Site icon Vistara News

Bachelor Party | ‘ಬ್ಯಾಚುಲರ್‌ ಪಾರ್ಟಿ‌’ಗೆ ಸಜ್ಜಾದರು ರಿಷಬ್‌, ದಿಗಂತ್‌ & ಅಚ್ಯುತ್‌ ಕುಮಾರ್..!‌

Bachelor Party

ಕನ್ನಡದಲ್ಲಿ ಹೊಸ ಬಗೆಯ ಪ್ರಯೋಗಗಳು ಹಾಗೂ ವಿಶೇಷ ಜಾನರ್‌ನ ಸಿನಿಮಾಗಳು ಹೆಚ್ಚಾಗುತ್ತಿವೆ. ಇದು ಸ್ಯಾಂಡಲ್‌ವುಡ್‌ನ ಗತ್ತನ್ನು ಮತ್ತಷ್ಟು ಗಟ್ಟಿಗೊಳ್ಳಿಸುತ್ತಿದೆ. ಇದೀಗ ಇಂತಹದ್ದೇ ಮತ್ತೊಂದು ಪ್ರಯೋಗಕ್ಕೆ ಕೈಹಾಕಿದ್ದಾರೆ ರಕ್ಷಿತ್‌ & ರಿಷಬ್‌. ಮೂವರ ಈ ಕಾಮಿಡಿ ಕಥೆಗೆ ಸಾಥ್‌ ನೀಡಲಿದ್ದಾರೆ ನಟ ದಿಗಂತ್‌, ಅಚ್ಯುತ್‌ ಕುಮಾರ್.‌ ಪ್ರೇಕ್ಷಕರನ್ನು ನಕ್ಕು, ನಲಿಸಲು ಬರುತ್ತಿರುವ ‘ಬ್ಯಾಚುಲರ್‌ ಪಾರ್ಟಿ‌’ (Bachelor Party)ಗೆ ರಕ್ಷಿತ್‌ ದುಡ್ಡು ಹಾಕಲಿದ್ದಾರೆ.

‘777 ಚಾರ್ಲಿ’ಯ ಮೂಲಕ ಕೈತುಂಬಾ ಕಾಸು ಮಾಡಿಕೊಂಡಿರುವ ರಕ್ಷಿತ್ ಶೆಟ್ಟಿ, ಮತ್ತೆ ಹೊಸ ಪ್ರಯೋಗಕ್ಕೆ ಸಾಥ್‌ ನೀಡುತ್ತಿದ್ದಾರೆ. ಕನ್ನಡದ ಮಟ್ಟಿಗೆ ಆಧುನಿಕ ಕಾಲಘಟ್ಟದಲ್ಲಿ ಹೊಸ ಬಗೆಯ ಸಿನಿಮಾಗಳನ್ನ ಕೊಟ್ಟವರು ರಿಷಬ್‌ ಮತ್ತು ರಕ್ಷಿತ್.‌ ಇದೇ ಜೋಡಿ ಈಗ ಮತ್ತೆ ಒಂದಾಗುತ್ತಿದ್ದು, ರಕ್ಷಿತ್‌ ಶೆಟ್ಟಿ ‘ಬ್ಯಾಚುಲರ್‌ ಪಾರ್ಟಿ‌’ ಚಿತ್ರವನ್ನ ನಿರ್ಮಿಸಲಿದ್ದಾರೆ.

‘ಬ್ಯಾಚುಲರ್‌ ಪಾರ್ಟಿ‌’
ಪರಂವಃ ಸ್ಟುಡಿಯೋಸ್ ಸದ್ಯಕ್ಕೆ ‘ಇಬ್ಬನಿ ತಬ್ಬಿದ ಇಳೆಯಲಿ’ ಎಂಬ ಟೈಟಲ್‌ ಅಡಿಯಲ್ಲಿ ಒಂದು ಸಿನಿಮಾ ನಿರ್ಮಿಸುತ್ತಿದೆ. ಜೊತೆಗೆ ‘ಬ್ಯಾಚುಲರ್ ಪಾರ್ಟಿ’ ಚಿತ್ರ ನಿರ್ಮಾಣದ ಹೊಣೆಯನ್ನೂ ರಕ್ಷಿತ್‌ ಹೊತ್ತಿದ್ದಾರೆ. ರಿಷಬ್‌, ದಿಗಂತ್‌, ಅಚ್ಯುತ್‌ ಕುಮಾರ್ ಜೋಡಿ ಸ್ಕ್ರೀನ್‌ ಮೇಲೆ ಮಾಡಲಿರುವ ಹೊಸ ಪ್ರಯೋಗ ಜನರಿಗೆ ಕಿಕ್‌ ಕೊಡುವುದು ಪಕ್ಕಾ. ಹೀಗಾಗಿಯೇ ‘ಬ್ಯಾಚುಲರ್‌ ಪಾರ್ಟಿ‌’ ಮೇಲೆ ಸಿಕ್ಕಾಪಟ್ಟೆ ಕ್ರೇಜ್‌ ಕ್ರಿಯೇಟ್‌ ಆಗಿದೆ.

ಹಾಲಿವುಡ್‌ ಪ್ರೇರೇಪಣೆ..?
ರಿಷಬ್‌ & ರಕ್ಷಿತ್‌ ತಂಡದ ‘ಬ್ಯಾಚುಲರ್‌ ಪಾರ್ಟಿ‌’ ಮೊದಲ ಪೋಸ್ಟರ್‌ ರಿಲೀಸ್‌ ಆಗಿದೆ. ಪೋಸ್ಟರ್‌ನಲ್ಲಿ ರಿಷಬ್‌, ದಿಗಂತ್‌, ಅಚ್ಯುತ್‌ ಸಖತ್‌ ಲುಕ್‌ ಕೊಟ್ಟಿದ್ದಾರೆ. ಮತ್ತೊಂದು ಕಡೆ ಈ ಸಿನಿಮಾಗೆ ಹಾಲಿವುಡ್‌ ಪ್ರೇರೇಪಣೆ ನೀಡಿದೆಯಾ? ಎಂಬ ಪ್ರಶ್ನೆ ಮೂಡುತ್ತಿದೆ. 1984ರಲ್ಲಿ ರಿಲೀಸ್‌ ಆಗಿದ್ದ ಟಾಮ್‌ ಹ್ಯಾಂಕ್ಸ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದ ಸಿನಿಮಾ ಬ್ಯಾಚುಲರ್‌ ಪಾರ್ಟಿ‌ ದೊಡ್ಡ ಸದ್ದು ಮಾಡಿತ್ತು. ಹಾಗೇ ಗಲ್ಲಾ ಪೆಟ್ಟಿಗೆಯಲ್ಲೂ ಸಿಕ್ಕಾಪಟ್ಟೆ ಹಣ ಗಳಿಸಿತ್ತು. ಈಗ ಕನ್ನಡದಲ್ಲಿ ಸೇಮ್‌ ಟೈಟಲ್‌ ಇಟ್ಟುಕೊಂಡು ಸಿನಿಮಾ ಮಾಡಲು ಹೊರಟಿದ್ದಾರೆ ರಿಷಬ್‌ & ರಕ್ಷಿತ್.

ಒಟ್ಟಾರೆ ಹೇಳುವುದಾದರೆ ಸ್ಯಾಂಡಲ್‌ವುಡ್‌ ‘ಬ್ಯಾಚುಲರ್‌ ಪಾರ್ಟಿ‌’ ಪ್ರೇಕ್ಷಕರನ್ನ ಹೊಟ್ಟೆ ಉಣ್ಣಾಗುವಂತೆ ನಗಿಸೋದು ಪಕ್ಕಾ. ಏಕೆಂದರೆ ರಿಷಬ್‌ ಶೆಟ್ಟರ ಸಿನಿಮಾದಲ್ಲಿ ನಗಲು ಯಾವುದೇ ಅಡ್ಡಿ ಇರುವುದಿಲ್ಲ. ಕಾಮಿಡಿ ಜಾನರ್‌ನ ಯಾವ ರೀತಿ ಜನರ ಮುಂದೆ ಇಡಬೇಕೆಂಬುದು ನಟ ರಿಷಬ್‌ ಶೆಟ್ಟಿಗೆ ಚೆನ್ನಾಗಿ ಗೊತ್ತು. ಹೀಗಾಗಿಯೇ ಅಭಿಮಾನಿಗಳು ಚಿತ್ರದ ಪೋಸ್ಟರ್‌ ಕಣ್ತುಂಬಿಕೊಂಡು ಕುತೂಹಲದಿಂದ ಕಾಯುತ್ತಿದ್ದಾರೆ.

ಇದನ್ನೂ ಓದಿ: Sudeep birthday | ಹುಟ್ಟುಹಬ್ಬದ ದಿನವೇ ಜಗ ಮೆಚ್ಚುವ ಕಾರ್ಯಕ್ಕೆ ಕಿಚ್ಚ ಸುದೀಪ್‌ ಸಿದ್ಧ!

Exit mobile version