲಿ ‘ಥೇರಿ’, ‘ಬಿಜಿಲ್’ ಮುಂತಾದ ಯಶಸ್ವಿ ಮತ್ತು ಜನಪ್ರಿಯ ಚಿತ್ರಗಳನ್ನು ನಿರ್ದೇಶಿಸಿದವರು. ತಮಿಳು ಚಿತ್ರರಂಗದಲ್ಲಿ ಉನ್ನತ ಚಲನಚಿತ್ರ ತಯಾರಕರಲ್ಲಿ ಒಬ್ಬರೆಂಬ ಖ್ಯಾತಿ ಹೊಂದಿದ್ದಾರೆ. ಅಟ್ಲೀ ಪ್ರಸ್ತುತ ತಮ್ಮ ಚೊಚ್ಚಲ ಬಾಲಿವುಡ್ ಚಿತ್ರ ʻಜವಾನ್ʼ ಅನ್ನು ನಿರ್ದೇಶಿಸಲಿದ್ದಾರೆ. ಶಾರುಖ್ ಖಾನ್ ಮತ್ತು ನಯನತಾರಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.