Site icon Vistara News

BAFTA 2024: BAFTA ಅವಾರ್ಡ್‌: ʻಓಪನ್‌ಹೈಮರ್‌ʼ ಬೆಸ್ಟ್‌ ಫಿಲ್ಮ್‌; ಕ್ರಿಸ್ಟೋಫರ್ ನೋಲನ್ ಅತ್ಯುತ್ತಮ ನಟ!

BAFTAs full list of winners Oppenheimer is Best Film

ಬೆಂಗಳೂರು: ಈ ವರ್ಷದ ಗೋಲ್ಡನ್‌ ಗ್ಲೋಬ್ಸ್‌ ಪ್ರಶಸ್ತಿಯನ್ನು ʼಓಪನ್‌ಹೈಮರ್‌ʼ (Oppenheimer) ಹಾಗೂ ʼಪೂವರ್‌ ತಿಂಗ್ಸ್ʼ (Poor Things) ಚಿತ್ರಗಳು ಹಂಚಿಕೊಂಡಿತ್ತು. ಈಗಾಗಲೇ ಈ ಎರಡೂ ಸಿನಿಮಾಗಳು ಹಲವಾರು ಪ್ರಶಸ್ತಿಗಳನ್ನು ಬಾಚಿಕೊಂಡಿವೆ. ಇದೀಗ ʻಬ್ರಿಟಿಷ್ ಅಕಾಡೆಮಿ ಆಫ್ ಫಿಲ್ಮ್ ಆ್ಯಂಡ್ ಟೆಲಿವಿಷನ್ ಆರ್ಟ್ಸ್ʼಫಿಲ್ಮ್ ಅವಾರ್ಡ್ಸ್ 2024ರಲ್ಲಿ (BAFTA (British Academy of Film and Television Arts)) ನಿರ್ದೇಶಕ ಕ್ರಿಸ್ಟೋಫರ್ ನೋಲನ್ ಅವರ ಜೀವನಾಧಾರಿತ ಚಿತ್ರ ‘ಓಪನ್‌ಹೈಮರ್’ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ಚಲನಚಿತ್ರ ಮತ್ತು ಅತ್ಯುತ್ತಮ ನಾಯಕ ನಟ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಸಮಾರಂಭ ಲಂಡನ್‌ನ ರಾಯಲ್ ಫೆಸ್ಟಿವಲ್ ಹಾಲ್‌ನಲ್ಲಿ ನಡೆದಿತ್ತು.

ಪ್ರಶಸ್ತಿಗಳ ಪಟ್ಟಿ

ಅತ್ಯುತ್ತಮ ಚಿತ್ರ

ಅತ್ಯುತ್ತಮ ಬ್ರಿಟಿಷ್ ಚಲನಚಿತ್ರ

ದ ಝೋನ್‌ ಆಫ್‌ ಇಂಟರಸ್ಟ್‌ (The Zone of Interest – WINNER)

ಅತ್ಯುತ್ತಮ ಬರಹಗಾರ, ನಿರ್ದೇಶಕ


ಅರ್ಥ್ ಮಾಮಾ – ಸವನಾ ಲೀಫ್ (ಲೇಖಕ, ನಿರ್ದೇಶಕ, ನಿರ್ಮಾಪಕ), ಶೆರ್ಲಿ ಓ’ಕಾನ್ನರ್ (ನಿರ್ಮಾಪಕ), ಮೆಡ್ಬ್ ರಿಯೊರ್ಡಾನ್ (ನಿರ್ಮಾಪಕ)

ಅತ್ಯುತ್ತಮ ಸಾಕ್ಷ್ಯಚಿತ್ರ

20 ಡೇಯ್ಸ್‌ ಮಾರಿಯುಪೋಲ್‌

ಅತ್ಯುತ್ತಮ ಅನಿಮೇಟೆಡ್ ಚಿತ್ರ

ದ ಬಾಯ್ ಆ್ಯಂಡ್‌ ಹೆರಾನ್

ಅತ್ಯುತ್ತಮ ನಿರ್ದೇಶಕ

ಕ್ರಿಸ್ಟೋಫರ್ ನೋಲನ್, ಓಪನ್‌ಹೈಮರ್

ಅತ್ಯುತ್ತಮ ನಾಯಕ ನಟ

ಸಿಲಿಯನ್ ಮರ್ಫಿ, ಓಪನ್‌ಹೈಮರ್

ಅತ್ಯುತ್ತಮ ನಾಯಕ ನಟಿ

ಎಮ್ಮಾ ಸ್ಟೋನ್. ಪೂವರ್‌ ಥಿಂಗ್ಸ್

ಇಇ ರೈಸಿಂಗ್ ಸ್ಟಾರ್ ಪ್ರಶಸ್ತಿ (ಸಾರ್ವಜನಿಕರಿಂದ ಮತ)

ಮಿಯಾ ಮೆಕೆನ್ನಾ-ಬ್ರೂಸ್

ಇದನ್ನೂ ಓದಿ; Vishnu Naik: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ವಿಷ್ಣು ನಾಯ್ಕ ನಿಧನ

ಕ್ರಿಸ್ಟೋಫರ್‌ ನೊಲನ್‌ ನಿರ್ದೇಶನದ ಓಪನ್‌ಹೈಮರ್‌ ದೇಶದಲ್ಲಿ ಬಿಡುಗಡೆಗೊಂಡಿದ್ದಾಗ ಮಿಷನ್‌ ಇಂಪಾಸಿಬಲ್‌ 7ರ ದಾಖಲೆಯನ್ನು ಮುರಿದು ಹಾಕಿತ್ತು. ಓಪನ್‌ಹೈಮರ್‌ ಸಿನಿಮಾ (Oppenheimer Movie) ಭಾರತದಲ್ಲಿ ಬಿಡುಗಡೆಯಾದ ದಿನದಂದೇ 13 ಕೋಟಿ ರೂ.ಗೂ ಅಧಿಕ ಸಂಪಾದನೆಯನ್ನು ಮಾಡಿಕೊಂಡಿತ್ತು.ಓಪನ್‌ಹೈಮರ್‌ʼ ಸಿನಿಮಾವು ಪರಮಾಣು ಬಾಂಬ್‌ನ ಪಿತಾಮಹ ಎಂದು ಕರೆಯಲ್ಪಡುವ ಭೌತಶಾಸ್ತ್ರಜ್ಞ ಜೆ ರೆಬಾರ್ಟ್‌ ʻಓಪನ್‌ಹೈಮರ್‌ʼ ಅವರ ಜೀವನ ಚರಿತ್ರೆಯ ಕಥೆಯಾಗಿದೆ. ʻಓಪನ್‌ಹೈಮರ್‌ʼ ಅವರು ಎರಡನೇ ವಿಶ್ವ ಯುದ್ಧದ ಸಮಯದಲ್ಲಿ ಪರಮಾಣು ಶಸ್ತ್ರಾಸ್ತ್ರಗಳನ್ನು ಆವಿಷ್ಕರಿಸಲು ಸಹಾಯ ಮಾಡಿದ್ದರು. ಅವರ ಜೀವನದ ಕುರಿತಾಗಿ ಈಗ ಬಿಡುಗಡೆಯಾಗಿರುವ ಚಿತ್ರದಲ್ಲಿ ತೋರಿಸಲಾಗಿದೆ.

ನಟ ಸಿಲಿಯನ್ ಮರ್ಫಿ ಅವರು ಈ ಸಿನಿಮಾದಲ್ಲಿ ಓಪನ್‌ಹೈಮರ್‌ ಪಾತ್ರವನ್ನು ನಿರ್ವಹಿಸಿದ್ದಾರೆ. ಹಾಗೆಯೇ ನಟ ಮ್ಯಾಟ್‌ ಡ್ಯಾಮನ್‌ ಅವರು ಮ್ಯಾನ್‌ಹ್ಯಾಟನ್‌ ಪ್ರಾಜೆಕ್ಟ್‌ನ ಮುಖ್ಯಸ್ಥರಾಗಿದ್ದ ಜನರಲ್‌ ಲೆಸ್ಲಿ ಗ್ರೋವ್ಸ್‌ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಎಮಿಲಿ ಬ್ಲಂಟ್‌ ಅವರು ಓಪನ್ಹೈಮರ್ ಅವರ ಪತ್ನಿ ಕ್ಯಾಥರೀನ್‌ ಪಾತ್ರಕ್ಕೆ ಬಣ್ಣ ಹಚ್ಚಿದ್ದರು.

Exit mobile version