Site icon Vistara News

Avatar: The Way of Water: ಅವತಾರ್-2 ಒಟಿಟಿ ರಿಲೀಸ್‌ ಡೇಟ್‌ ಅನೌನ್ಸ್‌: ಇಲ್ಲಿದೆ ಮಾಹಿತಿ

Avatar The Way of Water OTT Release date Reveal

ಬೆಂಗಳೂರು: ಜೇಮ್ಸ್ ಕ್ಯಾಮರೂನ್ ಅವರ ಅವತಾರ್ ದಿ ವೇ ಆಫ್ ವಾಟರ್ (Avatar: The Way of Water) ಕಳೆದ ವರ್ಷ ಡಿ.22ರಂದು ವಿಶ್ವಾದ್ಯಂತ ಸಿನಿಮಾ ರಿಲೀಸ್ ಆಗಿತ್ತು. ಚಿತ್ರಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು. ಇದೀಗ ಒಟಿಟಿ ಮೂಲಕ ʻಅವತಾರ್ 2ʼ ಚಿತ್ರ ಲಗ್ಗೆ ಇಡುತ್ತಿದೆ. ಡಿಜಿಟಲ್ ಬಿಡುಗಡೆಯೊಂದಿಗೆ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಿಗೆ ಆಗಮಿಸುತ್ತಿದೆ. ಈ ಬಗ್ಗೆ ಚಿತ್ರದ ಅಧಿಕೃತ ಇನ್‌ಸ್ಟಾ ಖಾತೆಯಲ್ಲಿ ಒಟಿಟಿ ರಿಲೀಸ್‌ ಡೇಟ್‌ ಅನೌನ್ಸ್‌ ಮಾಡಿದೆ ಚಿತ್ರತಂಡ. ಇದೇ ಮಾರ್ಚ್ 28ರಂದು ವಿವಿಧ ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ (Ott) ತೆರೆ ಕಾಣುತ್ತಿದೆ.

ಪ್ರೈಮ್ ವಿಡಿಯೊ, ವುಡು ಮತ್ತು ಮೂವೀಸ್ ಎನಿವೇರ್‌ನಲ್ಲಿ ಸಿನಿಮಾ ಲಭ್ಯವಿದೆ ಎಂದು ವರದಿಯಾಗಿದೆ. ಡಿಜಿಟಲ್ ಆವೃತ್ತಿಗಳು ಡಾಲ್ಬಿ ಅಟ್ಮಾಸ್ ಆಡಿಯೊದೊಂದಿಗೆ 4K ಅಲ್ಟ್ರಾ HD ಗುಣಮಟ್ಟದಲ್ಲಿ ಲಭ್ಯವಿರಲಿದೆ. ಜೇಮ್ಸ್ ಕ್ಯಾಮರೂನ್‌ ಅವರು ಸಿನಿಮಾ ಮಾಡುವ ಶೈಲಿಯೇ ಅಚ್ಚರಿ ಮೂಡಿಸುವಂಥದ್ದು. ತೆರೆ ಹಿಂದೆ ಅವರ ಕಾರ್ಯವೈಖರಿ ಹೇಗಿರುತ್ತದೆ ಎಂಬುದನ್ನು ತಿಳಿಯಲು ಫ್ಯಾನ್ಸ್ ಕಾದಿರುತ್ತಾರೆ. ಒಟಿಟಿಯಲ್ಲಿ `ಅವತಾರ್ 2′ ಸಿನಿಮಾ ವೀಕ್ಷಿಸುವುದರ ಜತೆಗೆ ಮೇಕಿಂಗ್ ದೃಶ್ಯಗಳನ್ನೂ ಪ್ರೇಕ್ಷಕರು ನೋಡಬಹುದಾಗಿದೆ.

ಇದನ್ನೂ ಓದಿ: Avatar 3 | ಅವತಾರ್-2 ಸಕ್ಸೆಸ್‌ ಬೆನ್ನಲ್ಲೇ ಅವತಾರ್‌-3 ಸೀಕ್ವೆಲ್ ಮಾಡಲು ಮುಂದಾದ ಜೇಮ್ಸ್ ಕ್ಯಾಮರೂನ್!

ಅವತಾರ್‌-3 ಸೀಕ್ವೆಲ್

2022ರಲ್ಲಿ ತೆರೆ ಕಂಡ ಜೇಮ್ಸ್ ಕ್ಯಾಮರೂನ್ ಅವರ ʼಅವತಾರ್: ದಿ ವೇ ಆಫ್ ವಾಟರ್ʼ (Avatar: The Way of Water) ಬಾಕ್ಸ್‌ ಆಫೀಸ್‌ನಲ್ಲಿ ಭಾರಿ ಕಲೆಕ್ಷನ್‌ ಮಾಡಿದೆ. ಇದರ ಬೆನ್ನಲ್ಲೇ ತಯಾರಕರು ಜನಪ್ರಿಯ ಫ್ರ್ಯಾಂಚೈಸ್‌ನಲ್ಲಿ ಅವತಾರ್‌-3 ಈಗಾಗಲೇ ಕೆಲಸ ಆರಂಭಗೊಂಡಿದೆ ಎಂದು ಖಚಿತಪಡಿಸಿದ್ದಾರೆ. ಅವತಾರ್ 2, 13 ವರ್ಷಗಳ ನಂತರ 2022ರಲ್ಲಿ ತೆರೆ ಕಂಡಿದೆ.ಈಗ, ಅವತಾರ್ 3 (Avatar 3) ಮತ್ತು 4 ರ ಕೆಲಸ ಈಗಾಗಲೇ ಪ್ರಾರಂಭವಾಗಿದೆ ಎಂದು ನಿರ್ದೇಶಕರು ಮಾಹಿತಿ ಹಂಚಿಕೊಂಡಿದ್ದಾರೆ. ಅವತಾರ್‌-2 ಕಲೆಕ್ಷನ್​ನಿಂದಾಗಿ ಚಿತ್ರತಂಡಕ್ಕೆ ಭರವಸೆ ಮೂಡಿದೆ. ಹಾಗಾಗಿ ‘ಅವತಾರ್​’ ಸಿನಿಮಾದ 3, 4 ಮತ್ತು 5ನೇ ಸೀಕ್ವೆಲ್​ಗಳನ್ನು ಮಾಡಲು ಜೇಮ್ಸ್ ಕ್ಯಾಮರೂನ್ ಮುಂದೆ ಬಂದಿದ್ದಾರೆ. ಜೇಮ್ಸ್ ಕ್ಯಾಮರೂನ್ ಅವರ ಅವತಾರ್‌-1, 2009ರಲ್ಲಿ ಬಿಡುಗಡೆಯಾಗಿತ್ತು. ಆಗಿನ ಕಾಲಕ್ಕೆ ₹20 ಸಾವಿರ ಕೋಟಿಗೂ ಹೆಚ್ಚು ಹಣ ಬಾಚಿತ್ತು. ಈ ಪೈಕಿ ಅವತಾರ್-3, 2024ರ ಡಿಸೆಂಬರ್ 20ರಂದು ರಿಲೀಸ್‌ ಆದರೆ, 2026ರ ಡಿಸೆಂಬರ್ 18ಕ್ಕೆ ಅವತಾರ್-4 ಹಾಗೂ 2028ರ ಡಿಸೆಂಬರ್ 22ರಂದು ಅವತಾರ್ ಪಾರ್ಟ್ 5 ರಿಲೀಸ್‌ ಆಗಲಿದೆ.

Exit mobile version