ಹೈದರಾಬಾದ್: ಬಾಹುಬಲಿ ಸಿನಿಮಾ ಕಟ್ಟಪ್ಪ (Baahubali Actor Sathyaraj) ಪಾತ್ರದ ಮೂಲಕ ಹೆಸರುವಾಸಿಯಾಗಿರುವ ತಮಿಳು ಮತ್ತು ತೆಲುಗು ನಟ ಸತ್ಯರಾಜ್ ಅವರ ತಾಯಿ ನಾಥಂಬಳ್ (Nathambal) ನಿಧನರಾಗಿದ್ದಾರೆ. ಅವರಿಗೆ 94 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ಅವರು ಬಳಲುತ್ತಿದ್ದರು. ಹುಟ್ಟೂರಾದ ಕೊಯಮತ್ತೂರಿನಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ವರದಿಯಾಗಿದೆ.
ಸತ್ಯರಾಜ್ ಅವರ ತಾಯಿ ನಿಧನಕ್ಕೆ ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಸಂತಾಪ ವ್ಯಕ್ತಪಡಿಸುತ್ತಿದ್ದಾರೆ. ಕಮಲ್ ಹಾಸನ್, ಉದಯನಿಧಿ ಸ್ಟಾಲಿನ್ ಮತ್ತು ಇತರರು ಸತ್ಯರಾಜ್ ಅವರ ತಾಯಿಯ ನಿಧನದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಕಮಲ್ ಹಾಸನ್ ಮತ್ತು ಸತ್ಯರಾಜ್ ತುಂಬಾ ಆತ್ಮೀಯ ಬಾಂಧವ್ಯವನ್ನು ಹಂಚಿಕೊಂಡಿದ್ದಾರೆ. ನಾಥಂಬಳ್ ಅವರಿಗೆ ಇಬ್ಬರು ಹೆಣ್ಣು ಮಕ್ಕಳು ಮತ್ತು ಒಬ್ಬ ಗಂಡು ಮಗನಿದ್ದಾನೆ. ತಾಯಿ ನಿಧನರಾದಾಗ ಸತ್ಯರಾಜ್ ಅವರು ಹೈದರಾಬಾದ್ ನಲ್ಲಿ ಶೂಟಿಂಗ್ ನಲ್ಲಿದ್ದರು. ಸುದ್ದಿ ತಿಳಿಯುತ್ತಿದ್ದಂತೆಯೇ ಶೂಟಿಂಗ್ ನಿಲ್ಲಿಸಿ ತೆರಳಿದ್ದಾರೆ.
ಇದನ್ನೂ ಓದಿ: Ambati Rayudu: ಕೆರಿಬಿಯನ್ ಪ್ರೀಮಿಯರ್ ಲೀಗ್ ಆಡಲು ಸಜ್ಜಾದ ಅಂಬಾಟಿ ರಾಯುಡು
ಸತ್ಯರಾಜ್ ಅವರು 240 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಪ್ರಭಾಸ್ ಮತ್ತು ಎಸ್.ಎಸ್ ರಾಜಮೌಳಿ ಅವರ ಬಾಹುಬಲಿ ಸಿನಿಮಾದ ಕಟ್ಟಪ್ಪ ಪಾತ್ರಕ್ಕಾಗಿ ಸತ್ಯರಾಜ್ ವಿಶ್ವಾದ್ಯಂತ ಖ್ಯಾತಿಯನ್ನು ಗಳಿಸಿದರು. ಅವರು ಇನ್ನೂ ಅನೇಕ ಪ್ರೇಕ್ಷಕರಿಗೆ ಕಟ್ಟಪ್ಪ ಎಂತಲೇ ಪರಿಚಿತರಾಗಿದ್ದಾರೆ.