Site icon Vistara News

South Cinema | ದಕ್ಷಿಣ ಭಾರತದ ಸಿನಿ ರಂಗಕ್ಕೆ ಬಾಲಿವುಡ್‌ ತಾರೆಯರ ಎಂಟ್ರಿ: ಸಿನಿಮಾಗಳು ಬಿಡುಗಡೆಗೆ ಸಜ್ಜು

South Cinema

ಬೆಂಗಳೂರು: ದಕ್ಷಿಣ ಭಾರತದ ಸಿನಿಮಾ (south Cinema) ಚಿತ್ರರಂಗಕ್ಕೆ ಕೆಲವು ವರ್ಷಗಳಿಂದ ಮುಟ್ಟಿದ್ದೆಲ್ಲ ಚಿನ್ನವಾಗುತ್ತಿದೆ. ಸಾಲು ಸಾಲು ಹಿಟ್‌ ಸಿನಿಮಾಗಳನ್ನು ನೀಡಿ ಪ್ಯಾನ್‌ ಇಂಡಿಯಾದಲ್ಲೂ ಹವಾ ಸೃಷ್ಟಿ ಮಾಡಿದೆ. ಬಾಹುಬಲಿ, ಪುಷ್ಪಾ ದಿ ರೈಸ್‌, ಕೆಜಿಎಫ್‌-2 ಸಿನಿಮಾಗಳು ಬಾಕ್ಸ್‌ ಆಫೀಸ್‌ನಲ್ಲಿ ಯಶಸ್ಸು ಪಡೆದುಕೊಂಡಿದೆ. ಇದೀಗ ಹಿಂದಿ ಚಿತ್ರರಂಗದ ಕೆಲವು ಬಿಗ್‌ ಸ್ಟಾರ್ಸ್‌ಗಳು ದಕ್ಷಿಣ ಚಿತ್ರರಂಗಕ್ಕೆ ಮುಖ ಮಾಡಿದ್ದಾರೆ.

ಐಶ್ವರ್ಯಾ ರೈ
ಮಣಿರತ್ನಂ ನಿರ್ದೆಶನದ ಬಹು ನಿರೀಕ್ಷೆಯ ಐತಿಹಾಸಿಕ ಚಿತ್ರ ಪೊನ್ನಿಯನ್ ಸೆಲ್ವನ್ ಭಾಗ-1 (Ponniyin Selvan: I) ಸಿನಿಮಾದಲ್ಲಿ ಬಹಳ ಸಮಯದ ನಂತರ ಬೆಳ್ಳಿ ಪರದೆಯ ಮೇಲೆ ಐಶ್ವರ್ಯಾ ರೈ ಕಾಣಿಸಿಕೊಳ್ಳಲಿದ್ದಾರೆ. ಐತಿಹಾಸಿಕ ಕಥಾ ಹಂದರವುಳ್ಳ ಈ ಸಿನಿಮಾ ಪ್ರಾಚೀನ ತಮಿಳು ರಾಜಮನೆತನ ಚೋಳರಾಜರ ಕುರಿತಾಗಿನ ಕತೆಯನ್ನು ಹೊಂದಿದೆ. ಚಿತ್ರದಲ್ಲಿ ನಟಿ ಐಶ್ವರ್ಯ ರೈ ಪಳುವೂರಿನ ರಾಣಿ ನಂದಿನಿಯಾಗಿ ಕಣ್ಮನ ಸೆಳೆದಿದ್ದಾರೆ. ಇನ್ನು ಪೊನ್ನಿಯನ್ ಸೆಲ್ವನ್ ಸಿನಿಮಾ ಮಾಡಬೇಕೆಂಬುದು ತಮಿಳುನಾಡಿನಲ್ಲಿ ಎಂಜಿಆರ್ ಕಾಲದಿಂದಲೂ ಕನಸಾಗಿತ್ತು. ಮಣಿರತ್ನಂ ಈಗ ಇದನ್ನು ನನಸಾಗಿಸಿದ್ದಾರೆ. ಚಿತ್ರದ ಮೊದಲ ಭಾಗ ಸೆಪ್ಟೆಂಬರ್ 30ರಂದು ಪಂಚ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಐಶ್ವರ್ಯಾ ರೈ ಬಚ್ಚನ್​, ವಿಕ್ರಮ್​, ತ್ರಿಷಾ, ಜಯಂ ರವಿ, ಕಾರ್ತಿ, ಪ್ರಕಾಶ್​ ರಾಜ್​ ಸೇರಿದಂತೆ ಅನೇಕರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ | Kajol | ಚಿತ್ರರಂಗದಲ್ಲಿ 30 ವರ್ಷ ಪೂರೈಸಿದ ನಟಿ ಕಾಜೋಲ್‌: ಅಜಯ್‌ ದೇವಗನ್‌ ಹೇಳಿದ್ದೇನು?

ಕಿಯಾರಾ ಆಡ್ವಾಣಿ
ತೆಲುಗು ಸ್ಟಾರ್‌ ನಟ ರಾಮ್ ಚರಣ್ ಜತೆ ಕಿಯಾರಾ ಆಡ್ವಾಣಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಶಂಕರ್‌ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಸಂದರ್ಶನವೊಂದರಲ್ಲಿ, ರಾಮ್ ಚರಣ್ “ಸರ್ಕಾರೋಡುʼ ಸಿನಿಮಾ ಬಗ್ಗೆ ಹಂಚಿಕೊಂಡಿದ್ದಾರೆ. ಸರ್ಕಾರೋಡು (Sarkarodu) ಅನೇಕ ಪ್ರಾಮಾಣಿಕ ಅಧಿಕಾರಿಗಳ ಜೀವನದಿಂದ ಪ್ರೇರಿತವಾಗಿದೆ ಎಂದವರು ಬಹಿರಂಗಪಡಿಸಿದ್ದಾರೆ. ಈ ಸಿನಿಮಾ 2023ರಲ್ಲಿ ತೆರೆಗೆ ಬರುವ ನಿರೀಕ್ಷೆ ಇದೆ.

ದೀಪಿಕಾ ಪಡುಕೋಣೆ
ಪ್ರಾಜೆಕ್ಟ್ ಕೆ (K) ಎಂಬುದು ಪ್ರಭಾಸ್ ಅಭಿನಯದ ನಾಗ್ ಅಶ್ವಿನ್ ನಿರ್ದೇಶನದ ಇತ್ತೀಚಿನ ಬೃಹತ್ ವೈಜ್ಞಾನಿಕ ಕಾಲ್ಪನಿಕ ಸಿನಿಮಾ. ನಾಯಕಿಯಾಗಿ ದೀಪಿಕಾ ಪಡುಕೋಣೆ ನಟಿಸುತ್ತಿದ್ದಾರೆ. ಮತ್ತೊಂದು ಪ್ರಮುಖ ಪಾತ್ರದಲ್ಲಿ ಬಿಗ್ ಬಿ ಅಮಿತಾಭ್ ‌ಬಚ್ಚನ್‌ ನಟಿಸುತ್ತಿದ್ದಾರೆ. ಚಿತ್ರ ಈಗಾಗಲೇ ಶೇ. 55ರಷ್ಟು ಚಿತ್ರೀಕರಣವನ್ನು ಪೂರ್ಣಗೊಳಿಸಿದೆ. ಇತ್ತೀಚೆಗೆ ಮತ್ತೊಂದು ಶೆಡ್ಯೂಲ್ ಶುರುವಾಗಿದೆ. ಈ ಸಿನಿಮಾ ಭಾರತೀಯ ಮಹಾಕಾವ್ಯ ಮಹಾಭಾರತದಿಂದ ಪ್ರೇರಿತವಾಗಿದ್ದು, ಮೂರನೇ ಮಹಾಯುದ್ಧದ ಹಿನ್ನೆಲೆಯಲ್ಲಿ ಈ ಸಿನಿಮಾ ಮಾಡಲಾಗಿದೆ ಎನ್ನಲಾಗುತ್ತಿದೆ.

ಸಲ್ಮಾನ್‌ ಖಾನ್‌
ತೆಲುಗು ಚಿತ್ರ ಗಾಡ್‌ ಫಾದರ್‌ನಲ್ಲಿ (GodFather) ಬಾಲಿವುಡ್ ಸ್ಟಾರ್‌ ಸಲ್ಮಾನ್ ಖಾನ್ ಮತ್ತು ಮೆಗಾಸ್ಟಾರ್ ಚಿರಂಜೀವಿ ಮೊದಲ ಬಾರಿಗೆ ಒಟ್ಟಿಗೇ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಅಂದಹಾಗೆ ಗಾಡ್‌ಫಾದರ್ ಸಿನಿಮಾದಲ್ಲಿ ಇಬ್ಬರೂ ಒಂದೇ ಫ್ರೇಮ್‌ನಲ್ಲಿ ಡ್ಯಾನ್ಸ್ ಮಾಡುತ್ತಿರುವ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಚಿರಂಜೀವಿ ಅವರು ಇಬ್ಬರ ಪೋಟೋವನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿ ಸಲ್ಲು ಜತೆ ಹೆಜ್ಜೆ ಹಾಕಲು ರೆಡಿ ಎಂದು ಬರೆದುಕೊಂಡಿದ್ದರು. ಈ ಡ್ಯಾನ್ಸ್‌ ಅನ್ನು ಪ್ರಭುದೇವ ನಿರ್ದೇಶನ ಮಾಡುತ್ತಿದ್ದಾರೆ ಎಂದು ನಟ ಚಿರಂಜೀವಿ ಬಹಿರಂಗಪಡಿಸಿದ್ದರು. ಮೋಹನ್‌ ರಾಜ್‌ ನಿರ್ದೇಶನದ ಈ ಚಿತ್ರ ಮೋಹನ್‌ಲಾಲ್‌ ಅವರ ನಟನೆಯ ಮಲಯಾಳಂ “ಲೂಸಿಫರ್ʼ ಚಿತ್ರದ ತೆಲುಗು ರಿಮೇಕ್ ಆಗಿದೆ.

ಇದನ್ನೂ ಓದಿ | Sukesh Case | ‘ರಕ್ಕಮ್ಮ’ ಜಾಕ್ವೆಲಿನ್, ನೋರಾ ಬಳಿಕ ಇನ್ನೂ 4 ನಟಿಯರ ವಿಚಾರಣೆ ಸಾಧ್ಯತೆ

Exit mobile version