Site icon Vistara News

Nick Jonas: ಪ್ರಿಯಾಂಕಾ ಗಂಡನ ಸಂಗೀತ ಕಾರ್ಯಕ್ರಮದಲ್ಲಿ ‘ಬ್ರಾ’ ಎಸೆದ ಅಭಿಮಾನಿ!

Nick Jonas at New York concert

ನಿಕ್ ಜೋನಾಸ್ (Nick Jonas) ಸಂಗೀತ ಕಾರ್ಯಕ್ರಮದ ವೇಳೆ ಅವರ ಮೇಲೆ ಬ್ರಾ ಎಸೆದಿರುವ ಘಟನೆ ಹಲವು ಬಾರಿ ನಡೆದಿದೆ. ಪ್ರಿಯಾಂಕಾ ಚೋಪ್ರಾ ಕೂಡ ಹಿಂದೊಮ್ಮೆ ಬ್ರಾ ಎಸೆದ ಬಳಿಕ ತೆಗೆದುಕೊಂಡು ಹೋಗುತ್ತಿರುವ ವಿಡಿಯೊ ವೈರಲ್‌ ಆಗಿತ್ತು. ನ್ಯೂಯಾರ್ಕ್‌ನ ಯಾಂಕೀ ಸ್ಟೇಡಿಯಂನಲ್ಲಿ (New York concert) ಆಗಸ್ಟ್‌ 12ರಂದು ನಡೆದ ಜೋನಸ್ ಬ್ರದರ್ಸ್ ಸಂಗೀತ ಕಾರ್ಯಕ್ರಮ ( Yankee Stadium in New York) ನಡೆದಿದೆ. ನಿಕ್ ಜೊನಾಸ್ ಅವರ ಸಹೋದರರಾದ ಕೆವಿನ್ ಜೊನಾಸ್ ಮತ್ತು ಜೋ ಜೊನಾಸ್ ಅವರೊಂದಿಗೆ (Nick Jonas, Kevin Jonas and Joe Jonas’ show) ಪ್ರದರ್ಶನ ನೀಡಿದರು. ಕಾರ್ಯಕ್ರಮದ ಹಲವಾರು ಚಿತ್ರಗಳು ಮತ್ತು ವಿಡಿಯೊಗಳು ವೈರಲ್‌ ಆಗಿದೆ. ಒಂದರಲ್ಲಿ ಅಭಿಮಾನಿಯೊಬ್ಬರು ನಿಕ್ ಮೇಲೆ ಬ್ರಾ ಎಸೆದಿದ್ದಾರೆ. ಈ ಬಗ್ಗೆ ನೆಟ್ಟಿಗರು ʻಅಸಹ್ಯಕರʼ ಎಂದು ಬೇಸರ ಹೊರ ಹಾಕಿದ್ದಾರೆ.

ಫ್ಯಾನ್ಸ್‌ ಪೇಜ್‌ನಲ್ಲಿ ಪೋಸ್ಟ್ ಮಾಡಲಾದ ವಿಡಿಯೊದಲ್ಲಿ, ನಿಕ್ ನೀಲಿ ಶರ್ಟ್ ಧರಿಸಿ ಹಾಡುತ್ತಿರುವುದನ್ನು ಕಾಣಬಹುದು. ಫ್ಯಾನ್ಸ್‌ಗೆ ಕಡೆಗೆ ಹಾಡುತ್ತಿದ್ದಾಗ ಯಾರೋ ಕಪ್ಪು ಬ್ರಾವನ್ನು ವೇದಿಕೆಯ ಮೇಲೆ ಎಸೆದಿದ್ದಾರೆ. ಸ್ವಲ್ಪ ಸಮಯ ನಿಕ್‌ ಹಾಡನ್ನು ನಿಲ್ಲಿಸಿ, ಬಳಿಕ ಹಾಡಲು ಶುರು ಮಾಡಿದ್ದಾರೆ.

ವಿಡಿಯೊಗಳು ವೈರಲ್‌ ಆಗುತ್ತಿದ್ದಂತೆ ʻʻಅಭಿಮಾನಿಗಳು ಕಲಾವಿದರನ್ನು ಹೇಗೆ ಗೌರವಿಸಬೇಕು ಎಂಬುದನ್ನು ಕಲಿಯಬೇಕುʼʼ ಎಂದು ಒಬ್ಬರು ಕಮೆಂಟ್‌ ಮಾಡಿದ್ದಾರೆ. ʻʻತುಂಬಾ ಮುಜುಗರದ ಸಂಗತಿಯಾಗಿದೆ. ನಿಮ್ಮನ್ನು ಅಭಿಮಾನಿ ಎಂದು ಕರೆದುಕೊಳ್ಳುವುದು ಮತ್ತು ಕಲಾವಿದನ ಮೇಲೆ ಬ್ರಾ ಎಸೆಯುವುದು…ಇದು ಎಷ್ಟು ಅಗೌರವ ಮತ್ತು ಅಸಹ್ಯಕರ” ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Priyanka Chopra Nick Jonas: ಇಲ್ಲಿವೆ ‘Bomb Couple’ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಸ್‌ ಲೇಟೆಸ್ಟ್‌ ಫೋಟೊಗಳು

ನಿಕ್​ ಜೋನಾಸ್​​ರತ್ತ ಬಿಳಿ ಬಣ್ಣದ ಬ್ರಾ ಎಸೆಸಿದ್ದರು!

ಪ್ರೀತಿಸಿ ಮದುವೆಯಾದ ಬಾಲಿವುಡ್​ ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಮತ್ತು ಗಾಯಕ ನಿಕ್ ಜೋನಾಸ್ (Nick Jonas)​ ಜೋಡಿಗೆ ದೊಡ್ಡ ಅಭಿಮಾನಿ ಬಳಗವಿದೆ. ಇವರಿಬ್ಬರೂ ಸಾರ್ವಜನಿಕವಾಗಿ ಹಲವು ಸಮಾರಂಭ, ಕಾರ್ಯಕ್ರಮಗಳಲ್ಲಿ ಒಟ್ಟಿಗೇ ಕಾಣಿಸಿಕೊಳ್ಳುತ್ತಾರೆ. 2019ರಲ್ಲಿ ನಿಕ್ ಜೋನಾಸ್ ಮತ್ತು ಅವರ ಸಹೋದರರು ಒಂದು ಲೈವ್​ ಕಾನ್ಸರ್ಟ್​ ಏರ್ಪಡಿಸಿದ್ದರು. ಇದು ಅಟ್ಲಾಂಟಾದಲ್ಲಿ ನಡೆದ ಮ್ಯೂಸಿಕ್ ಲೈವ್​ ಕಾನ್ಸರ್ಟ್ ಆಗಿತ್ತು. ಪತಿಯೊಂದಿಗೆ ಸಮಾರಂಭಕ್ಕೆ ಪ್ರಿಯಾಂಕಾ ಚೋಪ್ರಾ ಕೂಡ ಹೋಗಿದ್ದರು. ಅಲ್ಲೆಲ್ಲ ಜೋನಾಸ್​ ಅಭಿಮಾನಿಗಳು ತುಂಬಿ-ತುಳುಕುತ್ತಿದ್ದರು. ಸಾವಿರಾರು ಜನರ ಮಧ್ಯೆ ಯಶಸ್ವಿಯಾಗಿ ಲೈವ್​ ಕಾನ್ಸರ್ಟ್​ ನಡೆದು, ಮುಕ್ತಾಯಗೊಂಡಿತು. ಹೀಗೆ ಸಮಾರಂಭ ನಡೆಯುತ್ತಿದ್ದಾಗಲೇ ನಿಕ್​ ಜೋನಾಸ್​ ಅಭಿಮಾನಿಯೊಬ್ಬಳು ವೇದಿಕೆಯತ್ತ ತನ್ನ ಬ್ರಾ ಎಸೆದಿದ್ದಳು.

ಇದನ್ನೂ ಓದಿ: Jailer Movie: ರಜನಿಕಾಂತ್‌ ಸೈಲಿಶ್‌ ಎಂಟ್ರಿ ಕೊಡುತ್ತಿದ್ದಂತೆ ತೆರೆ ಮೇಲೆ ಪ್ರದರ್ಶನ ಸ್ತಬ್ಧ!ಏನಿದು ಘಟನೆ?

ಕನ್ಸರ್ಟ್​ ಮುಕ್ತಾಯವಾದ ಬಳಿಕ ಪ್ರಿಯಾಂಕಾ ಚೋಪ್ರಾ ಅವರು ತಮ್ಮ ಪತಿಯ ಸಹೋದರ ಕೆವಿನ್ ಜೋನಾಸ್​ ಜತೆ ಹೋಗುತ್ತಿದ್ದಾಗ ನೆಲದ ಮೇಲೆ ಬಿದ್ದಿದ್ದ ಬ್ರಾವನ್ನು ನೋಡಿ ಎತ್ತಿಕೊಂಡು, ಅದನ್ನು ಮೇಲೆತ್ತಿ ಪ್ರದರ್ಶಿಸುತ್ತ ಅಲ್ಲಿಂದ ತೆರಳಿದ್ದರು. ಬ್ರಾ ಹಿಡಿದ ಪ್ರಿಯಾಂಕಾ ಚೋಪ್ರಾ, ಅದನ್ನು ತಿರುಗಿಸಿ, ತಿರುಗಿಸಿ ಕ್ಯಾಮೆರಾಕ್ಕೆ ತೋರಿಸಿದ್ದರು!

Exit mobile version