ಬೆಂಗಳೂರು : ಜೇಮ್ಸ್ ಕ್ಯಾಮರಾನ್ ನಿರ್ದೇಶನದ ಬಹು ನಿರೀಕ್ಷಿತ ಅವತಾರ್ ದಿ ವೇ ಆಫ್ ವಾಟರ್ (Avatar: The Way of Water) ಡಿಸೆಂಬರ್ 16ರಂದು ವಿಶ್ವದಾದ್ಯಂತ ಬಿಡುಗಡೆಗೊಂಡಿದೆ. ಸದ್ಯ ಸಿನಿ ರಸಿಕರು ಇದೊಂದು ಸಿನಿಮ್ಯಾಟಿಕ್ ಮಾಸ್ಟರ್‌ಪೀಸ್, ವಿಷ್ಯುವಲ್ ವಂಡರ್ ಎಂದು ಅವತಾರ್ 2 ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಆದರೆ ತೆಲುಗಿನ ನಿರ್ಮಾಪಕ ನಾಗ ವಂಶಿ ಮಾತ್ರ ಅವತಾರ್-2 ಬಗ್ಗೆ ಟೀಕಿಸಿ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಕುರಿತು ಪ್ರತಿಕ್ರಿಯೆ ನೀಡಿರುವ ಅನೇಕ ತೆಲುಗು ಸಿನಿ ಪ್ರೇಮಿಗಳು ನಾಗ ವಂಶಿ ವಿರುದ್ಧ ಕಿಡಿಕಾರಿದ್ದಾರೆ.
ತೆಲುಗು ನಿರ್ಮಾಪಕ ನಾಗ ವಂಶಿ ಟ್ವೀಟ್ ಮಾಡಿ “ಜೇಮ್ಸ್ ಕ್ಯಾಮರಾನ್ ನಮಗೆ ಸಾಗರ ಜೀವಶಾಸ್ತ್ರದ ಸಾಕ್ಷ್ಯಚಿತ್ರವನ್ನು ವೀಕ್ಷಿಸಲು ಆದೇಶಿಸಿದ್ದಾರೆ. 3D ಕಾರಣದಿಂದಾಗಿ, ಇದು “ವಿಷ್ಯುವಲ್ ಸ್ಪೆಕ್ಟಾಕಲ್” ಆಗಿದೆ! “ಮಾಸ್ಟರ್‌ಕ್ರಾಫ್ಟ್” ಮತ್ತು “ಬ್ಲಾಕ್‌ಬಸ್ಟರ್” ಎಂದು ಹೇಳಲು ನಮಗೆ ಅನುಮತಿಸಲಾಗಿದೆʼʼ ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ | Avatar: The Way of Water | ಅವತಾರ್-2 ಬಿಡುಗಡೆಗೆ ಸಿದ್ಧ: ಚಿತ್ರದ ಒಟ್ಟು ಅವಧಿ ಎಷ್ಟು?
ಕೆಲವು ನೆಟ್ಟಿಗರು ನಾಗ ವಂಶಿ ಅವರ ಕಮೆಂಟ್‌ಗಳನ್ನು ದೂರಿದರೆ, ಇನ್ನೂ ಕೆಲವರು ನಾಗ ವಂಶಿ ಅವರನ್ನು ಬೆಂಬಲಿಸುತ್ತಿದ್ದಾರೆ. ನಾಗ ವಂಶಿ ತೆಲುಗು-ತಮಿಳು ದ್ವಿಭಾಷಾ ಚಿತ್ರಗಳನ್ನು ಹೊಂದಿದ್ದು, ಫೆಬ್ರವರಿಯಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ. ಚಿತ್ರದಲ್ಲಿ ಧನುಷ್ ಮತ್ತು ಸಂಯುಕ್ತಾ ಮೆನನ್ ಜೋಡಿಯಾಗಿದ್ದಾರೆ.
ಅವತಾರ್ 2 !
ಸುಮಾರು 3 ಗಂಟೆ 12 ನಿಮಿಷ 10 ಸೆಕೆಂಡುಗಳಿಗೂ ಹೆಚ್ಚು ಅವಧಿಯನ್ನು ಸಿನಿಮಾ ಹೊಂದಿದೆ. ಈ ಚಿತ್ರದ ಎರಡು ಟ್ರೈಲರ್‌ಗಳು ಈಗಾಗಲೇ ಬಿಡುಗಡೆಯಾಗಿವೆ. ಇತ್ತೀಚೆಗೆ ಬಿಡುಗಡೆಯಾದ ಟ್ರೈಲರ್‌ನಲ್ಲಿ, ತಮ್ಮ ಬುಡಕಟ್ಟು ಜನಾಂಗವನ್ನು ಉಳಿಸುವ ಪ್ರಯತ್ನದಲ್ಲಿ ಜೀವ ತೊರೆದು ಹೋರಾಡುವ ಅನ್ಯ ಜೀವಿಗಳ ರೋಚಕ ಯುದ್ಧದ ದೃಶ್ಯಗಳು ನೋಡುಗರನ್ನು ಅಚ್ಚರಿಗೊಳಿಸಿವೆ.
ಇದನ್ನೂ ಓದಿ | Avatar 2 | ಥಿಯೇಟರ್‌ಗೆ ಬರುವ ಮುಂಚೆಯೇ ಆನ್‌ಲೈನ್‌ನಲ್ಲಿ ಅವತಾರ್ 2 ಸಿನಿಮಾ ಸೋರಿಕೆ!