ಬೆಂಗಳೂರು : ಜೇಮ್ಸ್ ಕ್ಯಾಮರೂನ್ ಅವರ ʼಅವತಾರ್: ದಿ ವೇ ಆಫ್ ವಾಟರ್ʼ (Avatar: The Way of Water) ವಾರಾಂತ್ಯದಲ್ಲಿ ಉತ್ತಮ ಗಳಿಕೆ ಕಂಡಿದೆ. ವರದಿ ಪ್ರಕಾರ 12 ದಿನಗಳಲ್ಲಿ ವಿಶ್ವಾದ್ಯಂತ 8,200 ಕೋಟಿ ರೂ. ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿದೆ. ಅವತಾರ್: ದಿ ವೇ ಆಫ್ ವಾಟರ್ ಡಿಸೆಂಬರ್ 16 ರಂದು ತೆರೆ ಕಂಡಿತ್ತು.
ಅಂತಿಮವಾಗಿ ಚಿತ್ರಮಂದಿರಗಳಲ್ಲಿ 12 ದಿನಗಳನ್ನು ಪೂರೈಸಿದೆ. ಟ್ರೇಡ್ ವಿಶ್ಲೇಷಕ ರಮೇಶ್ ಬಾಲಾ ಪ್ರಕಾರ, ʻʻಚಿತ್ರವು ವಿಶ್ವಾದ್ಯಂತ 8,200 ಕೋಟಿ ರೂ ಗಳಿಕೆ ಕಂಡಿದೆ. ಉತ್ತರ ಅಮೇರಿಕಾದಲ್ಲಿ 30ಕೋಟಿ ರೂ., ಅಂತಾರಾಷ್ಟ್ರೀಯ ಮಟ್ಟದಲ್ಲಿ 70 ಕೋಟಿ ರೂ. ಗಳಿಕೆ ಕಂಡಿದೆʼʼಎಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ | Avatar: The Way of Water | ವೀಕೆಂಡ್ನಲ್ಲಿ ಅವತಾರ್-2 ಅತ್ಯಧಿಕ ಕಲೆಕ್ಷನ್!
ಸುಮಾರು 3 ಗಂಟೆ 12 ನಿಮಿಷ 10 ಸೆಕೆಂಡುಗಳಿಗೂ ಹೆಚ್ಚು ಅವಧಿಯನ್ನು ಸಿನಿಮಾ ಹೊಂದಿದೆ. ಚಿತ್ರದಲ್ಲಿ ತಮ್ಮ ಬುಡಕಟ್ಟು ಜನಾಂಗವನ್ನು ಉಳಿಸುವ ಪ್ರಯತ್ನದಲ್ಲಿ ಜೀವದ ಹಂಗು ತೊರೆದು ಹೋರಾಡುವ ಅನ್ಯ ಜೀವಿಗಳ ರೋಚಕ ಯುದ್ಧದ ದೃಶ್ಯಗಳು ನೋಡುಗರನ್ನು ಅಚ್ಚರಿಗೊಳಿಸಿವೆ.
‘ಅವತಾರ್-1’ ಬಾಕ್ಸ್ ಆಫೀಸ್ನಲ್ಲಿ ಹೊಸ ದಾಖಲೆ ಸೃಷ್ಟಿಸಿತ್ತು. ಆಗಿನ ಕಾಲಕ್ಕೆ ₹20 ಸಾವಿರ ಕೋಟಿಗೂ ಹೆಚ್ಚು ಹಣ ಬಾಚಿತ್ತು. ಈ ಪೈಕಿ ಅವತಾರ್-3, 2024ರ ಡಿಸೆಂಬರ್ 20ರಂದು ರಿಲೀಸ್ ಆದರೆ, 2026ರ ಡಿಸೆಂಬರ್ 18ಕ್ಕೆ ಅವತಾರ್-4 ಹಾಗೂ 2028ರ ಡಿಸೆಂಬರ್ 22ರಂದು ಅವತಾರ್ ಪಾರ್ಟ್ 5 ರಿಲೀಸ್ ಆಗಲಿದೆ.
ಇದನ್ನೂ ಓದಿ | Avatar: The Way of Water | ಭಾರತದಲ್ಲಿ 223 ಕೋಟಿ ರೂ. ಗಳಿಸಿದ ಅವತಾರ್-2!