Site icon Vistara News

Avatar: The Way of Water | ಅವತಾರ್ 2 ಅಮೋಘ, ಅತ್ಯದ್ಭುತ! ಹಾಡಿ ಹೊಗಳಿದ ಸಿನಿ ವಿಮರ್ಶಕರು

Avatar The Way of Water

ಬೆಂಗಳೂರು : ಡಿಸೆಂಬರ್‌ 16ರಂದು ಅವತಾರ್‌-2 (Avatar: The Way of Water ) ತೆರೆ ಕಾಣಲಿದೆ. ಲಂಡನ್‌ನಲ್ಲಿ ಆಯ್ದ ಪತ್ರಿಕಾ ಸದಸ್ಯರಿಗೆ ಸಿನಿಮಾ ಪ್ರದರ್ಶನ ಏರ್ಪಡಿಸಲಾಗಿದ್ದು, ಟ್ವೀಟ್‌ ಮೂಲಕ ಸಿನಿಮಾ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ. ಇದೀಗ ಜೇಮ್ಸ್‌ ಕ್ಯಾಮರಾನ್‌ ಕಲ್ಪನೆಯನ್ನು ಮೆಚ್ಚಿ ಹಾಡಿ ಹೊಗಳಿದ್ದಾರೆ.

ಭಾವನಾತ್ಮಕವಾಗಿದೆ ಅವತಾರ್‌-2
ಎರಿಕ್‌ ಡೇವಿಸ್‌ ಟ್ವೀಟ್‌ ಮೂಲಕ ʻʻಈ ಹಿಂದೆ ತೆರೆ ಕಂಡಿದ್ದ ಅವತಾರ್‌ಗಿಂತಲೂ ಅವತಾರ್-2 ಸಿನಿಮಾ ತುಂಬ ಅದ್ಭುತವಾಗಿದೆ ಎಂದು ಹೇಳಲು ಸಂತೋಷವಾಗಿದೆ. ಅವತಾರ್‌ -2 ಉತ್ತಮವಾಗಿಯೂ ಹಾಗೂ ಭಾವನಾತ್ಮಕವಾಗಿದೆ. ಚಲನಚಿತ್ರದ ನಿರ್ಮಾಣ ಮತ್ತು ಕಥೆ ಹೇಳುವ ರೀತಿ ಅಮೋಘʼʼಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ | Avatar: The Way of Water | 2 ಕೋಟಿ ಟಿಕೆಟ್‌ ಸೋಲ್ಡ್‌ ಔಟ್‌: ವಿಶ್ವಾದ್ಯಂತ ಡಿಸೆಂಬರ್ 16ಕ್ಕೆ ತೆರೆಗೆ!

ಜೋಶ್ ಹೊರೊವಿಟ್ಜ್ “ಜೇಮ್ಸ್ ಕ್ಯಾಮರಾನ್ ಮತ್ತೊಮ್ಮೆ ತಮ್ಮನ್ನು ತಾವು ಸಾಬೀತು ಪಡಿಸಿದ್ದಾರೆ. ನಾನು ಸಾವಿರ ಬಾರಿ ಹೇಳಿದ್ದೇನೆ. ಅವರ ಬಗ್ಗೆ ಸಂಶಯವೇ ಬೇಡ ಎಂದು. ಅವತಾರ್: ದಿ ವೇ ಆಫ್ ವಾಟರ್ ಬ್ಲಾಕ್‌ಬಸ್ಟರ್‌ ಆಗುವುದು ಖಂಡಿತ. ಹಾಗೂ ತುಂಬಾ ಭಾವನಾತ್ಮಕವಾಗಿದೆʼʼಎಂದು ಬರೆದುಕೊಂಡಿದ್ದಾರೆ.

ದಿ ವ್ರ್ಯಾಪ್‌ನ ಡ್ರೂ ಟೇಲರ್, ʻʻಅವತಾರ್ 1 ಅನ್ನು ನಾನು ಎರಡು ಬಾರಿ ನೋಡಿದ್ದೇನೆ. ಅದರಲ್ಲಿ ಬಳಸಾದ ಟೆಕ್ನಾಲಜಿ ಹಾಗೂ ಭಾವನಾತ್ಮಕ ಸಸ್ನಿವೇಶ‌ಗಳಿಂದ ನಾನು ಮೂಕಸ್ಮಿತನಾಗಿದ್ದೆ. ಇದೀಗ ಅವತಾರ್‌ 2 ಕೂಡ ಅದನ್ನು ಮೀರಿಸುವಂತಿದೆ. ಪಾತ್ರಗಳು ಅತ್ಯಂತ ಪ್ರಮುಖವಾಗಿವೆ. ಕ್ಯಾಮರಾನ್ ಟಾಪ್ ಫಾರ್ಮ್‌ನಲ್ಲಿದ್ದಾರೆ. ವಿಶೇಷವಾಗಿ ಕ್ಲೈಮ್ಯಾಕ್ಸ್‌ ಉತ್ತಮವಾಗಿದೆʼʼಎಂದು ಬರೆದುಕೊಂಡಿದ್ದಾರೆ.

ಕೊಲೈಡರ್‌ನ ಪೆರ್ರಿ ನೆಮಿರೊಫ್ ʻʻಅವತಾರ್‌ 2 ಸಿನಿಮಾ ಅತ್ಯದ್ಭುತವಾಗಿದೆ. ಜೇಮ್ಸ್ ಕ್ಯಾಮರೂನ್ ಮೇಲೆ ನನಗೆ ನಂಬಿಕೆ ಇತ್ತು. ಪ್ರತಿ ದೃಶ್ಯಗಳು ಮನಸ್ಸಿಗೆ ಮುದ ನೀಡುತ್ತವೆ. ಪ್ರತಿ ಫ್ರೇಮ್‌ನಲ್ಲಿ ಒಂದರಗಿಂತ ಒಂದು ದೃಶ್ಯಗಳು ಬೆರಗುಗೊಳಿಸುತ್ತದೆ” ಎಂದು ಬರೆದುಕೊಂಡಿದ್ದಾರೆ.

ಡಿಸೆಂಬರ್ 16ರಂದು ಅವತಾರ್‌-2 (Avatar: The Way of Water) ತೆರೆಗೆ
ಡಿಸೆಂಬರ್ 16ರಂದು ವಿಶ್ವಾದ್ಯಂತ ಏಕಕಾಲದಲ್ಲಿ 20ಕ್ಕೂ ಹೆಚ್ಚು ಭಾಷೆಗಳಲ್ಲಿ ಅವತಾರ್‌-2 (Avatar: The Way of Water) ತೆರೆ ಕಾಣುತ್ತಿದೆ. ಕನ್ನಡ ಭಾಷೆಯಲ್ಲೂ ಸಿನಿಮಾ ತೆರೆಗೆ ಬರಲಿದೆ. ಇನ್ನೂ ಟಿಕೆಟ್ ದರ 1500 ರೂ. ಅಧಿಕ ಬೆಲೆ ಇದ್ದರೂ ಕೂಡ 2 ಕೋಟಿ ಟಿಕೆಟ್ಸ್ ಅಡ್ವಾನ್ಸ್ ಆಗಿ ಬುಕ್ ಆಗಿರುವುದು ವಿಶೇಷ.

‘ಅವತಾರ್‌’ ಟೈಟಲ್ ಮೂಲಕವೇ ಇಡೀ ಜಗತ್ತಿನ ಗಮನ ಸೆಳೆದಿತ್ತು ಈ ಸಿನಿಮಾ. ಅದರಲ್ಲೂ ಕೋಟಿ ಕೋಟಿ ಭಾರತೀಯರಿಗೆ ‘ಅವತಾರ್‌’ ಎಂಬ ಹೆಸರು ಸಾಕಷ್ಟು ಹತ್ತಿರವಾಗಿತ್ತು. ಅವತಾರ್‌-2 ಟ್ರೈಲರ್‌ ಬಿಡುಗಡೆಗೊಂಡಿದ್ದು ನೋಡುಗರಿಂದ ಮೆಚ್ಚುಗೆ ವ್ಯಕ್ತವಾಗಿತ್ತು. ಜೇಮ್ಸ್‌ ಕ್ಯಾಮರಾನ್‌ ಕಲ್ಪನೆಯನ್ನು ನೋಡುಗರು ಮೆಚ್ಚಿಕೊಂಡಿದ್ದಾರೆ.

ಆಗಿನ ಕಾಲಕ್ಕೆ ₹20 ಸಾವಿರ ಕೋಟಿಗೂ ಹೆಚ್ಚು ಹಣ ಬಾಚಿತ್ತು. ಈ ಪೈಕಿ ಅವತಾರ್-3, 2024ರ ಡಿಸೆಂಬರ್ 20ರಂದು ರಿಲೀಸ್‌ ಆದರೆ, 2026ರ ಡಿಸೆಂಬರ್ 18ಕ್ಕೆ ಅವತಾರ್-4 ಹಾಗೂ 2028ರ ಡಿಸೆಂಬರ್ 22ರಂದು ಅವತಾರ್ ಪಾರ್ಟ್ 5 ರಿಲೀಸ್‌ ಆಗಲಿದೆ.

ಇದನ್ನೂ ಓದಿ | Avatar: The Way of Water | ಕೇರಳದ 400 ಚಿತ್ರಮಂದಿರಗಳಲ್ಲಿ ಅವತಾರ್‌-2 ಬ್ಯಾನ್‌: ಕಾರಣವೇನು?

Exit mobile version