ಬೆಂಗಳೂರು : ಹೊಸ ವರ್ಷದ ದಿನ ಅಪಘಾತಕ್ಕೀಡಾಗಿ ಆಸ್ಪತ್ರೆ ಸೇರಿರುವ ‘ಅವೆಂಜರ್ಸ್’ ಖ್ಯಾತಿಯ ನಟ ಜರ್ಮಿ ರೆನ್ನರ್ (Jeremy Renner) ಗಂಭೀರ ವಾಗಿ ಗಾಯಗೊಂಡಿದ್ದರು. ಇದೀಗ ಆಸ್ಪತ್ರೆಯಲ್ಲಿರುವ ಫೋಟೊವನ್ನು ಹಂಚಿಕೊಂಡಿದ್ದು 30 ಮೂಳೆಗಳನ್ನು ಮುರಿದಿರುವುದಾಗಿ ಬಹಿರಂಗಪಡಿಸಿದ್ದಾರೆ. ಮನೆಯಲ್ಲಿ ಲೆಗ್ ಸ್ಟ್ರೆಚ್ ಮಾಡುತ್ತಿರುವ ಚಿತ್ರವನ್ನು ನಟ ಹಂಚಿಕೊಂಡಿದ್ದಾರೆ.
ಪೋಸ್ಟ್ ನಲ್ಲಿ “ಮಾರ್ನಿಂಗ್ ಫೋಟೊಗಳು, ರೆಸಲ್ಯೂಶನ್‌ಗಳ ಈ ನಿರ್ದಿಷ್ಟ ಹೊಸ ವರ್ಷವನ್ನು ಬದಲಾಯಿಸಿದವು. ಪ್ರೀತಿ ಮತ್ತು ಆಶೀರ್ವಾದಕ್ಕೆ, ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದʼʼಎಂದು ಬರೆದುಕೊಂಡಿದ್ದಾರೆ.
30ಕ್ಕೂ ಹೆಚ್ಚು ಮೂಳೆಗಳನ್ನು ಮುರಿದ ನಂತರ ಅವರು ಹೇಗೆ ವ್ಯವಹರಿಸುತ್ತಾರೆ ಎಂಬುದನ್ನು ರೆನ್ನರ್ ಬಹಿರಂಗಪಡಿಸಿದ್ದಾರೆ. “ನನಗೆ ಮತ್ತು ನನ್ನ ಕುಟುಂಬಕ್ಕೆ ನಾನು ಪ್ರತಿಯೊಬ್ಬರಿಗೂ ಧನ್ಯವಾದ ಹೇಳಲು ಬಯಸುತ್ತೇನೆ ಈ 30 ಪ್ಲಸ್ ಮುರಿದ ಮೂಳೆಗಳು ಕುಟುಂಬ ಮತ್ತು ಸ್ನೇಹಿತರೊಂದಿಗಿನ ಪ್ರೀತಿ ಮತ್ತು ಬಾಂಧವ್ಯವು ಹೆಚ್ಚಾಗುತ್ತಿದ್ದಂತೆ ಸುಧಾರಿಸುತ್ತದೆ, ಬಲಗೊಳ್ಳುತ್ತದೆʼʼ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Jeremy Renner | ಅಪಘಾತದ ನಂತರ ಮೊದಲ ಫೋಟೊ ಹಂಚಿಕೊಂಡ ಅವೆಂಜರ್ಸ್ ನಟ ಜರ್ಮಿ
ಜರ್ಮಿ ಅವರಿಗೆ ಅಪಘಾತ ಆಗಿರುವ ವಿಚಾರ ಹೊರಬೀಳುತ್ತಿದ್ದಂತೆಯೇ ಅವರ ಅಭಿಮಾನಿಗಳು ಬೇಸರಗೊಂಡಿದ್ದರು. ಮೆಚ್ಚಿನ ನಟನಿಗಾಗಿ ದೇವರ ಮೊರೆ ಹೋಗಿದ್ದರು. ಆದಷ್ಟು ಬೇಗ ಗುಣಮುಖರಾಗಿ ಬನ್ನಿ ಎಂದು ನೂರಾರು ಪೋಸ್ಟ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಅಭಿಮಾನಿಗಳ ಹಾರೈಕೆಯನ್ನು ಕಂಡಿರುವ ನಟ, “ನಿಮ್ಮೆಲ್ಲರ ಪ್ರೀತಿಯ ಹಾರೈಕೆಗೆ ನನ್ನ ಧನ್ಯವಾದಗಳು. ಈಗ ನನಗೆ ಟೈಪ್ ಮಾಡುವುದಕ್ಕೂ ಕಷ್ಟವಾಗುತ್ತಿದೆ. ಆದರೆ ನಿಮ್ಮೆಲ್ಲರಿಗೂ ನನ್ನ ಪ್ರೀತಿಯನ್ನು ಹಂಚುತ್ತಿದ್ದೇನೆ” ಎಂದು ಬರೆದುಕೊಂಡಿದ್ದಾರೆ.
ಹೊಸ ವರ್ಷದ ಪ್ರಯುಕ್ತ ನವೆಡಾದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗುವುದಕ್ಕೆಂದು ಜರ್ಮಿ ತೆರಳುತ್ತಿದ್ದಾಗ ಅಪಘಾತಕ್ಕೀಡಾಗಿದ್ದರು. ಹಿಮಾವೃತವಾಗಿದ್ದ ರಸ್ತೆಯಲ್ಲಿ ಅಪಘಾತ ಸಂಭವಿಸಿದ್ದು, ಅವರನ್ನು ಏರ್‌ಲಿಫ್ಟ್ ಮಾಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಇದನ್ನೂ ಓದಿ: Pathaan Film | ಜರ್ಮನಿಯಲ್ಲಿ ಪಠಾಣ್ ಸಿನಿಮಾಗೆ ಸಖತ್ ರೆಸ್ಪಾನ್ಸ್: ಬಹುತೇಕ ನಗರಗಳಲ್ಲಿ ಟಿಕೆಟ್‌ಗಳು ಸೋಲ್ಡ್ ಔಟ್!
ಜರ್ಮಿ ಅವರು 2012ರಲ್ಲಿ ಬಿಡುಗಡೆಯಾದ ಅವೆಂಜರ್ಸ್ ಸಿನಿಮಾದಲ್ಲಿ Hawkeye ಪಾತ್ರದಲ್ಲಿ ಕಾಣಿಸಿಕೊಂಡು ಮೆಚ್ಚುಗೆ ಪಡೆದಿದ್ದರು. ಕ್ಯಾಪ್ಟನ್ ಅಮೆರಿಕ ಸೇರಿ ಹಲವಾರು ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಹರ್ಟ್ ಲಾಕರ್ ಸಿನಿಮಾದಲ್ಲಿ ಇವರ ಅಭಿನಯಕ್ಕೆ ಆಸ್ಕರ್ ಪ್ರಶಸ್ತಿಯೂ ಲಭಿಸಿದೆ.