Site icon Vistara News

Avatar: The Way of Water | ಕೇರಳದ 400 ಚಿತ್ರಮಂದಿರಗಳಲ್ಲಿ ಅವತಾರ್‌-2 ಬ್ಯಾನ್‌: ಕಾರಣವೇನು?

Avatar The Way of Water

ಬೆಂಗಳೂರು : ಡಿಸೆಂಬರ್‌ 16ರಂದು ಅವತಾರ್‌-2 (Avatar: The Way of Water ) ತೆರೆ ಕಾಣಲಿದೆ. ‘ಅವತಾರ್‌’ ಟೈಟಲ್ ಮೂಲಕವೇ ಇಡೀ ಜಗತ್ತಿನ ಗಮನ ಸೆಳೆದಿತ್ತು ಈ ಸಿನಿಮಾ. ಅದರಲ್ಲೂ ಕೋಟಿ ಕೋಟಿ ಭಾರತೀಯರಿಗೆ ‘ಅವತಾರ್‌’ ಎಂಬ ಹೆಸರು ಸಾಕಷ್ಟು ಹತ್ತಿರವಾಗಿತ್ತು. ಇದೀಗ ಥಿಯೇಟರ್ ರೈಟ್ಸ್ ಮಾರಾಟ ಮಾಡಲು ನಿರ್ಮಾಪಕರು ಹೆಚ್ಚು ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂಬ ಕಾರಣಕ್ಕೆ ಕೇರಳದಲ್ಲಿ ಚಿತ್ರವನ್ನು ಬ್ಯಾನ್ ಮಾಡಲಾಗುತ್ತಿದೆ ಎಂದು ವರದಿಯಾಗಿದೆ.

ಅವತಾರ್‌ ತೆರೆ ಕಂಡು 13 ವರ್ಷಗಳ ಬಳಿಕ ಅವತಾ‌ರ್‌- 2 ಸಿನಿಮಾ ಬಂದಿದೆ. ಇದೀಗ ಕೇರಳದಲ್ಲಿ ಚಿತ್ರವನ್ನು ಬ್ಯಾನ್ ಮಾಡಲಾಗುತ್ತಿದೆ ಎಂದು ವರದಿ ಆಗಿದೆ. ಕೇರಳದ ಥಿಯೇಟರ್ ಮಾಲೀಕರು ಅವತಾರ್ 2 ಅನ್ನು ಬ್ಯಾನ್ ಮಾಡಿದ್ದಾರೆ. ಬಿಡುಗಡೆಯಾಗುವ ಮೊದಲ ವಾರದಲ್ಲಿ ಥಿಯೇಟರ್ ವ್ಯವಹಾರದ ಒಟ್ಟು ನಿವ್ವಳ ಆದಾಯದ ಶೇಕಡಾ 60 ಪಾಲಿಗೆ ವಿತರಕರು ಬೇಡಿಕೆ ಮಂಡಿಸಿದ್ದರಿಂದ FEUOK (ಫಿಲ್ಮ್ ಎಕ್ಸಿಬಿಟರ್ಸ್ ಯುನೈಟೆಡ್ ಆರ್ಗನೈಸೇಷನ್‌ ಆಫ್ ಕೇರಳ) ಈ ನಿರ್ಧಾರವನ್ನು ತೆಗೆದುಕೊಂಡಿದೆ. ಅದರೂ ಕೂಡ ಪ್ರದರ್ಶಕರು 55% ಪಾಲನ್ನು ನೀಡುತ್ತೇವೆ ಎಂದರೂ ಸಹ 60% ರಷ್ಟು ಪಾಲನ್ನು ವಿತರಕರು ಡಿಮ್ಯಾಂಡ್‌ ಮಾಡುತ್ತಿದ್ದಾರೆ.

ಪ್ರದರ್ಶಕರು ಸಾಮಾನ್ಯವಾಗಿ 50% ಪಾಲನ್ನು ನೀಡುತ್ತಿದ್ದರು. 60% ಪಾಲಿಗೆ ವಿತರಕರು ಒತ್ತಾಯಿಸಿದ್ದರಿಂದ ಸಿನಿಮಾ ಪ್ರದರ್ಶಿಸುವುದಿಲ್ಲ ಎಂದು ನಿರ್ಧರಿಸಲಾಗಿದೆ. FEUOKನಿಂದ ನಿಯಂತ್ರಿಸಲ್ಪಡುವ ಸುಮಾರು 400 ಚಿತ್ರಮಂದಿರಗಳು ಅವತಾರ್: ದಿ ವೇ ಆಫ್ ವಾಟರ್ ಸಿನಿಮಾವನ್ನು ನಿರ್ಬಂಧಿಸಿವೆ. ಅದೇನೇ ಇದ್ದರೂ, ವಿತರಕರು ಮತ್ತು ಪ್ರದರ್ಶಕರಿಬ್ಬರ ನಡುವೆ ಸಂಘರ್ಷ ಉಂಟಾಗಿದ್ದು, ಅಂತಿಮವಾಗಿ ಈ ವಿಷಯವು ಬಗೆಹರಿಯುತ್ತದೆ ಎಂಬ ಆಶಯದಲ್ಲಿದ್ದಾರೆ ಸಿನಿಪ್ರೇಮಿಗಳು.

ಇದನ್ನೂ ಓದಿ | Avatar: The Way of Water | ಅವತಾ‌ರ್‌- 2 ಟಿಕೆಟ್‌ ಭಾರಿ ದುಬಾರಿ: 1650 ರೂ. ದಾಟಾಯ್ತು, ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌!

ಈ ಬಗ್ಗೆ FEUOK ಅಧ್ಯಕ್ಷ ಕೆ ವಿಜಯಕುಮಾರ್ ಮಾತನಾಡಿ, ʻʻಸಿನಿಮಾವನ್ನು ಅಧಿಕೃತವಾಗಿ ಇಲ್ಲಿ (ಕೇರಳ) ನಿಷೇಧಿಸಲಾಗಿಲ್ಲ. ಆದರೆ, ನಾವು ಅವರ ನಿಯಮಗಳು ಮತ್ತು ಷರತ್ತುಗಳನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಅವರು ಕೇರಳದ ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳಿಂದ ಅಸಾಮಾನ್ಯ ಪಾಲನ್ನು ಕೇಳುತ್ತಿದ್ದಾರೆ. ಅದನ್ನು ನಾವು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ನಾವು ಯಾವುದೇ ಚಿತ್ರಗಳನ್ನು ಬ್ಯಾನ್ ಮಾಡಲು ಹೋಗುವುದಿಲ್ಲ. ಆದರೆ, ನಾವು ಅವತಾರ್-2 ಅನ್ನು ಕೇರಳದಲ್ಲಿ ಬಿಡುಗಡೆ ಮಾಡಲು ಹೋಗುತ್ತಿಲ್ಲ. ನಾವು ಅವರ ಕಡೆಯಿಂದ ಮಾತುಕತೆಗಳನ್ನು ನಿರೀಕ್ಷಿಸುತ್ತಿದ್ದೇವೆʼʼ ಎಂದು ಮಾಧ್ಯಮದವರೊಂದಿಗೆ ಹೇಳಿಕೆ ನೀಡಿದ್ದಾರೆ.

‘ಅವತಾರ್‌-1’ ಬಾಕ್ಸ್ ಆಫೀಸ್​ನಲ್ಲಿ ಹೊಸ ದಾಖಲೆ ಸೃಷ್ಟಿಸಿತ್ತು. ಆಗಿನ ಕಾಲಕ್ಕೆ ₹20 ಸಾವಿರ ಕೋಟಿಗೂ ಹೆಚ್ಚು ಹಣ ಬಾಚಿತ್ತು. ಈ ಪೈಕಿ ಅವತಾರ್-3, 2024ರ ಡಿಸೆಂಬರ್ 20ರಂದು ರಿಲೀಸ್‌ ಆದರೆ, 2026ರ ಡಿಸೆಂಬರ್ 18ಕ್ಕೆ ಅವತಾರ್-4 ಹಾಗೂ 2028ರ ಡಿಸೆಂಬರ್ 22ರಂದು ಅವತಾರ್ ಪಾರ್ಟ್ 5 ರಿಲೀಸ್‌ ಆಗಲಿದೆ.

ಇದನ್ನೂ ಓದಿ | Avatar: The Way of Water | ಅವತಾರ್‌-2 ಸಿನಿಮಾ ಬಗ್ಗೆ ಕನ್ನಡಿಗರ ಆಕ್ರೋಶ: ಶುರುವಾಯ್ತು ಬಾಯ್ಕಾಟ್‌ ಅಭಿಯಾನ!

Exit mobile version