ಬೆಂಗಳೂರು: ಕಿಯಾರಾ ಆಡ್ವಾಣಿ, ಭೂಮಿ ಪೆಡ್ನೇಕರ್, ರಾಣಿ ಮುಖರ್ಜಿ, ಅರ್ಜುನ್ ಕಪೂರ್, ಕಾರ್ತಿಕ್ ಆರ್ಯನ್ನಿಂದ ಹಿಡಿದು ಜಾಹ್ನವಿ ಕಪೂರ್, ಶೆಹನಾಜ್ ಗಿಲ್, ಬಾಬಿಲ್ ಖಾನ್ ಮತ್ತು ಪೂಜಾ ಹೆಗ್ಡೆಯವರೆಗೆ ಭಾರತೀಯ ಚಲನಚಿತ್ರ (B-Town) ಮತ್ತು ದೂರದರ್ಶನ ಉದ್ಯಮದ ಗಣ್ಯರು ಮುಂಬೈನಲ್ಲಿ ಇತ್ತೀಚೆಗೆ ನಡೆದ ಪ್ರಶಸ್ತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ರೆಡ್ ಕಾರ್ಪೆರ್ಟ್ನಲ್ಲಿ ತಾರೆಯರು ಹಾಟ್ ಆಗಿ ಮಿಂಚಿದ್ದಾರೆ. ಈ ಸಮಾರಂಭದಲ್ಲಿ ದಕ್ಷಿಣ ಚಿತ್ರರಂಗದ ನಟರು ಕೂಡ ಭಾಗವಹಿಸಿದ್ದರು.
ಕಾರ್ಯಕ್ರಮಕ್ಕೆ ಹಳದಿ ಬಟ್ಟೆಯನ್ನು ಧರಿಸಿದ್ದ ಜಾಹ್ನವಿ ಕಪೂರ್ ಅವರು ರೆಡ್ ಕಾರ್ಪೆಟ್ ಮೇಲೆ ನಡೆಯುತ್ತಿದ್ದಾಗ ಮುಗ್ಗರಿಸಿ ಬಿದ್ದಿದ್ದಾರೆ. ಮುಜುಗರದಿಂದ ತನ್ನ ನಾಲಗೆಯನ್ನು ಹೊರಕ್ಕೆ ಚಾಚಿ, ಪಾಪರಾಜಿ (ಫೋಟೊಗ್ರಾಫರ್ಗಳು) ಎಚ್ಚರಿಕೆಯಿಂದ ಇರಿ ಎಂದು ಹೇಳಿದ್ದಾರೆ.
ಇದನ್ನೂ ಓದಿ: Janhvi Kapoor Ramp Walk: ಬೆಂಗಳೂರು ಫ್ಯಾಷನ್ ಶೋನಲ್ಲಿ ಬಾಲಿವುಡ್ ನಟಿ ಜಾನ್ವಿ ಕಪೂರ್ ಸೆಲೆಬ್ರೆಟಿ ವಾಕ್
ಮುಗ್ಗರಿಸಿದ ಜಾಹ್ನವಿ
ಆಯುಷ್ಮಾನ್ ಖುರಾನಾ, ಅಡವಿ ಶೇಷ್, ಮಧು, ಶ್ರಿಯಾ ಸರಣ್ ಮತ್ತು ಸಂಗೀತ ಸಂಯೋಜಕ ದೇವಿಶ್ರೀ ಪ್ರಸಾದ್ ಮುಂತಾದ ನಟರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಕಾಜೋಲ್, ಬೋನಿ ಕಪೂರ್, ರಾಕುಲ್ ಪ್ರೀತ್ ಸಿಂಗ್, ರೋಹಿತ್ ಸರಾಫ್ ಮತ್ತು ರಾಶಿ ಖನ್ನಾ ಕೂಡ ಸಮಾರಂಭದಲ್ಲಿ ಕಾಣಿಸಿಕೊಂಡಿದ್ದಾರೆ.