ಬೆಂಗಳೂರು : 13 ವರ್ಷಗಳ ನಂತರ ಜೇಮ್ಸ್ ಕ್ಯಾಮರೂನ್ ನಿರ್ದೇಶನದ ಅವತಾರ್-2 ದಿ ವೇ ಆಫ್ ವಾಟರ್ (Avatar: The Way of Water) ಡಿಸೆಂಬರ್ 16ರಂದು ವಿಶ್ವಾದ್ಯಂತ ಬಿಡುಗಡೆಯಾಗಿದೆ. ಚಿತ್ರ ಬಿಡುಗಡೆಯಾದ ಕೇವಲ 3 ದಿನಗಳಲ್ಲಿ ಭಾರತದಲ್ಲಿ 160 ಕೋಟಿ ರೂ. ಸಂಗ್ರಹಿಸುವಲ್ಲಿ ಯಶಸ್ವಿಯಾಗಿದೆ. ಮೊದಲ ದಿನ ಭಾರತದಲ್ಲಿ 41 ಕೋಟಿ ರೂ. ಗಳಿಕೆ ಕಂಡಿತ್ತು. ಇದೀಗ ಅವತಾರ್-2 ವಿಶ್ವಾದ್ಯಂತ ಒಟ್ಟು ಮೂರು ದಿನಗಳಲ್ಲಿ 3600 ಕೋಟಿ ರೂ.ಗಿಂತ ಹೆಚ್ಚು ಕಲೆಕ್ಷನ್ ಮಾಡಿದೆ.
ಅಮೆರಿಕ ಮತ್ತು ಕೆನಡಾದಲ್ಲಿ 12,000 -40,000ಕ್ಕೂ ಹೆಚ್ಚು ಪರದೆಗಳಲ್ಲಿ ಅವತಾರ್-2 ಬಿಡುಗಡೆಯಾಗಿದೆ. ಸುಮಾರು 3 ಗಂಟೆ 12 ನಿಮಿಷ 10 ಸೆಕೆಂಡುಗಳಿಗೂ ಹೆಚ್ಚು ಅವಧಿಯ ಸಿನಿಮಾ ಇದಾಗಿದೆ. ಚಿತ್ರದಲ್ಲಿ ತಮ್ಮ ಬುಡಕಟ್ಟು ಜನಾಂಗವನ್ನು ಉಳಿಸುವ ಪ್ರಯತ್ನದಲ್ಲಿ ಜೀವದ ಹಂಗು ತೊರೆದು ಹೋರಾಡುವ ಅನ್ಯ ಜೀವಿಗಳ ರೋಚಕ ಯುದ್ಧದ ದೃಶ್ಯಗಳು ನೋಡುಗರನ್ನು ಅಚ್ಚರಿಗೊಳಿಸಿವೆ.
ಇದನ್ನೂ ಓದಿ | Avatar 2 | ಅವತಾರ್ ಸಿನಿಮಾ ನೋಡುವಾಗಲೇ ವ್ಯಕ್ತಿಗೆ ಹೃದಯಾಘಾತ, ಸಾವು
ಈಗಾಗಲೇ ಸಿನಿಮಾ ಬಗ್ಗೆ ವಿಮರ್ಶಕರು ಹಾಡಿ ಹೊಗಳಿದ್ದಾರೆ. ಅವತಾರ್ 2 ದೊಡ್ಡ ಬಜೆಟ್ ಚಿತ್ರ. ಮೊದಲ ಭಾಗ ಬಿಡುಗಡೆಯಾದ ನಂತರ ಅದ್ಧೂರಿ ಬಜೆಟ್‌ನಿಂದಾಗಿ ಎರಡನೇ ಭಾಗ ತಡವಾಗಿ ರಿಲೀಸ್ ಆಯ್ತು ಎನ್ನಲಾಗುತ್ತಿದೆ. ವರದಿಗಳ ಪ್ರಕಾರ, 25 ಕೋಟಿ ಡಾಲರ್‌ಗಳಲ್ಲಿ ತಯಾರಾದ ಚಿತ್ರವು ಅದರ ವೆಚ್ಚವನ್ನು ಮರುಪಡೆಯಲು ಹೆಚ್ಚು ಸಮಯ ಥಿಯೇಟರ್‌ಗಳಲ್ಲಿ ಉಳಿಯಬೇಕಾಗುತ್ತದೆ.
ಇದನ್ನೂ ಓದಿ | Avatar: The Way of Water | ಎರಡೇ ದಿನದಲ್ಲಿ 1500 ಕೋಟಿ ರೂ.ಗಿಂತ ಹೆಚ್ಚು ಗಳಿಕೆ ಕಂಡಿತೇ ಅವತಾರ್-2?