ಬೆಂಗಳೂರು: 13 ವರ್ಷಗಳ ನಂತರ ಜೇಮ್ಸ್ ಕ್ಯಾಮರೂನ್ ನಿರ್ದೇಶನದ ಅವತಾರ್-2 ದಿ ವೇ ಆಫ್ ವಾಟರ್ (Avatar: The Way of Water) ಡಿಸೆಂಬರ್ 16ರಂದು ವಿಶ್ವಾದ್ಯಂತ ಬಿಡುಗಡೆಯಾಗಿದೆ. ಎರಡನೇ ವಾರದಲ್ಲಿ ಭಾರತದಲ್ಲಿ 223 ಕೋಟಿ ರೂ. ಗಳಿಸಿದೆ. ಮುಂಬರುವ ವಾರದಲ್ಲಿ 300 ಕೋಟಿ ರೂ. ಗಳಿಕೆ ಕಾಣಬಹುದು ಎಂದು ಅಂದಾಜಿಸಲಾಗಿದೆ.
ಚಿತ್ರ ಬಿಡುಗಡೆಯಾದ ಮೊದಲ ದಿನವೇ ಈ ಚಿತ್ರ 41 ಕೋಟಿ ರೂ. ಗಳಿಕೆ ಕಂಡಿತ್ತು. ವಿಶ್ವಾದ್ಯಂತ ಒಟ್ಟು ಮೂರು ದಿನಗಳಲ್ಲಿ 3,600 ಕೋಟಿ ರೂ.ಗಿಂತ ಹೆಚ್ಚು ಕಲೆಕ್ಷನ್ ಮಾಡಿದೆ.
ಇದನ್ನೂ ಓದಿ | Avatar: The Way of Water | ಎರಡೇ ದಿನದಲ್ಲಿ 1500 ಕೋಟಿ ರೂ.ಗಿಂತ ಹೆಚ್ಚು ಗಳಿಕೆ ಕಂಡಿತೇ ಅವತಾರ್-2?
ಚಿತ್ರದಲ್ಲಿ ತಮ್ಮ ಬುಡಕಟ್ಟು ಜನಾಂಗವನ್ನು ಉಳಿಸುವ ಪ್ರಯತ್ನದಲ್ಲಿ ಜೀವದ ಹಂಗು ತೊರೆದು ಹೋರಾಡುವ ಅನ್ಯ ಜೀವಿಗಳ ರೋಚಕ ಯುದ್ಧದ ದೃಶ್ಯಗಳು ನೋಡುಗರನ್ನು ಅಚ್ಚರಿಗೊಳಿಸಿವೆ.
ಅವತಾರ್: ದಿ ವೇ ಆಫ್ ವಾಟರ್‌ನಲ್ಲಿ, ಸಿಗೌರ್ನಿ ವೀವರ್, ಕೇಟ್ ವಿನ್ಸ್ಲೆಟ್, ಕ್ಲಿಫ್ ಕರ್ಟಿಸ್, ಎಡಿ ಫಾಲ್ಕೊ ಮತ್ತು ಜೆಮೈನ್ ಕ್ಲೆಮೆಂಟ್ ನಟಿಸಿದ್ದಾರೆ. ಭಾರತದಲ್ಲಿ ಇಂಗ್ಲಿಷ್, ಹಿಂದಿ, ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗಿದೆ.
ಇದನ್ನೂ ಓದಿ | Avatar: The Way of Water | ವೀಕೆಂಡ್ನಲ್ಲಿ ಅವತಾರ್-2 ಅತ್ಯಧಿಕ ಕಲೆಕ್ಷನ್!